ಕಾಸರಗೋಡು: ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಸಮಿತಿಗಳನ್ನು ತುರ್ತಾಗಿ ಬಲಪಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‍ಬಾಬು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕರೊನಾ ನಿಯಂತ್ರಣ ಕೊಠಡಿಯಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿರುವ ಪ್ರತ್ಯೇಕ ದಳಗಳು ಮನೆಗಳಲ್ಲಿ ನಿಗಾದಲ್ಲಿರುವ ಮಂದಿಯನ್ನು ಭೇಟಿ ಮಾಡಿ ಅವರ ಮಾಹಿತಿ ಸಂಗ್ರಹಿಸಿ ಸಮಿತಿಗೆ ಸಲ್ಲಿಸಬೇಕು. ಜಿಲ್ಲೆಯಲ್ಲಿ 776 ಜನಜಾಗೃತಿ ಸಮಿತಿಗಳು ರಚಿಸಲಾಗಿದ್ದು, ಚಟುವಟಿಕೆ ನಡೆಸುತ್ತಿವೆ. ಈ ಸಮಿತಿಗಳಲ್ಲಿ ಆರೋಗ್ಯ ವಲಯಗಳ ಕಾರ್ಯಕರ್ತರು,ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು, ಜನಮೈತ್ರಿ ಪೆÇಲೀಸರು ಮೊದಲಾದವರು ಇದ್ದಾರೆ. ಮನೆಗಳಲ್ಲಿ ನಿಗಾದಲ್ಲಿರುವವರು ಆರೋಗ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ನೀಡುವ ಕಟ್ಟುನಿಟ್ಟಿನ ಆದೇಶ ಉಲ್ಲಂಘಿಸಿ,ಮನೆಯಿಂದ ಹೊರಗಿಳಿಯುವುದಿದ್ದರೆ ಈ ಮಾಹಿತಿಯನ್ನು ತಕ್ಷಣ ಕೊರೊನಾ ನಿಯಂತ್ರಣ ಘಟಕಕ್ಕೆ ನೀಡಬೇಕು. ವಿದೇಶದಿಂದ ಊರಿಗೆ ಮರಳಿದ ಮಂದಿಯಲ್ಲಿ ರೋಗಲಕ್ಷಣ ಹೊಂದಿರುವವರಿಗಾಗಿ ಪ್ರತ್ಯೇಕ ಸೌಲಭ್ಯ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ರೋಗಲಕ್ಷಣ ಹೊಂದಿರುವವರಿಗೆ ಹೆಚ್ಚುವರಿ ಸೌಲಭ್ಯಕೋವಿಡ್ 19ರೋಗಲಕ್ಷಣಹೊಂದಿದವರಿಗಾಗಿ ಹೆಚ್ಚುವರಿ ಸೌಲಭ್ಯ ಒದಗಿಸಲು ಜಿಲ್ಲಾ ಮಟ್ಟದ ಅವಲೋಕನ ಸಮಿತಿ ನಿರ್ಧರಿಸಿದೆ.ಲಕ್ಷ್ಮಿ ಮೇಘನ್ ಆಸ್ಪತ್ರೆ , ಅರಮನ ಆಸ್ಪತ್ರೆ, ಪ್ರತಿ ಬ್ಲೋಕ್ ಇದಕ್ಕಾಗಿ ವಸಿಕೊಳ್ಳಲಾಗಿದೆ. ವಿದೇಶದಿಂದ ಊರಿಗೆ ಮರಳಿದವರಲ್ಲಿ ರೋಗಲಕ್ಷಣ ಇಲ್ಲದೇ ಇದ್ದವರಿಗೆ ಕಾಸರಗೋಡು ಜನರಲ್ ಆಸ್ಪತ್ರೆ ಬಳಿಯ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಬಳಿಯ ಬಲ್ಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವ್ಯವಸ್ಥೆ ಏರ್ಪಡಿಸಲಾಗಿದೆ.
ಸೂಕ್ಷ್ಮ ತಪಾಸಣೆ:
ಕೋವಿಡ್ 19 ಹರಡುವಿಕೆ ತಡೆಯುವ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯ ಗಡಿ ಪ್ರದೇಶಗಳ ಚೆಕ್ ಪೆÇೀಸ್ಟ್‍ಗಳಲ್ಲಿ ಕಡ್ಡಾಯ ಸೂಕ್ಷ್ಮ ತಪಾಸಣೆ ನಡೆಯಲಿದೆ. ವೈದ್ಯರು, ಜ್ಯೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್‍ಗಳು, ಪೆÇಲೀಸರನ್ನೊಳಗೊಂಡ ತಂಡ ತಪಾಸಣೆ ನಡೆಸುವರು. ಮಂಗಳೂರು ಮೂಲಕ ಕೇರಳಕ್ಕೆ ಬರುವವರನ್ನು ಹೆಚ್ಚುವರಿ ತಪಾಸಣೆಗೊಳಪಡಿಸಲಾಗುವುದು. ಇದಕ್ಕಾಗಿ ಹೆಚ್ಚುವರಿ ಸೌಲಭ್ಯವನ್ನೂ ಏರ್ಪಡಿಸಲಾಗುವುದು. ಮಂಗಳೂರು ವಿಮಾನನಿಲ್ದಾಣಗಳಲ್ಲಿ ಒಬ್ಬ ವಿಶೇಷ ಅಧಿಕಾರಿಯನ್ನೂನೇಮಿಸಲಾಗಿದೆ.
ಪೆÇಲೀಸ್ ನಿಗಾ:
ಉತ್ಸವಗಳು, ಆರಾಧನಾಲಯಗಳ ಚಟುವಟಿಕೆಗಳು ಪೆÇಲೀಸರ ನಿಗಾದಲ್ಲಿ ನಡೆಯುತ್ತಿವೆ. ಹೆಚ್ಚು ಜನ ಭಾಗವಹಿಸುವುದಿಲ್ಲ ಎಂಬ ಖಾತ್ರಿ ನಿಟ್ಟಿನಲ್ಲಿ ಪೆÇಲೀಸರು ನಿಗಾ ವಹಿಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ಪ್ರತ್ಯೇಕ ವಾಹನದಲ್ಲಿ ತಲಪಾಡಿಗೆ ಮಂಗಳೂರು ವಿಮಾನ ನಿಲ್ದಾಣ ಮೂಲಕ ವಿದೇಶದಿಂದ ಊರಿಗೆ ಮರಳುವವರಿಗೆ ಕರ್ನಾಟಕ ಸರ್ಕಾರ ಪ್ರತ್ಯೇಕ ವಾಹನಗಳಲ್ಲಿ ತಲಪ್ಪಾಡಿ ವರೆಗೆ ಕರೆತರಲಾಗುವುದು. ಅಲ್ಲಿ ಇವರನ್ನು ಪ್ರತ್ಯೇಕ ಮೆಡಿಕಲ್ ತಂಡ ತಪಾಸಣೆಗೊಳಪಡಿಸಲಿದೆ. ನಂತರ ರೋಗಲಕ್ಷಣ ಹೊಂದಿರುವವರನ್ನು ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆತರಲಾಗುವುದು. ರೋಗ ಲಕ್ಷಣ ಇಲ್ಲದೇ ಇರುವವರನ್ನು ಕೆ.ಎಸ್.ಆರ್.ಟಿ.ಸಿ. ಬಸ್ ಮೂಲಕ ಕಾಸರಗೋಡಿಗೆ ತೆರಳುವ ವ್ಯವಸ್ಥೆ ಮಾಡಲಾಗುವುದು. ತಲಪ್ಪಾಡಿಯಿಂದ ಖಾಸಗಿ ವಾಹನದಲ್ಲಿ ಊರಿಗೆ ತೆರಳಲು ಇಚ್ಚಿಸುವವರು ತಲಪ್ಪಾಡಿ ಕೌಂಟರ್‍ನಿಂದ ದೃಡೀಕರಣ ಪತ್ರ ಸಲ್ಲಿಸಬೇಕಾಗುತ್ತದೆ. ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಬಾಬು, ಜಿಲ್ಲಾ ವೈದ್ಯಧಿಕಾರಿಡಾ.ಎ.ವಿ.ರಾಮದಾಸ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಉಪಸ್ಥಿತರಿದ್ದರು.

