HEALTH TIPS

ಮೇ.03 ರಂದು ವಿಮಾನ, ರೈಲು ಸೇವೆ ಪ್ರಾರಂಭ ಬಹುತೇಕ ಅನುಮಾನ!

       
      ನವದೆಹಲಿ: ಕೊರೋನಾ ವೈರಸ್ ತಡೆಗಟ್ಟಲು ವಿಧಿಸಲಾಗಿರುವ 40 ದಿನಗಳ ಎರಡನೇ ಸುತ್ತಿನ ಲಾಕ್ ಡೌನ್ ಮೇ.03 ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ರೈಲು ಹಾಗೂ ವಿಮಾನ ಸೇವೆಗಳು ಪ್ರಾರಂಭವಾಗುವುದು ಬಹುತೇಕ ಅನುಮಾನಗೊಂಡಿದೆ.
         ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಿನ್ನೆ ನಡೆದ ಗ್ರೂಪ್ ಆಫ್ ಮಿನಿಸ್ಟರ್ಸ್ ನ ಸಭೆಯಲ್ಲಿ ಭಾಗವಹಿಸಿದವರು ಈ ಬಗ್ಗೆ ಮಾಹಿತಿ ನೀಡಿದ್ದು, ಮೇ.03 ರಂದು ಲಾಕ್ ಡೌನ್ ತೆರವುಗೊಂಡರೂ ರೈಲು ಹಾಗೂ ವಿಮಾನಗಳ ಸೇವೆಗಳು ಲಭ್ಯವಿರುವುದಿಲ್ಲ. ಮೇ. 15 ರಿಂದ  ರೈಲು, ವಿಮಾನ ಸೇವೆಗಳು ಪ್ರಾರಂಭವಾಗುವಂತೆ ಸಲಹೆ ನೀಡಲಾಗಿದೆ ಎಂದು ಹೆಸರನ್ನು ಪ್ರಕಟಿಸಲು ಇಚ್ಛಿಸದ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.
       ಸಭೆಯಲ್ಲಿ ಟೆಕ್ಸ್‍ಟೈಲ್ ಸಚಿವೆ ಸ್ಮೃತಿ ಇರಾನಿ, ವಿಮಾನಯಾನ ಸಚಿವ ಹರ್ದೀಪ್ ಪುರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಬಂದ ಪ್ರಸ್ತಾವನೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳಿಸಲಾಗುತ್ತದೆ. ಅಂತಿಮ ನಿರ್ಣಯವನ್ನು ಪ್ರಧಾನಿ ಮೋದಿ ಕೈಗೊಳ್ಳುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries