HEALTH TIPS

ಸಮುದಾಯ ಅಡುಗೆಮನೆಯಿಂದ ಆಹಾರ ಹಸಿದವರ ಮನೆ ಬಾಗಿಲಿಗೆ


       ಕಾಸರಗೋಡು: ಯಾರೂ ಉಪವಾಸದಿಂದಿರಬಾರದು ಎಂಬ ಕಾರಣಕ್ಕೆ ರಾಜ್ಯ ಸರಕಾರ ಜಾರಿಗೊಳಿಸಿರುವ ಜನಪರ ಯೋಜನೆ ಸಮುದಾಯ ಅಡುಗೆಮನೆ (ಕಮ್ಯುನಿಟಿ ಕಿಚ್ಚನ್) ಜಿಲ್ಲೆಯಲ್ಲಿ ಆರಂಭಗೊಂಡಿದೆ.
      ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್ ಡೌನ್ ಆದೇಶದ ಕಾರಣ ಮನೆಗಳಿಂದ ಯಾರೂ ಹೊರಗಿಳಿಯಕೂಡದು ಎಂಬ ಕಾರಣದಿಂದ ಹೊತ್ತಿನ ಆಹಾರಕ್ಕೆ ಸಂಕಷ್ಟ ಅನುಭವಿಸುತ್ತಿರುವ ಮಂದಿಗಾಗಿ ಅಡುಗೆ ಸಿದ್ಧಪಡಿಸಿ ವಿತರಣೆ ನಡೆಸುವ ಯೋಜನೆ ಇದಾಗಿದೆ. ಸಮುದಾಯ ಸಭಾಂಗಣ ಸಹಿತ ಆಯ್ದ ಕೇಂದ್ರಗಳಲ್ಲಿ ಅಡುಗೆ ಸಿದ್ಧಪಡಿಸಿ, ಪೆÇಟ್ಟಣಗಳ ಮೂಲಕ ಸ್ವಯಂ ಸೇವಕರ ಮುಖಾಂತರ ಹಸಿದವರಿಗೆ ತಲಪಿಸುವುದು ಇಲ್ಲಿನ ಉದ್ದೇಶ. ಜಿಲ್ಲೆಯ 9 ಗ್ರಾಮ ಪಂಚಾಯತ್‍ಗಳಲ್ಲಿ ಮತ್ತು ಮೂರು ನಗರಸಭೆಗಳ ವ್ಯಾಪ್ತಿಯಲ್ಲಿ ಕಮ್ಯುನಿಟಿ ಕಿಚ್ಚನ್ ಯೋಜನೆ ಈಗ ಆರಂಭಗೊಂಡಿದೆ. ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಗಳು ಮನೆಗಳಿಗೆ ಆಹಾರದ ಪೆÇಟ್ಟಣ ತಲಪಿಸುವ ಚಟುವಟಿಕೆಗಳ ನೇತೃತ್ವ ವಹಿಸುತ್ತಿವೆ.                                   
      ಜಿಲ್ಲೆಯ ಉಳಿದ ಗ್ರಾಮ ಪಂಚಾಯತ್‍ಗಳಲ್ಲೂ ಸಮುದಾಯ ಅಡುಗೆ ಮನೆ ಆರಂಭಿಸುವ ನಿಟ್ಟಿನಲ್ಲಿ ಜಾಗ ಪತ್ತೆ ನಡೆಯುತ್ತಿದ್ದು, ಶೀಘ್ರದಲ್ಲೇ ಯೋಜನೆ ಆರಂಭಿಸಲಾಗುವುದು ಎಂದು ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು.
                   ಕರೆ ಮಾಡಿ: ನಿಮ್ಮ ಮನೆ ಬಾಗಿಲಿಗೇ ಆಹಾರ ತಲಪಲಿದೆ!
     ಮೊದಲ ಹಂತ : ಅಡುಗೆ ಮಾಡಿದ ಆಹಾರ ಯಾ ಅಡುಗೆ ಸಾಮಾಗ್ರಿಗಳ ಕಿಟ್ ಅಗತ್ಯವಿದ್ದವರು ಹಿಂದಿನ ದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯ ಅವಧಿಯಲ್ಲಿ ಜಿಲ್ಲಾ„ಕಾರಿ ಕಚೇರಿಯ 04994-255004 ಎಂಬ ದೂರವಾಣಿ ನಂಬ್ರಕ್ಕೆ ಕರೆಮಾಡಬೇಕು. 
     ಎರಡನೇ ಹಂತ : ಕೊರೊನಾ ನಿಯಂತ್ರಣ ಕೊಠಡಿಯಿಂದ ಸಂಬಂಧಪಟ್ಟ ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಯ ಅಧ್ಯಕ್ಷರಾಗಿರುವ ವಾರ್ಡ್ ಸದಸ್ಯರಿಗೆ ಸೂಚನೆ ನೀಡಲಾಗುತ್ತದೆ.
