HEALTH TIPS

ಶಿಕ್ಷಣ ವಲಯದ ಪ್ರಜಾಪ್ರಭುತ್ವ ನೀತಿ ಜ್ಞಾನದ ಪ್ರಜಾಸತ್ತೆ ನೀತಿ: ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್-ವಿವಿ ಪದವಿ ಪ್ರದಾನ ಸಮಾರಂಭದಲ್ಲಿ ಅಭಿಮತ

   
       ಕಾಸರಗೋಡು:  ಶಿಕ್ಷಣ ವಲಯದ ಪ್ರಜಾಪ್ರಭುತ್ವ ನೀತಿ ಜ್ಞಾನದ ಪ್ರಜಾಸತ್ತೆ ನೀತಿಯಾಗಿದೆ ಎಂದು ಕೇರಳ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಆಗ್ರಹಿಸಿದರು. 
       ಪೆರಿಯ ಕೇಂದ್ರೀಯ ವಿವಿಯಲ್ಲಿ ಸೋಮವಾರ ನಡೆದ 4ನೇ ಪದವಿಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
            ಸಾಕ್ಷರತೆಯ ಮಟ್ಟದ ಹೆಚ್ಚಿದಂತೆ ಸಮಾಜ ಜಾಗೃತಿಯೂ ಮತ್ತು ಶಿಕ್ಷಣವನ್ನು ಜನಪರಗೊಳಿಸುವ ನೀತಿ ರಾಜ್ಯ ಈ ವಲಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉನ್ನತಿಯನ್ನು ಸಾಧಿಸಿದೆ. ಎಲ್ಲರಿಗೂ ಶಿಕ್ಷಣ ಲಭಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಗರಿಷ್ಠ ಮಟ್ಟದ ಯತ್ನ ನಡೆಸುತ್ತಿದೆ. ಬದಲಾಗುತ್ತಿರವ ಕಾಲಮಾನಕ್ಕೆ ತಕ್ಕ ಶಿಕ್ಷಣವನ್ನು ಒದಗಿಸುವಲ್ಲಿ ಭಾರತೀಯ ಶಿಕ್ಷಣ ಕ್ರಮ ಪರ್ಯಾಪ್ತವಾಗಿದೆ. ಈ ನಿಟ್ಟಿನಲ್ಲಿ ನಾಳೆಯ ಸಮಾಜಕ್ಕಾಗಿ ಸ್ವಯ ನವೀಕರಣಕ್ಕೆ ಪ್ರತಿ ವಿದ್ಯಾರ್ಥಿ ಸಿದ್ಧನಾಗಬೇಕು ಎಂದವರು ತಿಳಿಸಿದರು.                       
ಶಿಕ್ಷಣ ಕೇವಲ ಜೀವನೋಪಾಯಕ್ಕಿರುವ ವೇದಿಕೆಯಲ್ಲ. ಅದು ಶಿಕ್ಷಣದ ಗುರಿಗಳಲ್ಲಿ ಒಂದು ಮಾತ್ರ. ಮನಸ್ಸಿನಲ್ಲಿ ತುಂಬಿಕೊಂಡ ಅಜ್ಞಾನದ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕಿನಲ್ಲಿ ಮುನ್ನಡೆಸುವ ಮಾರ್ಗ ಶಿಕ್ಷಣವಾಗಿದೆ. ಮಾನವ ಇವತ್ತು ಹೊಸ ಹೊಸ ವಿದ್ಯೆಗಳನ್ನು ಕಲಿಕೆ ನಡೆಸುತ್ತಿದ್ದಾನೆ. ಎಲ್ಲವನ್ನೂ ತಾನು ಬಲ್ಲೆ ಎಂಬವನಿಗೆ ನೂತನವಾಗಿ ಕಲಿಯಲು ಇರುವುದಿಲ್ಲ. ಅನೇಕ ಶತಮಾನಗಳಿಂದ ಈ ನಿಟ್ಟಿನಲ್ಲಿ ಶೈಶವಾವಸ್ಥೆಯಲ್ಲೇ ನಾವು. ಇಂದು ಬದಲಾಗಿ ದೇಶದ ಸ್ವಂತ ಸಂವಿಧಾನ ಮತ್ತು ಪರಮಾಧಿಕಾರ ಹೊಂದಿದ್ದೇವೆ. ನಮ್ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿರುವವರಾಗುವುದರ ಜೊತೆಗೆ ಕರ್ತವ್ಯಗಳ ಕುರಿತೂ ಸದಾ ಎಚ್ಚೆತ್ತುಕೊಂಡವರಾಗಬೇಕು. ಪ್ರತಿಯೊಬ್ಬರೂ ತಮ್ಮತ್ಮಮ ಕರ್ತವ್ಯವನ್ನು ನಡೆಸಿದರೆ ಹಕ್ಕುಗಳು ಸಂರಕ್ಷಣೆಯಾಗುತ್ತವೆ. ಪಠ್ಯ ಪುಸ್ತಕಕ್ಕೇ ಸೀಮಿತವಾಗಿರುವ ಕಲಿಕೆ ಸಮಾಜಕ್ಕೆ, ವ್ಯಕ್ತಿಗೆ ಪ್ರಯೋಜನಕ್ಕೆ ಬಾರದು. ಕಲಿತ ವಿಚಾರಗಳು ಬದುಕಿನಲ್ಲಿ ಬಳಕೆಯಾದಾಗ ಮಾತ್ರ ಜೀವನ ಯಶಸ್ವಿಯಾಗಲು ಸಾಧ್ಯ ಎಂದವರು ವಿವರಿಸಿದರು.     
