ಕಾಸರಗೋಡು: ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆಯ 12 ಮಂದಿ ಸೋಮವಾರ ಗುಣಮುಖರಾಗಿದ್ದಾರೆ. ಏ.13 ರಂದು ಕೇರಳದಲ್ಲಿ ಒಟ್ಟು 19 ಮಂದಿ ಗುಣಮುಖರಾಗಿದ್ದಾರೆ.
ಕಾಸರಗೋಡು-12, ಪತ್ತನಂತಿಟ್ಟ-3, ತೃಶ್ಶೂರು-3 ಮತ್ತು ಕಣ್ಣೂರು ಜಿಲ್ಲೆಯಲ್ಲಿ 1 ಎಂಬಂತೆ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಹೊಸ ಪ್ರಕರಣ ದಾಖಲಾಗಿಲ್ಲ. ಭಾನುವಾರವೂ ಕಾಸರಗೋಡು ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿರಲಿಲ್ಲ.
ರಾಜ್ಯದಲ್ಲಿ 3 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಇಬ್ಬರು ಹಾಗು ಪಾಲ್ಘಾಟ್ ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ಬಾಧಿಸಿದೆ. ಸೋಂಕು ಬಾಧಿತರಲ್ಲಿ ಒಬ್ಬರು ವಿದೇಶದಿಂದ ಬಂದವರು. ಇನ್ನಿಬ್ಬರು ಕೊರೊನಾ ವೈರಸ್ ಸೋಂಕು ಬಾಧಿಸಿದವರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ ಈ ವರೆಗೆ 378 ಮಂದಿ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಪ್ರಸ್ತುತ 178 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ ಕೇರಳದಲ್ಲಿ 198 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಸೋಮವಾರ 86 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದಲ್ಲಿ 112183 ಮಂದಿ ನಿಗಾದಲ್ಲಿದ್ದು, ಈ ಪೈಕಿ 111468 ಮಂದಿ ಮನೆಗಳಲ್ಲೂ, 715 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಒಟ್ಟು 15683 ಸ್ಯಾಂಪಲ್‍ಗಳ ಪೈಕಿ 14829 ನೆಗೆಟಿವ್ ಫಲಿತಾಂಶ ಬಂದಿದೆ. ಕೇರಳದಲ್ಲಿ ರೋಗ ಬಾಧಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಒಟ್ಟು 73 ಮಂದಿ ಗುಣಮುಖ :
ಸೋಮವಾರ 12 ಮಂದಿ ಗುಣಮುಖರಾಗುವುದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 166 ಕೊರೊನಾ ವೈರಸ್ ಸೋಂಕು ಬಾ„ತರ ಪೈಕಿ 73 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 10056 ಮಂದಿ ನಿಗಾದಲ್ಲಿದ್ದು, ಇವರಲ್ಲಿ 9840 ಮಂದಿ ಮನೆಗಳಲ್ಲೂ, 216 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಇದು ವರೆಗೆ 2533 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, 1659 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 540 ಸ್ಯಾಂಪಲ್ ವರದಿ ಬರಲು ಬಾಕಿಯಿದೆ. ಸೋಮವಾರ ಹೊಸದಾಗಿ ಒಬ್ಬರನ್ನು ಐಸೋಲೇಷನ್ ವಾರ್ಡ್‍ಗೆ ಕಳುಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಿಂದ 10 ಮಂದಿ ಮತ್ತು ಜನರಲ್ ಆಸ್ಪತ್ರೆಯಿಂದ ಇಬ್ಬರು ಬಿಡುಗಡೆಗೊಂಡಿದ್ದಾರೆ. ಮನೆಗಳಲ್ಲಿ ನಿಗಾದಲ್ಲಿದ್ದ 342 ಮಂದಿ ನಿಗಾ ಕಾಲಾವ„ ಪೂರ್ತಿಯಾಗಿದೆ.
39 ಕೇಸುಗಳ ದಾಖಲು :
ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 39 ಕೇಸುಗಳನ್ನು ದಾಖಲಿಸಲಾಗಿದೆ. 95 ಮಂದಿಯನ್ನು ಬಂಧಿಸಲಾಗಿದೆ. 21 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 4 ಕೇಸುಗಳು, ಕುಂಬಳೆ 4, ಕಾಸರಗೋಡು 3, ವಿದ್ಯಾನಗರ 4, ಆದೂರು 2, ಬೇಡಗಂ 4, ಮೇಲ್ಪರಂಬ 2, ಬೇಕಲ 2, ಅಂಬಲತ್ತರ 4, ನೀಲೇಶ್ವರ 1, ಚಂದೇರ 4, ಚೀಮೇನಿ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಈ ವರೆಗೆ 765 ಕೇಸುಗಳು ದಾಖಲಾಗಿವೆ. 1288 ಮಂದಿಯನ್ನು ಬಂ„ಸಲಾಗಿದೆ. 460 ವಾಹನಗಳನ್ನು ವಶಪಡಿಸಲಾಗಿದೆ.
ಕ್ಯಾಂಪೆÇ್ಕೀ ಬುಧವಾರ ಕಾರ್ಯಾಚರಿಸಬಹುದು :
ಕೃಷಿಕರಿಂದ ಅಡಕೆ ಸಂಗ್ರಹಿಸುವ ನಿಟ್ಟಿನಲ್ಲಿ ಕ್ಯಾಂಪೆÇ್ಕೀ ಸಂಸ್ಥೆಗೆ ಲಾಕ್ ಡೌನ್ ಆದೇಶದಿಂದ ವಾರಕ್ಕೊಂದು ದಿನ ರಿಯಾಯಿತಿ ನೀಡಲಾಗಿದೆ. ಆರೋಗ್ಯ ಇಲಾಖೆಯ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಬುಧವಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಈ ಸಂಸ್ಥೆ ಕಾರ್ಯಾಚರಿಸಬಹುದೆಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.


