HEALTH TIPS

ಭಾರತದಲ್ಲಿ ಕೋವಿಡ್-19 ಗೆ ಕಾರಣವಾಗಿರುವ ವೈರಸ್ ನ ಮೊದಲ ಚಿತ್ರ ಹೀಗಿದೆ


        ಪುಣೆ: ಕೋವಿಡ್-19 ರೋಗವನ್ನು ಸೃಷ್ಟಿಸುತ್ತಿರುವ ವೈರಸ್ ನ ಮೊದಲ ಚಿತ್ರವನ್ನು ಭಾರತೀಯ ವಿಜ್ಞಾನಿಗಳು ಪ್ರಕಟಿಸಿದ್ದಾರೆ.
          ಪುಣೆಯ ವಿಜ್ಞಾನಿಗಳು ಟ್ರಾನ್ಸ್ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನ ಸಹಾಯದಿಂದ ಸೆರೆ ಹಿಡಿದಿರುವ ಈ ವಿಡಿಯೋ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ಪ್ರಕಟವಾಗಿದೆ. ಜ.30, 2020 ರಂದು ದೇಶದಲ್ಲಿ ವರದಿಯಾಗಿದ್ದ, ದೃಢಪಟ್ಟಿದ್ದ ಮೊದಲ ಕೊರೋನಾ ವೈರಸ್ ಪೀಡಿತರ ಗಂಟಲು ದ್ರವ (ಸ್ವ್ಯಾಬ್)ದಿಂದ ಈ ವೈರಾಣು ಚಿತ್ರವನ್ನು ಸೆರೆಹಿಡಿಯಲಾಗಿದೆ. ಭಾರತಕ್ಕೆ ಆಗಮಿಸಿದ ಕೇರಳ ಮೂಲದ, ವುಹಾನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ತಗುಲಿತ್ತು.
       ಕೋವಿಡ್-19 ರೋಗ ಸೃಷ್ಟಿಸುವ ವೈರಾಣು ಸಾರ್ಸ್-ಸಿಒವಿ-2 ವೈರಾಣುಗಳು  ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (ಮರ್ಸ್-ಕೋವಿ) ಮತ್ತು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ (ಎಸ್‍ಎಆರ್ ಎಸ್-ಕೋವಿ) ವೈರಾಣುಗಳನ್ನು ಹೋಲುತ್ತಿದೆ.
       ಈ ವೈರಾಣುಗಳು ಪೆÇ್ರಟಿನ್ ರಿಸೆಪ್ಟರ್ ಗಳನ್ನು, ಶುಗರ್ ರಿಸೆಪ್ಟಾರ್ ಗಳೂ ಸೇರಿ ವಿವಿಧ ರಿಸೆಪ್ಟಾರ್ ಗಳನ್ನು ಗುರುತಿಸುವ ಸಾಮಥ್ರ್ಯ ಹೊಂದಿವೆ ಈ ಚಿತ್ರದಿಂದ ವೈರಾಣುವಿನ ಬಗ್ಗೆ ಹೆಚ್ಚಿನ ಸಂಶೋಧನೆ ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries