HEALTH TIPS

ನೌಕರರ ಸುರಕ್ಷತೆ, ಸೌಲಭ್ಯಗಳು ಖಚಿತತೆ : ಉದ್ಯೋಗ ಇಲಾಖೆಯಿಂದ ಕಠಿಣ ಸಲಹೆ-ಸೂಚನೆ


       ಕಾಸರಗೋಡು: ಕೋವಿಡ್-19 ಪ್ರತಿರೋಧ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಕಟ್ಟುನಿಟ್ಟುಗಳ ಅಂಗವಾಗಿ ತುರ್ತುಪರಿಸ್ಥಿತಿಯಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರ ಮತ್ತು ಕಾಯಕಗಳ ಮಾಲಿಕರ ಜೊತೆಗೆ ಮಾತುಕತೆ ನಡೆಸಿ ಉದ್ಯೋಗ ಇಲಾಖೆ ಕೆಲವು ಮಾನದಂಡಗಳನ್ನು ಪ್ರಕಟಿಸಿದೆ.
      ಅರ್ಹವಾಗಿರುವ ಎಲ್ಲ ರಜೆಗಳು, ವಿಶೇಷ ರಜೆಗಳು ಕಾರ್ಮಿಕರಿಗೆ ಮಂಜೂರುಮಾಡಬೇಕು. ವೇತನ ಕಡಿತ ಯಾ ನೌಕರಿಗೆ ಮರಳುವಂತೆ ಒತ್ತಾಯಿಸಕೂಡದು ಎಂದು ಸಕ್ರ್ಯುಲರ್‍ನಲ್ಲಿ ತಿಳಿಸಲಾಗಿದೆ. ಕಾಯಕಗಳಲ್ಲಿ ಯಾವುದೇ ಟಾರ್ಗೆಟ್‍ಗಳನ್ನು  ತಿಳಿಸಬಾರದು. ಅದನ್ನು ನಡೆಸುವಂತೆ ಕಾರ್ಮಿಕರನ್ನು ಒತ್ತಾಯಿಸಕೂಡದು. ರಾಜ್ಯದ ಸಾರ್ವಜನಿಕ/ಖಾಸಗಿ ವಲಯಗಳ ನಿರ್ಮಾಣ ವಲಯ, ತೋಟ ವಲಯ, ಗೇರುಬೀಜ, ಮೀನು ಸಂಸ್ಕರಣೆ, ತೆಂಗಿನ ನಾರು ಸಹಿತ ಸಂಸ್ಥೆಗಳ ಮಾಲಿಕರು, ಕಾರ್ಖಾನೆಗಳ ಮಾಲಿಕರು ಕಾರ್ಮಿಕರು ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
       ಸಾಧ್ಯತೆಯಿರುವ ಎಲ್ಲ ಸಿಬ್ಬಂದಿ ಮನೆಗಳಿಂದಲೇ ನೌಕರಿ ನಡೆಸುವಂತೆ(ವರ್ಕ್ ಎಟ್ ಹೋಂ) ಅಗತ್ಯವಿರುವ ಸೌಲಭ್ಯ ನೌಕರಿ ಮಾಲಿಕರು ನಡೆಸಬೇಕು. ಇನ್ ಫಾ ಪಾರ್ಕ್, ಟೆಕ್ನೋ ಪಾರ್ಕ್ ಇತ್ಯಾದಿಗಳ ಸಂಸ್ಥೆಗಳಲ್ಲಿ ಸೇರಿರುವ ಐ.ಟಿ.ಸಂಸ್ಥೆಗಳು, ಸ್ಟಾರ್ಟ್ ಅಪ್ ಕಂಪೆನಿಗಳು, ಸೇಲ್ಸ್ ಪ್ರಮೋಷನ್ ಕಾರ್ಮಿಕರನ್ನು ನೇಮಿಸಿರುವ ಸಂಸ್ಥೆಗಳು ನೌಕರರಿಗೆ ವರ್ಕ್ ಪ್ರಂ ಹೋಂ ಸೌಲಭ್ಯ ಒದಗಿಸಲು ಪ್ರತ್ಯೇಕ ಗಮನಹರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
      ಮನಿ ಎಕ್ಸ್‍ಚೇಂಜ್ ಘಟಕಗಳಲ್ಲಿ ಕಡ್ಡಾಯ ಸುರಕ್ಷೆ ಸೌಲಭ್ಯ ಗಳೊಂದಿಗಷ್ಟೇ ಚಟುವಟಿಕೆಗಳು ನಡೆಸಬೇಕು. ಸಂಸ್ಥೆಗಳ ಪ್ರವೇಶ ದ್ವಾರಗಳಲ್ಲಿ ಸಾಬೂನು, ಹ್ಯಾಂಡ್ ವಾಷ್, ನೀರು ಇತ್ಯಾದಿಗಳನ್ನು ಕೈತೊಳೆಯುವ ಉದ್ದೇಶದಿಂದ ಇರಿಸಬೇಕು. ನೌಕರಿ ಮಾಲಿಕರು, ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಇತ್ಯಾದಿ ಸುರಕ್ಷಾ ಸೌಲಭ್ಯ ಒದಗಿಸಬೇಕು.
ನಿಯಂತ್ರಣ ಏರ್ಪಡಿಸಲಾದ ಅವ„ಗಳಲ್ಲಿ ಯಾವ ರೀತಿಯಲ್ಲೂ ಲೇ-ಆಫ್, ಲಾಕ್-ಔಟ್, ರೀಟ್ರಂಚ್ ಮೆಂಟ್, ಟರ್ಮಿನೇಷನ್ ಸಹಿತ ಕ್ರಮಗಳನ್ನು ಕೈಗೊಳ್ಳಬಾದು. ಕ್ಯಾಷ್ವಲ್, ಟೆಂಪರರಿ, ಬದಲಿ, ಕಾಂಟ್ರ್ಯಾಕ್ಟ್, ಟ್ರೈನಿ, ದಿನವೇತನ ಕರಾರಿನ ಸಿಬ್ಬಂದಿಯನ್ನು ಕೈಬಿಡಬಾರದು ಮತ್ತು ವೇತನ ಹಿಡಿದಿರಿಸಬಾರದು. ಈ ವಿಚಾರಗಳಲ್ಲಿ ಉಲ್ಲಂಘನೆ ನಡೆಸಿದರೆ ನೌಕರಿ ಮಾಲಿಕರು, ಗುತ್ತಿಗೆದಾರರು ಮೊದಲಾದವರ ವಿರುದ್ಧ ಜಿಲ್ಲಾ ಕಾರ್ಮಿಕ ಅಧಿಕಾರಿ ಕ್ರಮಕೈಗೊಳ್ಳುವರು.
      ವೇತನದಲ್ಲಿ ಕಡಿತ ನಡೆಸಿದರೆ ಕಾರ್ಮಿಕ ಮಾನಸಿಕ ಧೈರ್ಯ ಕುಸಿಯುವ ಸಾಧ್ಯತೆಯಿದ್ದು, ಅದು ಅಂಟುರೋಗ ವಿರುದ್ಧ ನಡೆಯುತ್ತಿರುವ ಪ್ರತಿರೋಧ ಚಟುವಟಿಕೆಗಳಿಗೆ ತೊಡಕಾಗಲಿದೆ. ನೌಕರಿ ಸಂಬಂಧ ವಿವಾದಗಳು, ಮುಷ್ಕರಗಳು ಇತ್ಯಾದಿಗಳನ್ನು ಈ ವೇಳೆ ಕೈಬಿಡಬೇಕು. ಪರಸ್ಪರ ಸಹಕಾರ ಖಚಿತಪಡಿಸಬೇಕು. ಅವರ ಕುಟುಂಬಗಳು ಸಮಸ್ಯೆಯಿಂದ ಪಾರಾಗುವಂತೆ ನೌಕರಿ ಮಾಲಿಕÀರು ಯತ್ನ ನಡೆಸಬೇಕು.
      ಹತ್ತು ಅಥವಾ ಅದಕ್ಕಿಂತ ಅ„ಕ ನೌಕರರು ಮಾತ್ರ ಇರುವ, 1947ರ ಇಂಡ್ರಸ್ಟ್ರಿಯಲ್ ಡಿಸ್‍ಪ್ಯೂಟ್ಸ್ ಕಾಯಿದೆ ಚಾಪ್ಟರ್ 5ಎ, 5ಬಿ ನಿಬಂಧನೆಗಳು ಅನ್ವಯವಾಗದ ಶಾಪ್ ಆ್ಯಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್‍ಮೆಂಟ್‍ಗಳು, ಲೇ-ಆಫ್ ನಿಬಂಧನೆ ಅನ್ವಯವಲ್ಲದ, 50ಕ್ಕಿತ ಕಡಿಮೆ ನೌಕರರಿರುವ ಕಾರ್ಖಾನೆಗಳು ಕೋವಿಡ್-19 ಸೋಂಕಿನ ಕಾರಣ ಮುಚ್ಚುಗಡೆ ನಡೆಸಬೇಕಾದ ಪರಿಸ್ಥಿತಿ ಇದ್ದರೆ ನೌಕರಿ ಮಾಲಿಕರು ಸಿಬ್ಬಂದಿಗೆ ಪೂರ್ಣ ವೇತನ ನೀಡಬೇಕು.
      ಬಯೋಮೆಟ್ರಿಕ್ ಸೌಲಭ್ಯ ಜಾರಿಯಲ್ಲಿ ಜಾರಿಗೊಳಿಸಿರುವ ಶಾಲೆಗಳ ಸಹಿತ ಸಂಸ್ಥೆಗಳಲ್ಲಿ ಮಾ.31 ವರೆಗೆ ಬಯೋಮೆಟ್ರಿಕ್ ಸೌಲಭ್ಯ ನಿಲುಗಡೆ ಮಾಡಬೇಕು.
ಸಂಸ್ಥೆಗಳ ನೌಕರರ ಆರೋಗ್ಯ ಮತ್ತು ಸುರಕ್ಷತೆ ಖಚಿತಪಡಿಸಬೇಕಾದ ಹಿನ್ನೆಲೆಯಲ್ಲಿ, ಕೊರೊನಾ ವೈರಸ್ ಹರಡುತ್ತಿರುವ ಕಾರಣ 1961ರ ಕೇರಳ ಶಾಪ್ಸ್ ಆ್ಯಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್‍ಮೆಂಟ್ ಸಂಹಿತೆಯ 6(4) ಡಿ ಪ್ರಕಾರದ ನಾನ್ ಆಲ್ಕೋಹಾಲಿಕ್ ಕ್ಲೀನಿಂಗ್ ಪೈಪ್ಸ್, ಡಿಸ್ಪೋಸಿಬಲ್ ಲಾಕ್ಸ್ ಗ್ಲೌಸ್, ಮಾಸ್ಕ್ ಇತ್ಯಾದಿ ನೌಕರರಿಗೆ ಒದಗಿಸುವುದನ್ನು ಖಚಿತಪಡಿಸಬೇಕು.
      ಸಾಧ್ಯತೆಯಿರುವ ಎಲ್ಲ ಸಂಸ್ಥೆಗಳಲ್ಲೂ ಪ್ರವೇಶ ದ್ವಾರಗಳಲ್ಲಿ ವಾಷ್ ಬೇಸಿನ್‍ಗಳು, ಸಾಬೂನು, ಹ್ಯಾಂಡ್ ವಾಷ್, ನೀರು ಇತ್ಯಾದಿ ಸಜ್ಜುಗೊಳಿಸಬೇಕು. ಕೈತೊಳೆಯುವ ಅಭ್ಯಾಸವನ್ನು ಗರಿಷ್ಠ ಮಟ್ಟದಲ್ಲಿ ಪೆÇ್ರೀತ್ಸಾಹಿಸಬೇಕು. ನೌಕರಿ, ಆರೋಗ್ಯ ಖಾತೆಗಳು, ಇತರ ಸರಕಾರಿ ಸಂಸ್ಥೆಗಳು, ಚೀಫ್ ಪ್ಲಾಂಟೇಷನ್ ಇನ್ಸ್‍ಪೆಕ್ಟರ್, ಫ್ಯಾಕ್ಟರೀಸ್, ಡೈರೆಕ್ಟರ್ ಮೊದಲಾದವರು ಸುರಕ್ಷಾ ಸಲಹೆಗಳನ್ನು ಆಯಾ ಜಿಲ್ಲಾ„ಕಾರಿಗಳು ಪ್ರಕಟಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
 ನೌಕರಿ ಮಾಲಿಕರು 20-03-2020 ರಿಂದ 10.04.2020 ವರೆಗಿನ ಕಾಲಾವ„ಯಲ್ಲಿ ಸಂಸ್ಥೆಗಳಲ್ಲಿ ಚಟುವಟಿಕೆ ನಡೆಸಿದ ಸಂಬಂಧ ಮಾಹಿತಿಗಳನ್ನು ಸಂಗ್ರಹಿಸಿ ಇರಿಸಬೇಕು. ಇದು ನೌಕರಿ ಇಲಾಖೆ ಪ್ರಕಟಿಸಿರುವ ಪ್ರಫೆÇೀರ್ಮಾದಲ್ಲಿ ಆಯಾ ಜಿಲ್ಲಾ ಲೇಬರ್ ಆಫೀಸರ್‍ಗಳಿಗೆ ನೀಡಬೇಕು.
      ಇತರ ರಾಜ್ಯಗಳ ಕಾರ್ಮಿಕರ ಶಿಬಿರಗಳು(ವಸತಿ ಸೌಲಭ್ಯ), ಆಹಾರ ವ್ಯವಸ್ಥೆಗಳು, ನೌಕರಿ ಮಾಲಿಕರು/ಗುತ್ತಿಗೆದಾರರು ಒದಗಿಸಬೇಕು. ಮಾಹಿತಿಗಳು ನೌಕರಿ ಇಲಾಖೆ ನೀಡುವ ಪ್ರಫೆÇೀರ್ಮಾದಲ್ಲಿ ಆಯಾ ಜಿಲ್ಲಾ ಲೇಬರ್ ಅಧಿಕಾರಿಗೆ ನೀಡಬೇಕು.
      ಕಾರ್ಮಿಕರು ಸರಕಾರದ ವಿವಿಧ ಇಲಾಖೆಗಳ ಮೂಲಕ ನೀಡುವ ಮಾಹಿತಿಗಳನ್ನು ಬಳಸಿ ಕೋವಿಡ್-19 ಹರಡುತ್ತಿರುವ ಬಗ್ಗೆ, ಪ್ರತಿರೋಧ ಚಟುವಟಿಕೆಗಳ ಬಗ್ಗೆ ಖಚಿತವಾಗಿ ಮನವರಿಕೆ ಮಾಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿರುವ ಕೆಲವು ತಪ್ಪು ಮಾಹಿತಿಗಳನ್ನು ನಂಬಕೂಡದು ಮತ್ತು ಅವನ್ನು ಇತರರಿಗೆ ರವಾನಿಸಕೂಡದು. ಸರಕಾರದ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಾಗರೂಕತೆ ಪಾಲಿಸಬೇಕು. ಗುಂಪು ಸೇರ ಕೂಡದು. ಯಾತ್ರೆಗಳನ್ನು ಗರಿಷ್ಠ ಮಟ್ಟದಲ್ಲಿ ಕೈಬಿಡಬೇಕು. ಯಾವುದೇ ರೀತಿಯ ರೋಗಲಕ್ಷಣ ಕಂಡು ಬಂದಲ್ಲಿ ಸ್ವಯಂ ನಿಯಂತ್ರಣ ಪಾಲಿಸಿ, ಜನಸಂಪರ್ಕ ತಪ್ಪಿಸಿ, ಆರೋಗ್ಯ ಇಲಾಖೆ ಅ„ಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಸಲಹೆಗಳನ್ನು ಪಾಲಿಸಬೇಕು. ನೌಕರಿ ಸಂಬಂಧ ವಿವಾದಗಳು, ಮುಷ್ಕರಗಳು ಇತ್ಯಾದಿ ಈ ಸಂದರ್ಭ ನಡೆಸಕೂಡದು. ರೋಗ ಸಂಬಂಧ ತಲೆದೋರಿರುವ ಮುಗ್ಗಟ್ಟು ಪರಿಹರಿಸುವ ನಿಟ್ಟಿನಲ್ಲಿ ಜತಗೂಡಿ ನೌಕರಿ ಮಾಲಿಕರಿಗೆ ಸಹಾಯಮಾಡಬೇಕು ಎಂದು ಲೇಬರ್ ಕಮೀಷನರ್ ಸಕ್ರ್ಯುಲರ್‍ನಲ್ಲಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries