ನವದೆಹಲಿ: ಭಾರತದಲ್ಲಿ ಎರಡನೇ ಹಂತದ ಲಾಕ್ ಮುಗಿಯುತ್ತಾ ಬರ್ತಿದೆ. ಮೇ 3ರ ತನಕ ಲಾಕ್‍ಡೌನ್ ಜಾರಿಯಲ್ಲಿದೆ. ಈ ಮಧ್ಯೆ ಹಲವು ರಾಜ್ಯಗಳಲ್ಲಿ ಲಾಕ್‍ಡೌನ್‍ನಿಂದ ವಿನಾಯಿತಿ ಘೋಷಣೆ ಮಾಡಿದ್ದಾರೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಹೊರತು, ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಸಹಜವಾಗಿ ಆತಂಕ ಹೆಚ್ಚಿಸುತ್ತಿದೆ.
ಮತ್ತೊಂದೆಡೆ ಲಾಕ್‍ಡೌನ್ ಚಾಲ್ತಿಯಲ್ಲಿದ್ದರೂ ಜನರು ಓಡಾಡುವುದು, ಕಾನೂನು ಉಲ್ಲಂಘನೆ, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವುದು, ಚಿಕಿತ್ಸೆಗೆ ಸ್ಪಂದಿಸದೆ ಇರುವುದು ಇಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಹಿನ್ನೆಲೆ 8 ರೂ. ಕೆಜಿಯಂತೆ 3 ಕೆಜಿ ಗೋಧಿ, 12 ರೂ. ಕೆಜಿಯಂತೆ 2 ಕೆಜಿ ಅಕ್ಕಿಯನ್ನು ಬಡತನ ರೇಖೆಗಿಂತ ಮೇಲ್ಪಟ್ಟ 3 ಕೋಟಿ ಪ್ರಜೆಗಳಿಗೆ ಸರ್ಕಾರದಿಂದಲೇ ವಿತರಿಸಲಾಗುತ್ತದೆ ಎಂದು ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಹಿನ್ನೆಲೆ 8 ರೂ. ಕೆಜಿಯಂತೆ 3 ಕೆಜಿ ಗೋಧಿ, 12 ರೂ. ಕೆಜಿಯಂತೆ 2 ಕೆಜಿ ಅಕ್ಕಿಯನ್ನು ಬಡತನ ರೇಖೆಗಿಂತ ಮೇಲ್ಪಟ್ಟ 3 ಕೋಟಿ ಪ್ರಜೆಗಳಿಗೆ ಸರ್ಕಾರದಿಂದಲೇ ವಿತರಿಸಲಾಗುತ್ತದೆ ಎಂದು ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಬಿಹಾರ್ ನಲ್ಲಿ 9 ಮಂದಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆ.
ರಾಜಸ್ಥಾನದಲ್ಲಿ ಶುಕ್ರವಾರ ಒಂದೇ ದಿನ 70 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 2,034ಕ್ಕೆ ಏರಿಕೆಯಾಗಿದೆ.
ಕೊರಾನಾ ವೈರಸ್ ಬೆನ್ನಲ್ಲೇ ಭಾರತ ಲಾಕ್ ಡೌನ್ ನಡುವೆಯೂ ಅಸ್ಸಾಂರನ್ನಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಪುಸ್ತಕದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರದಿಂದ ಅನುಮತಿ ನೀಡಲಾಗಿದೆ.
ತಮಿಳುನಾಡಿನಲ್ಲಿ 559 ಮಂದಿ ತಬ್ಲಿಘಿ ಜಮಾತ್‍ಗೆ ಹೋಗಿಬಂದವರಿದ್ದಾರೆ ಎಂದು ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ದೆಹಲಿಯ ಮೃಗಾಲಯಯದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿದ್ದು, ಹುಲಿಯ ರಕ್ತದ ಸ್ಯಾಂಪಲ್‍ನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಕೊರೊನಾ ಸಂದೇಹ ವ್ಯಕ್ತವಾಗಿದೆ.
ಉತ್ತರಾಖಂಡ್: ಒಂದು ಹೊಸ ಪ್ರಕರಣ ದಾಖಲಾಗಿದೆ. ಒಟ್ಟು 47 ಪ್ರಕರಣಗಳು ದಾಖಲಾಗಿದೆ.
ಚಂಡೀಗಢದಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ. 27 ಮಂದಿ ಕೊರೊನಾ ಸೋಂಕಿತರಿದ್ದಾರೆ. 15 ಮಂದಿ ಗುಣಮುಖರಾಗಿದ್ದಾರೆ.638 ಮಂದಿಯ ಸ್ಯಾಂಪಲ್‍ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಒಟ್ಟು 1846 ಕೊರೊನಾ ಪ್ರಕರಣಗಳಿವೆ. ಅದರಲ್ಲಿ 92 ಮಂದಿ ಮೃತಪಟ್ಟಿದ್ದಾರೆ. 210 ಮಂದಿ ಗುಣಮುಖರಾಗಿದ್ದಾರೆ. ಇಂದೋರ್‍ನಲ್ಲಿ 1029 ಕೊರೊನಾ ಪ್ರಕರಣಗಳಿವೆ. 55 ಮಂದಿ ಮೃತಪಟ್ಟಿದ್ದಾರೆ. ಭೋಪಾಲ್‍ನಲ್ಲಿ 360 ಪ್ರಕರಣಗಳಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ 4 ತಿಂಗಳ ಮಗುವೊಂದು ಮರಣಹೊಂದಿದ್ದು ಈವರೆಗೆ ಮೃತರ ಸಂಖ್ಯೆ ಮೂರಕ್ಕೇರಿದೆ.
ಧಾರಾವಿ:ಮುಂಬೈಯ ಯ ಧಾರಾವಿಯಲ್ಲಿ 6 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು 220 ಮಂದಿ ಸೋಂಕಿತರಿದ್ದಾರೆ. 14 ಮಂದಿ ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 29 ಹೊಸ ಪ್ರಕರಣಗಳು ದಾಖಲಾಗಿವೆ. ಕೊರೊನಾ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ. 18 ಮಂದಿ ಮೃತಪಟ್ಟಿದ್ದಾರೆ. 152 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಹಿಮಾಚಲಪ್ರದೇಶದಲ್ಲಿ 40 ಮಂದಿಗೆ ಕೊರೊನಾ ಸೋಂಕು ಹಿಮಾಚಲಪ್ರದೇಶದಲ್ಲಿ 40 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಓರ್ವ ಮೃತಪಟ್ಟಿದ್ದಾರೆ.14 ಪ್ರಕರಣಗಳು ಆಕ್ಟೀವ್ ಆಗಿವೆ.
ಪಶ್ಚಿಮ ಬಂಗಾಳದಲ್ಲಿ ಮತ್ತೆ 51 ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ 51 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದುವರೆಗೆ 985 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಪಂಜಾಬ್‍ನಲ್ಲಿ 298 ಮಂದಿ ಕೊರೊನಾ ಸೋಂಕಿತರು ಪಂಜಾಬ್: ಇದುವರೆಗೆ 298 ಮಂದಿ ಕೊರೊನಾ ಸೋಂಕಿತರಿದ್ದಾರೆ. 70 ಮಂದಿ ಗುಣಮುಖರಾಗಿದ್ದಾರೆ.17 ಮಂದಿ ಮೃತಪಟ್ಟಿದ್ದಾರೆ. 63 ಪ್ರಕರಣ ಎಸ್‍ಎಎಸ್ ನಗರ, 63 ಜಲಂಧರ್, 55 ಪಟಿಯಾಲಾದಲ್ಲಿ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.


