HEALTH TIPS

ಕರೊನಾ ಇಂದು ಮತ್ತೆ ಒಬ್ಬರಿಗೆ ಸೋಂಕು-ರಾಜ್ಯದಲ್ಲಿ ಆರು

 
        ಕಾಸರಗೋಡು: ವಿಶ್ವದಾದ್ಯಂತ ವೇಗದಲ್ಲಿ ಕರೊನಾ ವೈರಸ್ ಸೋಂಕು ಹರಡುತ್ತಿರುವಂತೆ ಕೇರಳದಲ್ಲಿ ಮಾ.28 ರಂದು ಆರು ಮಂದಿಗೆ ಕರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಒಬ್ಬರಿಗೆ ಕರೊನಾ ಸೋಂಕು ವೈರಸ್ ದೃಢಗೊಂಡಿದೆ.
        ತಿರುವನಂತಪುರ ಜಿಲ್ಲೆಯಲ್ಲಿ - 2, ಕೊಲ್ಲಂ, ಪಾಲ್ಘಾಟ್, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಕರೊನಾ ವೈರಸ್ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಒಟ್ಟು ರಾಜ್ಯದಲ್ಲಿ ಸೋಂಕು ಬಾಧಿತ 165 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಮಾತ್ರ 148 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
       ರಾಜ್ಯದಲ್ಲಿ ಒಟ್ಟು 134370 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 133750 ಮಂದಿ ಮನೆಗಳಲ್ಲೂ, 620 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಒಟ್ಟು 6067 ಸ್ಯಾಂಪಲ್ ಪರಿಶೋಧನೆಯಲ್ಲಿ 5276 ಮಂದಿ ಫಲಿತಾಂಶ ನೆಗೆಟಿವ್ ಆಗಿದೆ. ನಾಲ್ವರು ವಿದೇಶಿಯರು ಕರೊನಾ ವೈರಸ್ ಸೋಂಕಿನಿಂದ ಮುಕ್ತರಾಗಿದ್ದಾರೆ.
    ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 6511 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 127 ಮಂದಿ ಆಸ್ಪತ್ರೆಗಳಲ್ಲೂ, 6384 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ.  ಕರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಂಟ್ರೆನ್ಸ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯ£ಕಿಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೋಟ್ಟಯಂನಲ್ಲಿ ಇಬ್ಬರು, ತಿರುವನಂತಪುರ ಮತ್ತು ಎರ್ನಾಕುಳಂ ಜಿಲ್ಲೆಯಲ್ಲಿ ತಲಾ ಒಬ್ಬರು ರೋಗ ಮುಕ್ತರಾಗಿದ್ದಾರೆ.
       ಶೀಘ್ರದಲ್ಲಿ ಫಲಿತಾಂಶ ಲಭಿಸುವ ರ್ಯಾಪಿಡ್ ಟೆಸ್ಟ್‍ಗಳನ್ನು ನಡೆಸಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವೆಂಟಿಲೇಟರ್, ಎನ್ 95 ಮಾಸ್ಕ್, ಆಕ್ಸಿಜನ್ ಸಿಲಿಂಡರ್, ಕೈ ಕವಚಗಳು, ಬಯೋ ಮೆಡಿಕಲ್ ಉಪಕರಣಗಳ ತಯಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ. 1059 ಸಮುದಾಯ ಅಡುಗೆ ಕೋಣೆ ಆರಂಭಿಸಲಾಗಿದೆ. 52,480 ಮಂದಿಗೆ ಕಮ್ಯೂನಿಟಿ ಕಿಚನ್‍ಗಳ ಮೂಲಕ ಆಹಾರ ವಿತರಿಸಲಾಗಿದೆ.  41826 ಮಂದಿಗೆ ಉಚಿತವಾಗಿ ಆಹಾರ ಪೆÇಟ್ಟಣ ನೀಡಲಾಯಿತು. 
      ಲಾಕ್ ಡೌನ್ ಆದೇಶ ಉಲ್ಲಂಘನೆ:  34 ಪ್ರಕರಣಗಳು ದಾಖಲು!       
           ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ  ಕಾಸರಗೋಡು ಜಿಲ್ಲೆಯಲ್ಲಿ 34 ಪ್ರಕರಣಗಳನ್ನು ವಿವಿಧ ಪೆÇಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ. 55 ಮಂದಿಯನ್ನು ಬಂ„ಸಲಾಗಿದೆ. 18 ವಾಹನಗಳನ್ನು ವಶಪಡಿಸಲಾಗಿದೆ.
        ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ 5, ಕುಂಬಳೆ ಠಾಣೆಯಲ್ಲಿ 1, ಬದಿಯಡ್ಕದಲ್ಲಿ 3, ಅಂಬಲತ್ತರದಲ್ಲಿ 1, ಬೇಡಗಂನಲ್ಲಿ 1, ಚಿತ್ತಾರಿಕಲ್ಲ್‍ನಲ್ಲಿ 2, ಮಂಜೇಶ್ವರದಲ್ಲಿ 1, ಚೀಮೇನಿಯಲ್ಲಿ 1, ಚಂದೇರಾದಲ್ಲಿ 3, ಮೇಲ್ಪರಂಬದಲ್ಲಿ 1, ರಾಜಪುರಂನಲ್ಲಿ 2, ಆದೂರಿನಲ್ಲಿ 1, ವೆಳ್ಳರಿಕುಂಡ್‍ನಲ್ಲಿ 2, ಬೇಕಲದಲ್ಲಿ 7, ಕಾಸರಗೋಡು ಪೆÇಲೀಸ್ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ.
      ಈ ವರಗೆ ಲಾಕ್ ಡೌನ್ ಆದೇಶ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 172ಪ್ರಕರಣಗಳು ದಾಖಲಾಗಿವೆ. 206 ಮಂದಿಯನ್ನು ಬಂಧಿಸಲಾಗಿದೆ. 109 ವಾಹನಗಳನ್ನು ವಶಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries