HEALTH TIPS

ಮನೆಬಾಗಿಲಿಗೆ ಮದ್ಯ ಪೂರೈಕೆ-ನೂರು ರೂ. ಸರ್ವೀಸ್ ಚಾರ್ಜ್, ಮೂರು ಲೀ. ನಿಗದಿ: ಸಕ್ರ್ಯುಲರ್ ಜಾರಿ


       ಕಾಸರಗೋಡು: ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಲಭ್ಯವಾಗದೆ ಶಾರೀರಿಕ ಅಸೌಖ್ಯ ಕಾಣಿಸಿಕೊಂಡವರಿಗೆ ವೈದ್ಯರ ಶಿಫಾರಸಿನ ಮೇರೆಗೆ  ಮನೆಗಳಿಗೆ ಮದ್ಯ ಪೂರೈಕೆಗೆ ಅಬಕಾರಿ ಇಲಾಖೆ ತೀರ್ಮಾನಿಸಿದೆ. ವೈದ್ಯರ ಶಿಫಾರಸುಪತ್ರ ಪ್ರಕಾರ ಒಬ್ಬರಿಗೆ ವಾರಕ್ಕೆ ಮೂರು ಲೀ. ಲಿಕ್ಕರ್ ಲಭ್ಯವಾಗಲಿದೆ. ಇದನ್ನು ಬೀವರೇಜಸ್ ಔಟ್‍ಲೆಟ್‍ನ ನಿಗದಿತ ಬೆಲೆಗೆ ಪೂರೈಕೆ ಮಾಡಲಿದ್ದು, ನೂರು ರೂ. ಸರ್ವೀಸ್ ಚಾರ್ಜ್ ವಸೂಲಿ ಮಾಡಲಾಗುವುದು.
       ಹೆಚ್ಚು ಬೆಲೆಯಿಲ್ಲದ ರಮ್ ಮತ್ತು ಬ್ರಾಂಡಿ ಮಾತ್ರ ವಿತರಣೆಯಾಗಲಿದೆ. ಮದ್ಯ ಮನೆಬಾಗಿಲಿಗೆ ವಿತರಣೆಗಾಗಿ ಒಂದು ವಾಹನದಲ್ಲಿ ಇಬ್ಬರು ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ. ಈ ವಾಹನಕ್ಕೆ ಗುರುತಿನ ಚೀಟಿ ಹಾಗೂ ಸಿಬ್ಬಂದಿಗೆ ಸನಿಹದ ಪೊಲೀಸ್ ಠಾಣೆಯಿಂದ ಅನುಮತಿ ಪತ್ರ ಪಡೆದಿರಬೇಕು. ಮದ್ಯ ಸಾಗಾಟದ ವಾಹನಕ್ಕೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಬೆಂಗಾವಲು ಪಡೆಯಬೇಕೆಂದು ಬೀವರೇಜಸ್ ಕಾರ್ಪೋರೇಶನ್ ಎಂ.ಡಿ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
      ಬೀವರೇಜಸ್ ಕಾರ್ಪೊರೇಶನ್ ವೇರ್ ಹೌಸ್‍ಗೆ ಒಂದು ದಿನದಲ್ಲಿ ತಲುಪುವ ಪಾಸ್‍ಗಳ ಆಧಾರದಲ್ಲಿ ಒಂದೇ ಬಾರಿಗೆ ಮದ್ಯ ಪೂರೈಸಬೇಕು. ಸಂಚರಿಸಬೇಕಾದ ದೂರ, ಪಾಸ್‍ಗಳ ಒಟ್ಟು ಸಂಖ್ಯೆ ಆಧರಿಸಿ ವಾಹನ ಗೊತ್ತುಪಡಿಸುವ ಜವಾಬ್ದಾರಿಯನ್ನು ಆಯಾ ವೇರ್‍ಹೌಸ್ ಪ್ರಬಂಧಕರಿಗೆ ವಹಿಸಿಕೊಡಲಾಗಿದೆ. ಅಗತ್ಯವಿದ್ದಲ್ಲಿ ಇಬ್ಬರಿಗಿಂತ ಹೆಚ್ಚಿನ ಸಇಬ್ಬಂದಿಯನ್ನೂ ಮದ್ಯಪೂರೈಕೆಗೆ ನಿಯೋಜಿಸಬಹುದಾಗಿದೆ. ಆಯಾ ದಿನದ ಮದ್ಯ ಸ್ಟಾಕ್ ಲೆಕ್ಕಾಚಾರ ಕಂಪ್ಯೂಟರ್ ಪ್ರೋಗ್ರಾಮರ್‍ನಲ್ಲಿ ನಮೂದಿಸಿರಬೇಕೆಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries