ನವದೆಹಲಿ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಮನಿರ್ದೇಶನ ಮಾಡಿದ್ದಾರೆ.
ಗೊಗೋಯ್ 2018 ಅಕ್ಟೋಬರ್ 3 ರಿಂದ 2019ರ ನವೆಂಬರ್ 17 ವರೆಗೆ ಭಾರತದ 46ನೇ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ನವೆಂಬರ್ 9, 2019ರಲ್ಲಿ ಇವರ ನೇತೃತ್ವದಲ್ಲಿನ ಪಂಚ ನ್ಯಾಯಾಧೀಶರ ಪೀಠ ಶತಮಾನಗಳಿಂದ ಬಾಕಿ ಉಳಿದಿದ್ದ ಅಯೋಧ್ಯಾ ವಿವಾದವನ್ನು ಬಗೆಹರಿಸಿತ್ತು. ಗೊಗೊಯ್ ಕಚೇರಿ ತೊರೆಯುವ ಮುನ್ನ, ಭಾರತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ಸಂಸ್ಥೆಯನ್ನು ಕೆಳಮಟ್ಟಕ್ಕೆ ಕೊಂಡೊಯ್ಯಲು ತೀವ್ರವಾಗಿ ಬಳಕೆಯಾಗಲಿವೆ ಎಂದು ಹೇಳಿಕೆ ನೀಡಿದ್ದರು.
ತಮ್ಮದೊಂದು ಭಾಗವು ಯಾವಾಗಲೂ ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ಉಳಿಯುತ್ತದೆ ಎಂದು ಗೊಗೋಯ್ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ನಲ್ಲಿ ಬಿಟ್ಟುಹೋದ ಪತ್ರದಲ್ಲಿ ತಿಳಿಸಿದ್ದರು.


