ನವದೆಹಲಿ: ಬಾಕಿ ಇರುವ 5 ಲಕ್ಷದವರೆಗಿನ ಎಲ್ಲಾ ಆದಾಯ ತೆರಿಗೆ ಮರುಪಾವತಿಗಳನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ ಘೋಷಿಸಿದೆ.
ದೇಶದಲ್ಲಿ ಕೊರೋನಾ ವೈರಸ್ ಲಾಕ್‍ಡೌನ್ ಕಾರಣ ಈ ನಿರ್ಧಾರಕ್ಕೆ ಬರಲಾಗಿದ್ದು ಈ ನಿರ್ಧಾರದಿಂದ ಸುಮಾರು 14 ಲಕ್ಷ ತೆರಿಗೆದಾರರಿಗೆ ಪ್ರಯೋಜನವಾಗಲಿದೆ.ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ವೇತನ ಕಡಿತ ಅಥವಾ ಉದ್ಯೋಗ ನಷ್ಟದಿಂದಾಗಿ ನಗದು ಬಿಕ್ಕಟ್ಟು ಎದುರಿಸುತ್ತಿರುವ ಅಥವಾ ಅವರ ಉದ್ಯೋಗದಾತರು ತಮ್ಮ ಸಂಬಳ ಅಥವಾ ವೇತನವನ್ನು ಬಿಡುಗಡೆ ಮಾಡಲು ಕಾಯುತ್ತಿರುವ ವ್ಯಕ್ತಿಗಳಿಗೆ ಈ ಇದರಿಂದ ಪ್ರಯೋಜನವಾಗಲಿದೆ.
ಕೊರೋನಾ ವೈರಸ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮತ್ತು ತೆರಿಗೆದಾರರಿಗೆ ತಕ್ಷಣದ ಪರಿಹಾರ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. 5 ಲಕ್ಷ ರೂ.ವರೆಗೆ ಬಾಕಿ ಇರುವ ಎಲ್ಲಾ ಆದಾಯ ತೆರಿಗೆ ಮರುಪಾವತಿಗಳನ್ನು ಮತ್ತು ಜಿಎಸ್ಟಿ ಕಸ್ಟಮ್ ಮರುಪಾವತಿಯನ್ನು ತಕ್ಷಣದಿಂದ ಜಾರಿಗೆ ತರಲು ಜಿಒಐ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.