     ಮೂರನೇ ಹಂತ : ವಾರ್ಡ್ ಸದಸ್ಯ ಮನವಿ ಸಲ್ಲಿಸಿದವರ ಬಗ್ಗೆ ಖಚಿತತೆ ಪಡೆದುಕೊಂಡು ಅವರಿಗೆ ಅಗತ್ಯವಿರುವ ಅಕ್ಕಿ, ಧಾನ್ಯ, ತರಕಾರಿ ಇತ್ಯಾದಿಗಳ ಗಣನೆಯನ್ನು ಸಪ್ಲೈಕೋ ಸಂಸ್ಥೆಗೆ ಸಲ್ಲಿಸುವರು. ಅದೇ ದಿನ ರಾತ್ರಿ 12 ಗಂಟೆಗೆ ಮುನ್ನ ವಾರ್ಡ್ ಮಟ್ಟದಲ್ಲಿ, ನಗರಸಭೆ/ಗ್ರಾಮ ಪಂಚಾಯತ್ ಮಟ್ಟದಲ್ಲಿರುವ ಸಮುದಾಯ ಅಡುಗೆ ಮನೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಜಿಲ್ಲಾ ಸಪ್ಲೈ ಅ„ಕಾರಿ ತಲಪಿಸುವರು.
     ನಾಲ್ಕನೇ ಹಂತ : ವಾರ್ಡ್ ಮಟ್ಟದಲ್ಲಿ, ಗ್ರಾಮ ಪಂಚಾಯತ್/ ನಗರಸಭೆ ತಳಹದಿಯಲ್ಲಿ ಸ್ಥಾಪಿಸಲಾದ ಸಮುದಾಯ ಅಡುಗೆ ಮನೆಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿ ಅವರ ಅರ್ಹತಾ ಪತ್ರ ಪಡೆದಿರುವ ಕುಟುಂಬಶ್ರೀ ಕಾರ್ಮಿಕರು ಆಹಾರ ಸಿದ್ಧಪಡಿಸಿ ಬಟ್ಟರ್ ಪೇಪರ್ ಸಹಿತ ಕಾಗದದ ಪೆÇಟ್ಟಣ ಬಳಸಿ ಪಾರ್ಸೆಲ್ ಸಿದ್ಧಪಡಿಸಿ ಪಾಸ್ ಹೊಂದಿರುವ ಸ್ವಯಂಸೇವಕರಿಗೆ ಸಲ್ಲಿಸುವರು.
     ಐದನೇ ಹಂತ : ಸ್ವಯಂ ಸೇವಕರು ಕರೆಮಾಡಿ ಮನವಿ ಸಲ್ಲಿಸಿದ ವ್ಯಕ್ತಿಗಳಿಗೆ ಆಹಾರ ವಿತರಿಸಿ ಮರಳುವರು.
     ಆರನೇ ಹಂತ : ಜಿಲ್ಲಾಧಿಕಾರಿ ಅವರ ನೇತೃತ್ವದ ನಿಯಂತ್ರಣ ಕೊಠಡಿ ಅಡಿಯಲ್ಲಿ ಪ್ರತಿದಿನ ಸಂಜೆ ಕರೆ ಮಾಡಿ ಮನವಿ ಮಾಡಿರುವ ವ್ಯಕ್ತಿಗೆ ಆಹಾರದ ಪೆÇಟ್ಟಣ ತಲಪಿದೆಯೇ ಎಂಬ ಬಗ್ಗೆ ಖಚಿತಪಡಿಸಲಾಗುವುದು.
ಕೊರೊನಾ ಎಂಬ ಮಹಾಮಾರಿ ವಿರುದ್ಧ ಜಗತ್ತೇ ನಡೆಸುತ್ತಿರುವ ಹೋರಾಟದಲ್ಲಿ ಇಂಥಾ ಮಾದರಿ ರೂಪದ ಯೋಜನೆ ಜನತೆಗೆ ದೊಡ್ಡ ನೆಮ್ಮದಿ ತಂದಿದೆ. ಈ ನಿಟ್ಟಿನಲ್ಲಿ ಜನ ದೊಡ್ಡದೊಂದು ಸೆಲ್ಯೂಟ್ ನೀಡುತ್ತಿದ್ದಾರೆ.
20 ರೂ.ಗೆ ಆಹಾರ ಮನೆಗೆ ಲಭ್ಯ : ಮನೆಗಳಲ್ಲೇ ಉಳಿದುಕೊಂಡಿರುವ ಜನಕ್ಕೆ ಆಯಾ ಸ್ಥಳೀಯಾಡಳಿತೆ ಸಂಸ್ಥೆಯನ್ನು ಸಂಪರ್ಕಿಸಿದರೆ ಕೇವಲ 20 ರೂ.ಗೆ ಸಮುದಾಯ ಅಡುಗೆ ಮನೆ ಮೂಲಕ ಆಹಾರ ಮನೆಗಳಿಗೇ ತಲಪಿಸುವ ಯೋಜನೆಯೂ ಜಿಲ್ಲೆಯಲ್ಲಿ ಆರಭಗೊಂಡಿದೆ. ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಮನೆಗಳಲ್ಲೇ ಉಳಿದುಕೊಂಡವರಿಗೆ ಇದು ಬಹು ಪ್ರಯೋಜನಕಾರಿಯಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries