HEALTH TIPS

ಮೇ 03 ರವರೆಗೆ ರೈಲು ಸೇವೆಗಳಿಲ್ಲ: ಮುಂದಿನ ಆದೇಶದವರೆಗೆ ಟಿಕೆಟ್ ಬುಕಿಂಗ್ ಬಂದ್!

       ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ 03 ವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಅವಧಿಯ ವರೆಗೆ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿರುವುದಷ್ಟೇ ಅಲ್ಲದೇ ಟಿಕೆಟ್ ಬುಕಿಂಗ್ ನ್ನೂ ಬಂದ್ ಮಾಡಿದೆ.
     ರೈಲ್ವೆ ಸಚಿವಾಲಯ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರೀಮಿಯಂ ರೈಲು, ಎಕ್ಸ್ ಪ್ರೆಸ್ ಟ್ರೈನ್ ಗಳು, ಪ್ಯಾಸೆಂಜರ್ ರೈಲುಗಳು, ಸಬರ್ಬನ್ ರೈಲು, ಕೋಲ್ಕತ್ತಾ ಮೆಟ್ರೋ ರೈಲು, ಕೊಂಕಣ ರೈಲ್ವೆ ಸೇರಿದಂತೆ ಹಲವು ರೈಲುಗಳನ್ನು ಮೇ 03 ರ ವರೆಗೆ ರದ್ದುಗೊಳಿಸಲಾಗಿದೆ. ಎಲ್ಲಾ ಟಿಕೆಟ್ ಬುಕಿಂಗ್ ನ್ನೂ ಬಂದ್ ಮಾಡಲಾಗಿದೆ. ಇ-ಟಿಕೆಟ್ ಗಳು, ಟಿಕೆಟ್ ಕಾಯ್ದಿರಿಸುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಆನ್ ಲೈನ್ ಟಿಕೆಟ್ ರದ್ದತಿ ಸೌಲಭ್ಯ ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸಲಿದೆ.
     ಜೂ.21 ವರೆಗೆ ಕಾಯ್ದಿರಿಸಲಾಗಿದ್ದ ಟಿಕೆಟ್ ಗಳ ರದ್ದತಿಯ ಮರುಪಾವತಿಯನ್ನು ಪ್ರಯಾಣಿಕರು ಪಡೆಯಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries