ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಸಮಿತಿಯು 2015ರಲ್ಲಿ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಂದಿನ ಕಾರ್ಯದರ್ಶಿಗಳನ್ನು ವ್ಥಾ ಆರೋಪ ಹೊರಿಸಿ ಸೇವೆಯಿಂದ ಅಮಾನತುಗೊಳಿಸಿದ್ದರು. ಇದರ ವಿರುದ್ದ ಕೋಪರೇಟಿವ್ ಆರ್ಬಿಟ್ರೇಶನ್ ಕಾನೂನಿನಡಿ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಪಡೆಯುವಲ್ಲಿ ಅಂದಿನ ಕಾರ್ಯದರ್ಶಿ ಯಶಸ್ವಿಯಾಗಿದ್ದರು. ಆದರೆ ಇದೇ ಸಂದರ್ಭ ಬ್ಯಾಂಕ್ ನ ಸದಸ್ಯರೊಬ್ಬರು ಕೆಲವು ಸ್ಥಾಪಿತ ಹಿತಾಸಕ್ತಿಗಳ ಒತ್ತಾಸೆಯ ಮೇರೆಗೆ ಕೇರಳ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದ್ದರು. ಇದರ ವಿರುದ್ದ ಬ್ಯಾಂಕ್ ಕಾರ್ಯದರ್ಶಿ ತಡೆಯಾಜ್ಞೆಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ ನ್ಯಾಯಪಡೆಯುವಲ್ಲಿ ಯಶಸ್ವಿಯಾದರು. ಮಾ.17 ರಂದು ರಾಜ್ಯ ಹೈಕೋರ್ಟ್ ಆದೇಶ ನಂಬ್ರ ಡಬ್ಲು ಪಿ(ಸಿ)7015-2020-ಬಿ ಪ್ರಕಾರ ಅಮಾನತುಗೊಳಿಸಲಾಗಿದ್ದ ಬ್ಯಾಂಕ್ ಕಾರ್ಯದರ್ಶಿ ಜಗದೀಶ್ ರೈ ಅವರನ್ನು ಮರು ನೇಮಕಗೊಳಿಸುವಂತೆ ಬ್ಯಾಂಕ್ ಆಡಳಿತ ಸಮಿತಿಗೆ ಆದೇಶ ನೀಡಿದ್ದು, ಜಗದೀಶ್ ರೈ ಬ್ಯಾಂಕ್ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.
ಜಗದೀಶ್ ರೈ ಪುತ್ತಿಗೆ ಕುಂಬಳೆ ಸೇ.ಸ.ಬ್ಯಾಂಕ್ ಕಾರ್ಯದರ್ಶಿಯಾಗಿ ಮರು ನೇಮಕ
0
ಮಾರ್ಚ್ 26, 2020