HEALTH TIPS

ಕೊರೋನಾ ಪ್ರತಿರೋಧ : ಮಾಸ್ಕ್ ತಯಾರಿಸಿ ಉಚಿತವಾಗಿ ವಿತರಿಸುತ್ತಿರುವ ಮಂಜೇಶ್ವರ ಬ್ಲಾಕ್ ಪಂಚಾಯತ್

       
    ಮಂಜೇಶ್ವರ:  ಕೊರೋನಾ ಸೋಂಕು ಪ್ರತಿರೋಧ ಚಟುವಟಿಕೆಗಳಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಸಕ್ರಿಯವಾಗಿದೆ. ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಮಹಿಳಾ ತರಬೇತು ಕೇಂದ್ರದಲ್ಲಿ ಮಹಿಳಾ ಜನಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಸಾವಿರಾರು ಮಂದಿಗೆ ಮಾಸ್ಕ್ ನಿರ್ಮಿಸಿ ಉಚಿತವಾಗಿ ವಿತರಣೆನಡೆಸುತ್ತಿದ್ದಾರೆ. ಸಾರ್ವಜನಿಕ ಮಾರುಕಟ್ಟೆಯಲ್ಲಿ ಮಾಸ್ಕ್ ನ ಕೊರತೆ ಕಂಡುಬಂದಿರುವ ಮತ್ತು ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ತಿಳಿಸಿರುವರು.
        ಅಂಗನವಾಡಿ ಶಿಕ್ಷಕಿರು, ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ ಇತ್ಯಾದಿ ಸಂಸ್ಥೆಗಳ ಸಹಕಾರದೊಂದಿಗೆ ಪ್ರಧಾನ ಕೇಂದ್ರಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಪೆÇಲೀಸ್ ಠಾಣೆಗಳಲ್ಲಿ, ಗಡಿ ಪ್ರದೇಶಗಳ ಕೇಂದ್ರಗಳಲ್ಲಿ ಈ ಮಾಸ್ಕ್ ಉಚಿತವಾಗಿ ವಿತರಣೆ ನಡೆಸಲಾಗುತ್ತಿದೆ. ಇದರೊಂದಿಗೆ ಬ್ಲಾಕ್ ಪಂಚಾಯತಿ ಜನಜಾಗೃತಿ ಕರಪತ್ರ ಮನೆಮನೆಗೆ ತಲಪಿಸಲಾಗುತ್ತಿದೆ. ಕೊರೋನಾ ಪ್ರತಿರೋಧ ಸಂಬಂಧ ಪಂಚಾಯತಿ ಮಟ್ಟದ ವಾರ್ಡ್ ಗಳ ಜಾಗೃತಿ ಸಮಿತಿ ರಚನೆಸಭೆ ಇಂದು(ಮಾ.21) ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries