HEALTH TIPS

ಕೊರೊನಾ : ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ : ಡಿ.ಎಂ.ಒ.


          ಕಾಸರಗೋಡು: ಕೊರೊನಾ ಪಾಸಿಟಿವ್ ಕೇಸುಗಳ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
       ಜಿಲ್ಲೆಯಲ್ಲಿ ಈ ವರೆಗೆ ವರದಿ ಲಭಿಸಿದ 45 ಪಾಸಿಟಿವ್ ಕೇಸುಗಳಲ್ಲಿ ಮೊದಲು ವರದಿ ಮಾಡಲಾದ ಒಬ್ಬರಿಗೆ ಮಾತ್ರ ಈಗ ನೆಗೆಟಿವ್ ಫಲಿತಾಂಶ ಲಭಿಸಿದೆ. ಮೂರು ಟೆಸ್ಟ್‍ಗಳು ನೆಗೆಟಿವ್ ಫಲಿತಾಂಶ ನೀಡಿದರೆ ಮಾತ್ರ ಫಲಿತಾಂಶವನ್ನು ಪೂರ್ಣ ನೆಗೆಟಿವ್ ಎಂದು ಪರಿಶೀಲಿಸಲಾಗುತ್ತದೆ. ಹೀಗೆ 4 ನೆಗೆಟಿವ್ ಆದರೆ ಮತ್ತೆ ರೂಂ ಕ್ವಾರೆಂಟಲ್ ನಿಬಂಧನೆಯನ್ನು ಪಾಲಿಸಬೇಕು. ಅಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ಜನ ನಂಬಕೂಡದು ಎಂದು ಜಿಲ್ಲಾ ವೈದ್ಯಾ„ಕಾರಿ ತಿಳಿಸಿದರು.   
ಜಿಲ್ಲೆಯಲ್ಲಿ ಕೊರೊನಾ ಸೋಂಕು ಖಚಿತಗೊಂಡಿರುವ 44 ಮಂದಿಯಲ್ಲಿ 40 ಮಂದಿಯೂ ವಿದೇಶಗಳಿಂದ ಊರಿಗೆ ಮರಳಿದವರು. ಒಟ್ಟು 4 ಮಂದಿಗೆ ಮಾತ್ರ ರೋಗಿಗಳ ಸಂಪರ್ಕದಿಂದ ಸೋಂಕು ತಗುಲಿರುವುದು ಖಚಿತವಾಗಿದೆ. ಇವರಲ್ಲಿ ನಾಲ್ಕೂ ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಇವರ ಮೂಲಕ ಇತರರಿಗೆ ರೋಗ ಹರಡುವ ಭೀತಿಯಿಲ್ಲ ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ರೋಗ ಖಚಿತಗೊಂಡವರು, ಸಂಶಯವುಳ್ಳವರು ನಿಗಾದಲ್ಲಿದ್ದಾರೆ. ರೋಗದಿಂದ ಗುಣಮುಖರಾದವರೂ ಕಡ್ಡಾಯವಾಗಿ 28 ದಿನಗಳ ಹೆಚ್ಚುವರಿ ನಿಗಾದಲ್ಲಿ ಇರಬೇಕು. ನಿಗಾದಲ್ಲಿರುವವರು 14 ದಿನಗಳ ಅವಧಿಯಲ್ಲಿ ರೋಗಲಕ್ಷಣ ಕಂಡುಬಂದಲ್ಲಿ ಅವರ ಸ್ಯಾಂಪಲ್ ತಪಾಸಣೆಗೆ ರವಾನಿಸಿ ರೋಗ ಖಚಿತಪಡಿಸುವಿಕೆ ನಡೆಸಲಾಗುವುದು ಎಂದವರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries