ಮುಳ್ಳೇರಿಯ: ಕೋಟೂರು ಶ್ರೀ ಕಾರ್ತಿಕೇಯ ಭಜನಾ ಮಂದಿರದಲ್ಲಿ ಪುನರ್ ನಿರ್ಮಾಣ ಜೀರ್ಣೋದ್ಧಾರ ಪ್ರಕ್ರಿಯೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ಜರಗಿದವು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಬೆಳಗ್ಗೆ ಗಣಪತಿ ಹವನ, ಅನುಜ್ಞಾ ಪೂಜೆ, ಅನುಜ್ಞಾ ಪ್ರಾರ್ಥನೆ, ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮಗಳು ಜರಗಿದವು. ರಾತ್ರಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ಉಪಸ್ಥಿತಿಯಲ್ಲಿ ವೈದಿಕರಿಂದ ದುರ್ಗಾ ಪೂಜೆಯು ಸಂಪನ್ನವಾಯಿತು. ಸಮಿತಿಯ ಪದಾಧಿಕಾರಿಗಳು ಊರ ಭಕ್ತರು ಉಪಸ್ಥಿತರಿದ್ದರು.
ಕೋಟೂರು ಶ್ರೀ ಕಾರ್ತಿಕೇಯ ಭಜನಾಮಂದಿರ ಪುನರ್ನಿರ್ಮಾಣ ಪ್ರಕ್ರಿಯೆ ಪ್ರಾರಂಭ
0
ಮಾರ್ಚ್ 26, 2020