HEALTH TIPS

ಏಳು ಕಾಂಗ್ರೆಸ್ ಸಂಸದರ ಅಮಾನತ್ತು ರದ್ದುಪಡಿಸಿದ ಲೋಕಸಭೆ


          ನವದೆಹಲಿ: ಅಶಿಸ್ತಿನ ವರ್ತನೆ ಪ್ರದರ್ಶಿಸಿದ್ದಕ್ಕಾಗಿ ಇದೇ ಮಾರ್ಚ್ 5 ರಂದು ಏಳು ಕಾಂಗ್ರೆಸ್ ಸಂಸದರನ್ನು ಬಜೆಟ್  ಅಧಿವೇಶನದ ಉಳಿದ ಕಲಾಪಗಳಿಂದ ಅಮಾನತ್ತುಗೊಳಿಸಲು ಕೈಗೊಂಡಿದ್ದ ತೀರ್ಮಾನವನ್ನು ಲೋಕಸಭೆ ಬುಧವಾರ  ರದ್ದುಪಡಿಸಿದೆ.
         ಕಾಂಗ್ರೆಸ್ ಪಕ್ಷದ ಗುರುಜೀತ್ ಸಿಂಗ್ ಔಜಲಾ, ಬೆಹನಾನ್ ಬೆನ್ನಿ, ಗೌರವ್ ಗೋಗೊಯ್, ಡೀನ್ ಕುರಿಕೋಸ್,  ಟಿ.ಎನ್.  ಪ್ರತಾಪನ್, ಮಾಣಿಕಮ್ ಟ್ಯಾಗೂರ್  ಹಾಗೂ ರಾಜ್ ಮೋಹನ್ ಉಣ್ಣಿತ್ತಾನ್ ಅವರನ್ನು  ಸಂಸತ್ತಿನ ಬಜೆಟ್ ಅಧಿವೇಶನದ ಉಳಿದ ಅವಧಿಗಾಗಿ ಮಾರ್ಚ್ 5 ರಂದು ಅಮಾನತ್ತುಗೊಳಿಸಲಾಗಿತ್ತು. ಬುಧವಾರ ಏಳು ಕಾಂಗ್ರೆಸ್ ಸಂಸದರ ಅಮಾನತ್ತು ಕ್ರಮ ರದ್ದುಪಡಿಸುವ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸಿದ   ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ  ಅರ್ಜುನ್ ರಾಮ್ ಮೇಘವಾಲ್ ಅವರು, ಅಮಾನತ್ತುಗೊಳಿಸುವ  ತೀರ್ಮಾನ  ರದ್ದುಪಡಿಸಲು ಸದನ ನಿರ್ಣಯಿಸಿದೆ ಎಂದು ಹೇಳಿದರು. ನಂತರ ಲೋಕಸಭೆ ನಿರ್ಣಯವನ್ನು ದ್ವನಿಮತದಿಂದ ಅಂಗೀಕರಿಸುವ ಮೂಲಕ ಕಾಂಗ್ರೆಸ್ ಸಂಸದರ ಅಮಾನತ್ತು ರದ್ದುಗೊಳಿಸಲಾಯಿತು. ಅಮಾನತು ಹಿಂಪಡೆಯುವುದಕ್ಕೂ ಮುನ್ನ, ಸ್ಪೀಕರ್ ಓಂ ಬಿರ್ಲಾ, ಸದನದಲ್ಲಿ ಅಂದು ನಡೆದ ಬೆಳವಣಿಗೆಗಳು   ವೈಯಕ್ತಿಕವಾಗಿ ತಮಗೆ ತೀವ್ರ ನೋವು ಉಂಟುಮಾಡಿದೆ  ಎಂದು ವಿಷಾದ ವ್ಯಕ್ತಪಡಿಸಿದರು.ಸದನದ ಘನತೆಯನ್ನು ಪ್ರತಿಯೊಬ್ಬ ಸದಸ್ಯರೂ ಎತ್ತಿ ಹಿಡಿಯಬೇಕು ಎಂದು ಒತ್ತಿ ಹೇಳಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಭಿನ್ನಾಭಿಪ್ರಾಯ ಅನಿವಾರ್ಯ, ಆದರೆ ಅದನ್ನು ವ್ಯಕ್ತಪಡಿಸುವಾಗ ಪ್ರತಿಯೊಬ್ಬರೂ ಘನತೆಯಿಂದ ವರ್ತಿಸಬೇಕು ಎಂದರು.ಇದಕ್ಕೂ ಮೊದಲು  ನಡೆದ ಸರ್ವಪಕ್ಷಗಳ ಸಭೆಯಲ್ಲಿ ಏಳು ಕಾಂಗ್ರೆಸ್ ಸಂಸದರ ಅಮಾನತ್ತುಗೊಳಿಸಿರುವ ವಿಷಯ ಸೇರಿದಂತೆ  ಸದನ ಸುಗಮವಾಗಿ ನಡೆಸುವ ಸಂಬಂಧ ಚರ್ಚೆ ನಡೆಯಿತು.
        ಈ ಸದನದ ಮೂಲಕ ಗ್ರಾಮ ಪಂಚಾಯಿತಿಗಳವರೆಗೆ ಸರ್ವರಿಗೂ ಆರೋಗ್ಯಕರ ಸಂದೇಶವನ್ನುರವಾನಿಸಬೇಕಿದೆ ಎಂದು ಸ್ಪೀಕರ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries