HEALTH TIPS

ಕೋವಿಡ್-19: ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಪೆÇಲೀಸರ ಡಬ್ಬಲ್ ಲಾಕ್ ಭದ್ರತೆ


       ಕಾಸರಗೋಡು: ಕೋವಿಡ್-19 ಅತಿಶೀಘ್ರ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಪೆÇಲೀಸರು ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಿದ್ದಾರೆ. ಇದರ ಅಂಗವಾಗಿ 6 ಗ್ರಾಮಪಂಚಾಯಿತಿಗಳು ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಬಿಗಿ ಪೆÇಲೀಸ್‍ಬಂದೋಬಸ್ತ್ ಏರ್ಫಡಿಸಲಾಗಿದೆ.  ರಾಜ್ಯ ಸರ್ಕಾರದ ಆದೇಶ ಪ್ರಕಾರ ಈ ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಲಾಗಿದೆ.
       ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡ್, ಪಳ್ಳಿಕ್ಕರೆ, ಉದುಮಾ ಗ್ರಾಮಪಂಚಾಯತ್‍ಗಳಲ್ಲಿ ಪೆÇಲೀಸರ ವಿಶೇಷ ನಿಗಾದಲ್ಲಿವೆ. ಕಾಸರಗೋಡು ನಗರಸಭೆಯ ಹೊಸಬಸ್ ನಿಲ್ದಾಣ, ಹಳೇ ಬಸ್‍ನಿಲ್ದಾಣ, ಉಳಿಯತ್ತಡ್ಕ, ತಳಂಗರೆ, ನೆಲ್ಲಿಕುಂಜೆ ಬೀಚ್, ಮಾರುಕಟ್ಟೆ ಪ್ರದೇಶಗಳಲ್ಲಿ, ಮಧೂರು ಗ್ರಾಮಪಂಚಾಯಿತಿಯ ಮಾಯಿಪ್ಪಾಡಿ, ಕಂಬಾರ್-ಬೆದ್ರಡ್ಕ ಪ್ರದೇಶಗಳು, ಪಳ್ಳಿಕ್ಕರೆ ಗ್ರಾಮಪಂಚಾಯಿತಿಯ ಬೇಕಲಕೋಟೆ ಆಸುಪಾಸಿನ ಪ್ರದೇಶಗಳು,ಬೇಕಲಜಂಕ್ಷನ್, ಪಳ್ಳಿಕ್ಕರೆ ಪೇಟೆ ಪ್ರದೆಶಗಳಲ್ಲೂ, ಉದುಮಾ ಗ್ರಾಮಪಂಚಾಯಿತಿಯ ಪಾಲಕುನ್ನು, ಉದುವi ಪೇಟೆ, ಚೆಮ್ನಾಡ್ ಗ್ರಾಮಪಂಚಾಯಿತಿಯ ಕ¼ ನಾಡ್, ಮೇಲ್ಪರಂಬ, ಕೋಳಿಯಡ್ಕ, ಚಟ್ಟಂಚಾಲ್ ಪೇಟೆ, ಪೆÇಯಿನಾಚಿ, ಮಾಂಗಾಡ್‍ಪ್ರದೇಶ, ಚಂಗಳ ಗ್ರಾಮಪಂಚಾಯಿತಿಯ ಚೆರ್ಕಳ ಪೇಟೆ, ಎಡನೀರು, ನಾಯನ್ಮಾರುಮೂಲೆ, ಬಿ.ಸಿ.ರೋಡ್ ಜಂಕ್ಷನ್,
ಬೇವಿಂಜೆ ಪ್ರದೇಶ, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯಿತಿಯ ಎರಿಯಾಲ್, ಮೊಗ್ರಾಲ್ ಪುತ್ತೂರು ಪೇಟೆ, ಸಿರಿಬಾಗಿಲು ಪೆÇಲೀಸರ ವಿಶೇಷ ಭದ್ರತೆಯಲ್ಲಿರುವ ಪ್ರದೇಶಗಳಾಗಿದೆ.  ಈ ಪ್ರದೇಶಗಳಲ್ಲಿ ಪೆÇಲೀಸರ ಕಾವಲು ಇರಲಿದ್ದು, ಜನರು ಮನೆಗಳಿಂದ ಹೊರಗಿಳಿಯಲು ಅನುಮತಿಯಿರುವುದಿಲ್ಲ. ಅನಿವಾರ್ಯ ಸಾಮಾಗ್ರಿಗಳ ಸಹಿತ ಸೇವೆಗಳನ್ನು ಪೆÇಲೀಸರೇ ತಲಪಿಸುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries