ಕಾಸರಗೋಡು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ 50ಜನರಿಗಿಂತ ಹೆಚ್ಚು ಮಂದಿ ಒಟ್ಟುಸೇರುವುದಕ್ಕೆ ಸರ್ಕಾರ ನಿಯಂತ್ರಣ ಹೇರಿದ್ದು, ಬಹುತೇಕ ಕಾರ್ಯಕ್ರಮಗಳ ಮೇಲೂ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯ ಪ್ರಸಿದ್ಧ ಮುಚ್ಚಿಲೋಟ್ ಭಗವತೀ ಕ್ಷೇತ್ರ ಸಹಿತ ವಿವಿಧೆಡೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ಜಾತ್ರಾ ಮಹೋತ್ಸವ ಸಹಿತ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದರೂ, ಸರ್ಕಾರದ ನಿರ್ದೇಶ ಪ್ರಕಾರ ನೈಮಿತ್ತಿಕ ಕಾರ್ಯಕ್ರಮಗಳಿಗಷ್ಟೆ ಸೀಮಿತಗೊಳಿಸಲಾಗುತ್ತಿದೆ.
ಇದೇ ಸಂದರ್ಭ ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡುತ್ತಿರುವ ಬೀವರೇಜಸ್ ನಿಗಮದ ಮೂಲಕ ಮಾರಾಟವಾಗುವ ಮದ್ಯ ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜನರು ಒಟ್ಟುಸೇರುತ್ತಿದ್ದರೂ, ಈ ಬಗ್ಗೆ ಸರ್ಕಾರ ಚಕಾರವೆತ್ತದಿರುವುದು ಸರ್ಕಾರದ ಇಬ್ಬಗೆ ನೀತಿ ಬಗ್ಗೆ ಜನತೆ ಪ್ರಶ್ನಿಸಲಾರಂಭಿಸಿದ್ದಾರೆ. ಇಂತಹ ಮದ್ಯಮಾರಾಟ ಕೇಂದ್ರಗಳಲ್ಲಿ ಕೋವಿಡ್-19 ವೈರಸ್ ವ್ಯಾಪಿಸಲು ಸಾಧ್ಯವಿದೆ. ಇದಕ್ಕಾಗಿ ರಾಜ್ಯದಲ್ಲಿ ತಾತ್ಕಾಲಿಕವಾಗಿ ಮದ್ಯ ಮಾರಾಟ ನಿಷೇಧಿಸುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಾ ಬಂದಿದ್ದರೂ, ಸರ್ಕಾರ ಈ ಮನವಿಗೆ ಕಿವಿಗೊಟ್ಟಿಲ್ಲ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸರ್ಕಾರಕ್ಕೆ ಅಬಕಾರಿ ಇಲಾಖೆಯತಹ ಕೆಲವೇ ಖಾತೆಗಳು ಆಸರೆಯಾಗಿದ್ದು, ಮದ್ಯಮಾರಾಟ ಸ್ಥಗಿತಗೊಳಿಸಬೇಕೆಂಬ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಇಷ್ಟು ಮಾತ್ರವಲ್ಲ, ಮದ್ಯಖರೀದಿ ಸಂದರ್ಭ ಜನದಟ್ಟಣೆ ಇಲ್ಲದಾಗಿಸಲು ಮದ್ಯಮಾರಾಟದ ಹೆಚ್ಚುವರಿ ಕೌಂಟರ್ ಸ್ಥಾಪನೆಗೂ ಚಿಂತನೆ ನಡೆಸಿದೆ.
ಇನ್ನು ಕರೊನಾ ವೈರಸ್ ಬಗ್ಗೆ ಮದ್ಯಪ್ರಿಯರಲ್ಲೂ ಜಾಗೃತಿ ಮೂಡಿಸುವ ಕೆಲಸವನ್ನೂ ಸರ್ಕಾರ ವತಿಯಿಂದ ನಡೆಸಲಾಗುತ್ತಿದೆ. ಮದ್ಯಕ್ಕಾಗಿ ಸರತಿ ಸಾಲಲ್ಲಿ ನಿಲ್ಲುವಾಗ, ಒಂದು ಮೀಟರ್ ಅಂತರ ಪಾಲಿಸುವಂತೆ ಹಾಗೂ ಮಾಸ್ಕ್ ಧರಿಸುವಂತೆಯೂ ಸೂಚಿಸಿದೆ. ಈ ಬಗ್ಗೆ ಕಾಞಂಗಾಡಿನ ಬೀವರೇಜಸ್ ನಿಗಮದ ಮದ್ಯಮಾರಾಟ ಕೇಂದ್ರದಲ್ಲಿ ಭಿತ್ತಿಪತ್ರವನ್ನೂ ಅಳವಡಿಸಿದೆ. ಮದ್ಯ ಮಾರಾಟ ಸ್ಥಗಿತಗೊಳಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗೆ ಮಣಿಯದೆ, ಹೆಚ್ಚಿನ ಕೌಂಟರ್ ಅಳವಡಿಸುವ ಮುಖ್ಯಮಂತ್ರಿಯ ಭರವಸೆಯ ಮಾತುಗಳಿಗೆ ಪಾನಪ್ರಿಯರು ತಲೆದೂಗಿದ್ದಾರೆ. ಕಾಞಂಗಾಡಿನ ಬೀವರೇಜಸ್‍ನಲ್ಲಿ ಅಳವಡಿಸಿರುವ ಭಿತ್ತಿಪತ್ರದಲ್ಲಿನ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ಸರ್ಕಾರ ತಮ್ಮ ಪರವಾಗಿರುವುದಕ್ಕೆ ಮನ್ಸಿನಲ್ಲೇ ಧನ್ಯವಾದವನ್ನೂ ಸಮರ್ಪಿಸಿದ್ದಾರೆ.
ಸರ್ಕಾರದಿಂದಲೇ ಮಾನದಂಡ ಉಲ್ಲಂಘನೆ?:
ಕೊರೊನಾದಂತಹ ಮಹಾಮಾರಿಯಿಂದ ದಡ ಸೇರಲು ರಾಜ್ಯದ ಜನತೆ ಕಸರತ್ತು ನಡೆಸುತ್ತಿದ್ದರೆ, ಸರ್ಕಾರ ಸ್ವತ: ರೂಪಿಸಿದ ಮಾನದಂಡ ಉಲ್ಲಂಘಿಸುವ ಮೂಲಕ ಎರಡು ಜಿಲ್ಲೆಗಳಲ್ಲಿ ಶೇಂದಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿರುವುದು ಜನರ ವ್ಯಾಪಕ ಅಸಮಧಾನಕ್ಕೆ ಕಾರಣವಾಯಿತು. ಎರ್ನಾಕುಳಂ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುಮಾರು 200ಮಂದಿಯನ್ನು ಸೇರಿಸಿಕೊಂಡು ಹರಾಜುಪ್ರಕ್ರಿಯೆ ನಡೆಸಲಾಗಿದೆ. ಕಾರ್ಯಕ್ರಮಗಳಿಗೆ ಗರಿಷ್ಠ 50ಮಂದಿಯನ್ನು ಪಾಲ್ಗೊಳ್ಳಿಸಿದರೆ ಸಾಕು ಎಂದು ಸರ್ಕಾರವೇ ಆದೇಶ ಹೊರಡಿಸಿ, ಇಷ್ಟೊಂದು ಮಂದಿಯನ್ನು ಸೇರಿಸಿ ಶೇಂದಿಹರಾಜು ಪ್ರಕ್ರಿಯೆ ನಡೆಸಿರುವುದನ್ನು ಪ್ರತಿಪಕ್ಷಗಳೂ ಪ್ರಶ್ನಿಸಿದೆ.