ಕಾಸರಗೋಡು: ಮನೆಗಳಲ್ಲೇ ನಿಗಾದಲ್ಲಿರಬೇಕಾದ ಆದೇಶ ಹೊಂದಿರುವವರು ಹೊರಗಡೆ ಬಂದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಐ.ಜಿ. ವಿಜಯ್ ಸಖಾರೆ ಎಚ್ಚರಿಕೆ ನೀಡಿದ್ದಾರೆ.
ಕಾಸರಗೋಡು ಜಿಲ್ಲಾ ಪೆÇಲೀಸ್ ಕೇಂದ್ರದಲ್ಲಿ ಇಂದು(ಶುಕ್ರವಾರ) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿಗಾದಲ್ಲಿರಬೇಕಾದವರು ಹೊರಬಂದರೆ ರಾಜ್ಯ ಸರಕಾರ ಅವರನ್ನು ಪ್ರತ್ಯೇಕ ನಿಗಾ ಸೌಲಭ್ಯಕ್ಕೆ ವರ್ಗಾಯಿಸಲಿದೆ. ಈಗಾಗಲೇ ಹೀಗೆ ಕೆಲವರನ್ನು ವರ್ಗಾಯಿಸಲಾಗಿದೆ. ಲಾಕ್ ಡೌನ್ ಆದೇಶ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ ಕೇಸು ದಾಖಲಾತಿ ಕಡಿಮೆಯಾಗಿದೆ. ಜನತೆ ಈ ಬಗ್ಗೆ ಜಾಗೃತರಾಗಿದ್ದಾರೆ ಎಂಬುದಕ್ಕೆ ಇದು ನಿದರ್ಶನ. ಈ ಕಾರಣದಿಂದ ಮನೆಯಿಂದ ಹೊರಗಿಳಿಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಈ ಕಾರಣದಿಂದ ಹೆಚ್ಚುವರಿ ಪೆÇಲೀಸ್ದಳದ ಅಗತ್ಯ ಜಿಲ್ಲೆಗೆ ಇಲ್ಲ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಕಚಿತಗೊಂಡವರ ಸಂಪೂರ್ಣ ಸಂಪರ್ಕ ಪಟ್ಟಿ ಸಿದ್ಧಪಡಿಸಿ ಅವರನ್ನು ಕಠಿಣ ನಿಗಾದಲ್ಲಿ ಇರಿಸಲಾಗುವುದು. ರೋಗಬಾಧಿತ ಸಂಪರ್ಕದಿಂದ ಸೋಂಕಿಗೆ ಒಳಗಾದವರ ಮೂಲಕ ರೋಗ ಹರಡುವುದನ್ನು ನಿಯಂತ್ರಿಸುವ ಕ್ರಮಗಳ ಅಂಗವಾಗಿ ಇದನ್ನು ನಡೆಸಲಾಗುತ್ತಿದೆ. ಕೋವಿಡ್-19ರ ಹರಡುವಿಕೆ ಪ್ರತಿರೋಧ ಚಟುವಟಿಕೆಗಳಲ್ಲಿ ಪೆÇಲೀಸ್ ಸಿಬ್ಬಂದಿ ಆರೋಗ್ಯ ಇಲಾಖೆಯೊಂದಿಗೆ ಸ್ವಂತ ಆರೋಗ್ಯವನ್ನೂ ಮರೆತು ಗರಿಷ್ಠ ಮಟ್ಟದಲ್ಲಿ ದುಡಿಯುತ್ತಿದ್ದಾರೆ. ಇದೊಂದು ಸಾಮಾಜಿಕ ದುರಂತ ಎಂಬುದನ್ನು ಮನಗಂಡು ಸಾರ್ವಜನಿಕರೂ ಸಹಕಾರ ನೀಡಬೇಕು ಎಂದವರು ಆಗ್ರಹಿಸಿದರು.
ಶುಕ್ರವಾರ(ಮಾ.27) ರಂದು ಕೋವಿಡ್-19 ಸೋಂಕು ಖಚಿತಗೊಂಡವರ ಸಂಖ್ಯೆ ಜಿಲ್ಲೆಯಲ್ಲಿ 34 ಆಗಿದ್ದು, ಇವರಲ್ಲಿ ಬಹುತೇಕ ಮಂದಿ ವಿದೇಶಗಳಿಂದ ಬಂದವರು. ಈ ಕಾರಣದಿಂದ ಸಾರ್ವಜನಿಕರು ಭೀತಿಗೊಳಗಾಗಬೇಕಿಲ್ಲ. ನಿಗಾದಲ್ಲಿರಬೇಕಾದವರು ಒಂದು ಕೊಠಡಿಯಲ್ಲಿ ಏಕಾಂಗಿಯಾಗಿ ವಾಸಿಸಬೇಕು. ಯಾವ ಕಾರಣಕ್ಕೂ ಹೊರಬರಕೂಡದು ಎಂದು ಐ.ಜಿ. ತಿಳಿಸಿದರು.
ಪತ್ರಿಕಾಗೋಷ್ಠಿ ವೇಳೆ ಕೋಯಿಕೋಡ್ವಲಯ ಐ.ಜಿ. ಅಶೋಕ್ ಯಾದವ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಕಮ್ಯೂನಿಕೇಷನ್ ಎಸ್.ಪಿ. ಡಿ.ಶಿಲ್ಪಾ ಜೊತೆಗಿದ್ದರು.