     ಸಮಾಜದ ಬಗ್ಗೆ ವಿದ್ಯಾರ್ಥಿಗಳಿಗೆ ಬದ್ಧತೆ ಇರಬೇಕು. ಸಮಾಜದ ಒಗ್ಗಟ್ಟಿನ ಫಲವಾಗಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಕೇಂದ್ರೀಯ ವಿವಿ ವಿದ್ಯಾರ್ಥಿಗಳಿಗೆ ದೊರೆತಿದೆ. ಈ ಹಿನ್ನೆಲೆಯನ್ನು ಜಾಗೃತಿಯಿಂದ ಸದಾ ನೆನಪಿಸಿಕೊಳ್ಳಬೇಕು ಎಂದವರು ಹೇಳಿದರು.
    ಜ್ಯಾರಿಯಲ್ಲಿ ಕೇಂದ್ರಿಯ ವಿವಿಯಲ್ಲಿ ಡಿಸ್ಟಿಂಕ್ಷನ್ ಸಹಿತ ತೇರ್ಗಡೆಹೊಂದಿರುವವರಲ್ಲಿ ಶೇ 65 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ತ್ರಿಶೂರು ಕೃಷಿ ವಿವಿಯಲ್ಲೂ ಡಿಸ್ಟಿಂಕ್ಷನ್ ಸಹಿತ ತೇರ್ಗಡೆಹೊಂದಿರುವವರಲ್ಲಿ ಶೇ 90 ಮಂದಿ ಮತ್ತು ಕೊಚ್ಚಿ ಮೀನುಗಾರಿಕೆ ವಿವಿಯಲ್ಲಿ ಡಿಸ್ಟಿಂಕ್ಷನ್ ಸಹಿತ ತೇರ್ಗಡೆಹೊಂದಿರುವವರಲ್ಲಿ ಶೇ 100 ಮಂದಿ ವಿದ್ಯಾರ್ಥಿನಿಯರೇ ಆಗಿದ್ದಾರೆ. ಇದು ಶಿಕ್ಷಣ ರಂಗದ ಗಮನಾರ್ಹ ಮುನ್ನಡೆ. ಕೇವಲ 11 ವರ್ಷದ ವಯೋಮಾನ ಹೊಂದಿರುವ ಪೆರಿಯ ಕೇಂದ್ರೀಯ ವಿವಿಯಲ್ಲಿ ಇನ್ನೂ ಹೆಚ್ಚಿನ ಔನ್ನತ್ಯ ಗಳಿಕೆ ಸಾಧ್ಯವಿದೆ. ವಿದ್ಯಾರ್ಥಿಗಳ, ಹೆತ್ತವರ ಜೊತೆಗೆ ಸಾರ್ವಜನಿಕ ಬೆಂಬಲವೂ ಈ ನಿಟ್ಟಿನಲ್ಲಿ ಅಗತ್ಯ ಎಂದವರು ಹೇಳಿದರು.
        ವಿವಿ ಕುಲಪತಿ ಪೆÇ್ರ.ಎಸ್.ವಿ.ಶೇಷಗಿರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನೆ ಪೂರ್ಣಗೊಳಿಸಿದ ಪಿ.ಹೆಚ್.ಡಿ.ಯ, ಸ್ನಾತಕೋತ್ತರ ಪದವಿ, ಪದವಿಯ 610 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು. ಉಪಕುಲಪತಿ ಡಾ.ಕೆ.ಜಯಪ್ರಸಾದ್, ರೆಜಿಸ್ತ್ರಾರ್ ಡಾ.ಎ.ರಾಧಾಕೃಷ್ಣನ್ ನಾಯರ್, ಹಣಕಾಸು ಅಧಿಕಾರಿ ಡಾ.ಬಿ.ಆರ್.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಡಾ.ಜಿ.ಗೋಪಕುಮಾರ್ ಸ್ವಾಗತಿಸಿದರು. ಪರೀಕ್ಷೆ ನಿಯಂತ್ರಣ ಅಧಿಕಾರಿ ಡಾ.ಎಂ.ಮುರಳೀಧರನ್ ನಂಬ್ಯಾರ್ ವಂದಿಸಿದರು.   
        ವಿಶೇಷತೆ::
  ಸರಳತೆಯಿಂದ ಕೂಡಿದ ಸಮಾರಂಭ:
        ಕೇರಳ ಕೇಂದ್ರೀಯ ವಿವಿಯ ಈ ಬಾರಿಯ ಪದವಿ ಪ್ರದಾನ ಸಮಾರಂಭ ಸರಳ ಸುಂದರವಾಗಿ ಗಮನಸೆಳೆದಿದೆ.  ಪಾಶ್ವಾತ್ಯ ಶೈಲಿಯ ಕೋಟು-ಬೂಟು-ಟೊಪ್ಪಿಗೆ ಇತ್ಯಾದಿಗಳನ್ನು ಕೈಬಿಟ್ಟು ಪದವೀಧರರು ಶಾಲು ಸಹಿತ ಸಾಂಪ್ರದಾಯಿಕ ಶೈಲಿಯಲ್ಲಿ ಶ್ವೇತ ಖಾದಿ ವಸನಧಾರಿಗಳಾಗಿ ಸಮಾರಂಭದಲ್ಲಿ ಭಾಗಿಗಳಾದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries