ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಡಿಜಿಟಲ್ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಫೆÇೀನ್ ಪೇ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಖಾಸಗಿ ಕ್ಷೇತ್ರದ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದು, ಅದರ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಬ್ಯಾಂಕ್ ನ ಆಡಳಿತ ನಿರ್ವಹಣೆಯನ್ನು ಹೊತ್ತುಕೊಂಡ ಬೆನ್ನಲ್ಲೇ ಇದೀಗ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆ ಫೆÇೀನ್ ಪೇ ಸೇವೆ ಸ್ಥಗಿತಗೊಂಡಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಫೆÇೀನ್ ಪೇ ಸಿಇಒ ಸಮೀರ್ ನಿಗಮ್ ಅವರು 'ಯೆಸ್ ಬ್ಯಾಂಕ್ ಜೊತೆ ಫೆÇೀನ್ ಪೇ ಹಣಕಾಸು ವ್ಯವಹಾರ ನಡೆಸುತ್ತಿತ್ತು. ಈಗ ವ್ಯವಹಾರಕ್ಕೆ ನಿಬರ್ಂಧ ಹೇರಿದ್ದರಿಂದ ಪೆÇೀನ್ ಪೇ ಸೇವೆ ಸಹ ಅಲಭ್ಯವಾಗಿದೆ. ಶೀಘ್ರವೇ ನಾವು ಸೇವೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಫೆÇೀನ್ ಪೇ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ಕುರಿತು ಮಾಹಿತಿ ನೀಡಿದ್ದು ಶೀಘ್ರದಲ್ಲೇ ಮತ್ತೆ ವಾಪಸ್ ಆಗುತ್ತೇವೆ ಎಂದು ಟ್ವೀಟ್ ಮಾಡಿದೆ. ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗ ಸೇವೆಗಳಿಗೆ ಮರಳಲು ಪ್ರಯತ್ನಿಸುತ್ತೇವೆ’ ಎಂದು ಫೆÇೀನ್ ಪೇ ಕಂಪನಿ ಹೇಳಿದೆ. ಫೆÇೀನ್ ಪೇ ಕಂಪನಿಯು ಯೆಸ್ ಬ್ಯಾಂಕ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಈಗ ಹಣಕಾಸು ಬಿಕ್ಕಟ್ಟಿಗೆ ಸಿಲುಕಿಕೊಂಡಿರುವ ಯೆಸ್ ಬ್ಯಾಂಕ್‍ನ ಚಟುವಟಿಕೆಗಳ ಮೇಲೆ ಆರ್‍ಬಿಐ ನಿಷೇಧ ಹೇರಿದ ನಂತರ ಫೆÇೀನ್ ಪೇ ಸೇವೆಗಳು ಅಲಭ್ಯವಾಗಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಫೆÇೀನ್ ಪೇ ಸಿಇಒ ಸಮೀರ್, ಆತ್ಮೀಯ ಗ್ರಾಹಕರೇ, ದೀರ್ಘ ಅಡಚಣೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್ (ಯೆಸ್ ಬ್ಯಾಂಕ್) ಅನ್ನು ಆರ್‍ಬಿಐ ನಿಷೇಧಿಸಿದೆ. ಮರಳಿ ಸೇವೆಗಳನ್ನು ಮುಂದುವರೆಸಲು ತಂಡವು ಬಿಡುವಿಲ್ಲದೇ ಕೆಲಸ ಮಾಡುತ್ತಿದೆ. ಕೆಲವೇ ಗಂಟೆಗಳಲ್ಲಿ ಕಾರ್ಯನಿರ್ವಹಿಸುವ ಭರವಸೆ ಇದೆ. ನಿಮ್ಮ ತಾಳ್ಮೆಗೆ ಧನ್ಯವಾದ ಎಂದು ಹೇಳಿದ್ದಾರೆ.
ವಾಲ್ ಮಾರ್ಟ್ ವಹಿವಾಟಿನ ಮೇಲೂ ಪರಿಣಾಮ:
ಫೆÇೀನ್ ಪೇ ಮಾಲೀಕತ್ವ ಹೊಂದಿರುವ ಅಮೆರಿಕ ಮೂಲದ ಜಾಗತಿಕ ಉದ್ಯಮ ದೈತ್ಯ ವಾಲ್ ಮಾರ್ಟ್ ನ ವಾಣಿಜ್ಯ ವಹಿವಾಟಿನ ಮೇಲೂ ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಪರಿಣಾಮ ಬೀರಿದೆ ಎನ್ನಲಾಗಿದೆ.
ಡಿಜಿಟಲ್ ವಹಿವಾಟು ದಿಢೀರ್ ಸ್ಥಗಿತ:
ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಪರಿಣಾಮ ದೇಶದಲ್ಲಿ ಇತ್ತೀಚಗಷ್ಟೇ ಪ್ರಾಮುಖ್ಯತೆ ಪಡೆಯುತ್ತಿದ್ದ ಡಿಜಿಟಲ್ ವಹಿವಾಟುಗಳ ಮೇಲೆ ದಿಢೀರ್ ವ್ಯತಿರಿಕ್ತ ಪರಿಣಾಮ ಬೀರಿದ್ದು, ಪ್ರಮುಖವಾಗಿ ಫೆÇೀನ್ ಪೇ ಸ್ಥಗಿತ ದೇಶದ ಪ್ರಮುಖ ದೈನಂದಿನ ಸೇವಾ ಸಂಸ್ಥೆಗಳಾದ ಕ್ಲಿಯರ್ ಟ್ರಿಪ್, ಸ್ವಿಗ್ಗಿ, ಏರ್ಟೆಲ್, ರೆಡ್ ಬಸ್, ಪಿವಿಆರ್ ಮತ್ತು ಉಡಾನ್ ನಂತಹ ಸಂಸ್ಥೆಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.


