HEALTH TIPS

ಕೊರೋನಾ ವೈರಸ್: 2 ದಿನದಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಶೇ.47ರಷ್ಟು ಏರಿಕೆ

                 
       ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಸೋಂತಿಕರ ಸಂಖ್ಯೆ ಕೇವಲ 2 ದಿನಗಳ ಅಂತರದಲ್ಲ ಶೇ.47ರಷ್ಟು ಹೆಚ್ಚಳವಾಗಿರುವ ಅತ್ಯಂತ ಕಳವಳಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ.
    ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋದರೆ, ಮುಂದಿನ 13 ದಿನಗಳಲ್ಲಿ ಕೊರೋನಾ ಪೀಡಿತರ ಸಂಖ್ಯೆ ದೇಸದಲ್ಲಿ 10 ಸಾವಿರದ ಗಡಿ ದಾಟುವ ಸಂಭವವಿದೆ ಎಂಬ ಆತಂಕಕಾರಿ ಮಾಹಿತಿಯೂ ಬೆಳಕಿಗೆ ಬಂದಿದೆ. 48 ತಾಸುಗಳ ಅವಧಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ದೇಶದಲ್ಲಿ ಶೇ.37ರಷ್ಟು ಹೆಚ್ಚಳವಾಗಿ, 1251ಕ್ಕೆ ಮುಟ್ಟಿದ್ದೇ ಈ ವರೆಗಿನ ಅತ್ಯಧಿಕ ಏರಿಕ ಪ್ರಮಾಣವಾಗಿತ್ತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಸೋಂಕಿತರ ಸಂಖ್ಯೆ 1834ಕ್ಕೆ ಏರಿಕೆಯಾದ ಸಂದರ್ಭದಲ್ಲಿ ಏರಡು ದಿನಗಳ ಅಂತರದಲ್ಲಿ ಕೊರೋನ ಪೀಡಿತರ ಪ್ರಮಾಣದಲ್ಲಿ ಶೇ.47ರಷ್ಟು ಹೆಚ್ಚಳ ಕಂಡು ಬಂದಿದೆ.
     ಪ್ರಸ್ತುತ ಜಾಗತಿಕ ಕೊರೋನಾ ಕೇಂದ್ರ ಬಿಂದುವಾಗಿರುವ ಅಮೆರಿಕಾಕ್ಕೆ ಹೋಲಿಕೆ ಮಾಡಿದರೆ, ಭಾರತದ ಕೊರೋನಾ ಪ್ರಕರಣಗಳು ಕಡಿಮೆ ಇವೆ. ಆದರೆ, ವಿವಿಧ ಕ್ರಮಗಳನ್ನು ಕೈಗೊಂಡು ಕೊರೋನಾ ಸೋಂಕು ನಿಗ್ರಹಿಸಿದ ಸಿಂಗಾಪುರ ಅಥವಾ ದಕ್ಷಿಣ ಕೊರಿಯಾದಂತಹ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದ ಗ್ರಾಫ್ ಏರುತ್ತಲೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries