ಕುಂಬಳೆ: ಕುಂಬಳೆ ಗ್ರಾ.ಪಂ. 2019-20ರ ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿದ್ದ ಕ್ಷಯ ರೋಗಿಗಳಿಗೆ ವಿತರಿಸುವ ಪೋಷಕಾಹಾರ ಕಿಟ್ ನ್ನು ಗ್ರಾ..ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಅವರು ಬುಧವಾರ ವಿತರಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ, ಸದಸ್ಯರುಗಳಾದ ಬಿ.ಎನ್.ಮೊಹಮ್ಮದಾಲಿ, ಮುರಳೀಧರ ಯಾದವ್, ಪುಷ್ಪಲತಾ, ಮರಿಯಮ್ಮ ಮೂಸಾ, ಸಬೂರ, ವೈದ್ಯಾಧಿಕಾರಿ ಡಾ.ಸುಬ್ಬ ಗಟ್ಟಿ, ಆರೋಗ್ಯ ಪರಿವೀಕ್ಷಕ ಚಂದ್ರನ್ ಉಪಸ್ಥಿತರಿದ್ದರು.


