HEALTH TIPS

ಮುಂಬೈ: ಬಾಂದ್ರಾ ನಿಲ್ದಾಣಕ್ಕೆ ಬಂದ ಸಾವಿರಾರು ವಲಸೆ ಕಾರ್ಮಿಕರು, ವಾಪಸ್ ಊರಿಗೆ ಹೋಗಲು ಪಟ್ಟು

   
       ಮುಂಬೈ: ದೇಶಾದ್ಯಂತ ತೀವ್ರವಾಗಿ ವ್ಯಾಪಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದ್ದು, ಇದರಿಂದ ಕೆರಳಿದ ಮುಂಬೈನ ಸಾವಿರಾರು ವಲಸೆ ಕಾರ್ಮಿಕರು, ದಿನಗೂಲಿಗಳು ಮಂಗಳವಾರ ದಿಢೀರ್ ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ತಾವು ವಾಪಸ್ ಮನೆಗೆ ಹೋಗಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.
       ಮೋದಿ ಲಾಕ್ ಡೌನ್ ವಿಸ್ತರಿಸಿದ ಕೆಲವೇ ಗಂಟೆಗಳಲ್ಲಿ ರಸ್ತೆಗೆ ಬಂದ ಸಾವಿರಾರು ಕಾರ್ಮಿಕರು, ತಾವು ವಾಪಸ್ ತಮ್ಮ ತಮ್ಮ ಊರಿಗೆ ತೆರಳಲು ಬಸ್ ಇಲ್ಲವೆ ರೈಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಲಾಕ್ ಡೌನ್ ವಿಸ್ತರಿಸಿರುವುದು ಸರಿಯಲ್ಲ. ನಮ್ಮ ಬದುಕು ದುಸ್ತರವಾಗಿದೆ. ನಮ್ಮೂರಿಗೆ ನಮ್ಮನ್ನು ಕಳುಹಿಸಲು ವ್ಯವಸ್ಥೆ ಮಾಡಿ ಎಂಬ ಆಗ್ರಹದೊಂದಿಗೆ ರಸ್ತೆಗಿಳಿದ ಸಾವಿರಾರು ಮಂದಿಯನ್ನು ಪೆÇಲೀಸರು ಲಾಠಿ ಪ್ರಯೋಗಿಸಿ ಚದುರಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
      ಮುಂಬೈನ ಪಟೇಲ್ ನಗರಿ ಕೊಳೆಗೇರಿಯಲ್ಲಿ ವಾಸವಾಗಿರುವ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮಂಗಳವಾರ ಮಧ್ಯಾಹ್ನ ಬಾಂದ್ರಾದ ರೈಲ್ವೇ ನಿಲ್ದಾಣದ ಸಮೀಪದ ಪಶ್ಚಿಮ ಬಸ್ ಡಿಪೆÇೀಟ್ ಬಳಿ ಜಮಾಯಿಸಿದರು. ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
      ಪ್ರತಿಭಟನೆಗೆ ಮುಂದಾಗಿದ್ದವರೆಲ್ಲರೂ ಉತ್ತರ ಪ್ರದೇಶ ಮತ್ತು ಪಶ್ಚಿಮಬಂಗಾಳ ಮೂಲದವರು ಎಂದು ಹೇಳಲಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ಹೆಸರು ಹೇಳಲಿಚ್ಚಿಸದ ವಲಸೆ ಕಾರ್ಮಿಕರೊಬ್ಬರು, ಎನ್‍ಜಿಒಗಳು ನಮಗೆ ಆಹಾರವನ್ನೇನೋ ನೀಡುತ್ತಿವೆ. ಆದರೆ, ಬಹುತೇಕರು ಈ ಸನ್ನಿವೇಶದಲ್ಲಿ ತಮ್ಮ ಊರು ಸೇರಿಕೊಳ್ಳಲು ಬಯಸುತ್ತಿದ್ದಾರೆ. ಲಾಕ್ ಡೌನ್ ನಮ್ಮ ಬದುಕನ್ನು ದುಸ್ತರಗೊಳಿಸಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries