HEALTH TIPS

ಚಿಗುರುಪಾದೆ ದೇವಸ್ಥಾನದಲ್ಲಿ ಬ್ರಹ್ಮಕಲಶ ವಾರ್ಷಿಕ ದಿನಾಚರಣೆ

 
        ಮಂಜೇಶ್ವರ: ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಾರ್ಷಿಕ ದಿನಾಚರಣೆಯು ಇತ್ತೀಚೆಗೆ ವಿವಿಧ ವೈದಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಸಮಾರಂಭದ ಅಂಗವಾಗಿ ಸಾರ್ವಜನಿಕ ಶತರುದ್ರಾಭಿಷೇಕ, ಬಲಿವಾಡುಕೂಟ ಹಾಗೂ ರಾತ್ರಿ ಶ್ರೀಸತ್ಯನಾರಾಯಣ ದೇವರಪೂಜೆ ನಡೆಯಿತು.
        ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ ಜಯರಾಮ ಭಟ್ ದೇವಸ್ಯ ಅವರ ಸಂಯೋಜನೆ ಹಾಗೂ ಸಹಕಾರದಲ್ಲಿ  ಯಕ್ಷಗಾನ ತಾಳಮದ್ದಳೆ ಶರಸೇತು ಬಂಧ ಜರಗಿತು. ಹಿಮ್ಮೇಳದಲ್ಲಿ ರವಿಶಂಕರ ಮಧೂರು, ಶಿವಶಂಕರ ಭಟ್ ತಲ್ಪನಾಜೆ, ಕೃಷ್ಣ ಭಟ್ ಅಡ್ಕ, ಕೃಷ್ಣ ಮೂರ್ತಿ ಎಡನಾಡು ಹಾಗೂ ಮುಮ್ಮೇಳದಲ್ಲಿ ಅರ್ಜುನನಾಗಿ ರಾಧಾಕೃಷ್ಣ ಕಲ್ಚಾರ್, ಹನೂಮಂತನಾಗಿ ಸೇರಾಜೆ ಸೀತಾರಾಮ ಭಟ್  ವೃದ್ಧ ಬ್ರಾಹ್ಮಣನಾಗಿ ಜಯರಾಮ ದೇವಸ್ಯ ಭಾಗವಹಿಸಿದ್ದರು.
      ಸಂಜೆ  6ರಿಂದ ನೃತ್ಯ ಲಹರಿ ನಾಟ್ಯಾಲಯ ಪಜೀರು ಮಂಗಳೂರು ಇದರ ನೃತ್ಯಗುರು ವಿದುಷಿ ಶ್ರೀಮತಿ ರೇಷ್ಮಾ ನಿರ್ಮಲ ಭಟ್ ಇವರ ಶಿಷ್ಯೆ ಕುಮಾರಿ ದೀಪಿಕಾ ಭಟ್ ಮತ್ತು ಊರ ಪ್ರತಿಭೆಗಳಿಂದ ಭರತನಾಟ್ಯ ಹಾಗೂ ನೃತ್ಯ ವೈವಿಧ್ಯ ಜರಗಿತು.
      ಈ ಸಂದರ್ಭ ಹಿರಿಯ ಅರ್ಥಧಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ರಾಧಾಕೃಷ್ಣ ಕಲ್ಚಾರ್ ಅವರಿಗೆ ಗಣ್ಯರ ಸಮಕ್ಷಮ ಗೌರವಿಸಿ ಅಭಿನಂದಿಸಲಾಯಿತು. ಜಯರಾಮ ಭಟ್ ದೇವಸ್ಯ ಹಾಗೂ ದೀಪಿಕಾ ಭಟ್ ದೇರಂಬಳ ಅವರನ್ನು ಕ್ಷೇತ್ರದವತಿಯಿಂದ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries