HEALTH TIPS

ಕೊರೊನಾ : ಕಾಸರಗೋಡಿಗೆ ಇಂದು ಸಮಾಧಾನ-ಇಬ್ಬರು ಸೋಂಕಿತರು ಗುಣಮುಖ-ರಾಜ್ಯದಲ್ಲಿ 7 ಪ್ರಕರಣ ಖಚಿತ

   
         ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಹೊಸ ಕೊರೊನಾ ಪ್ರಕರಣ ದಾಖಲಾಗಿಲ್ಲ. ಇದೇ ವೇಳೆ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ 175 ಮಂದಿಗೆ ಕೊರೊನಾ ದೃಢವಾಗಿದ್ದು, ಇದರಲ್ಲಿ 159 ಮಂದಿ ಗುಣಮುಖರಾಗಿದ್ದಾರೆ. 16 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.                       
       ಜಿಲ್ಲೆಯಲ್ಲಿ ಒಟ್ಟು 2375 ಮಂದಿ ನಿಗಾದಲ್ಲಿದ್ದು, ಇವರಲ್ಲಿ ಮನೆಗಳಲ್ಲಿ 2339 ಮಂದಿ, ಆಸ್ಪತ್ರೆಗಳಲ್ಲಿ 36 ಮಂದಿ ನಿಗಾದಲ್ಲಿದ್ದಾರೆ. ಶನಿವಾರ ನೂತನವಾಗಿ ಮೂವರನ್ನು ನಿಗಾ ವಾರ್ಡ್‍ಗೆ ದಾಖಲಿಸಲಾಗಿದೆ. 3643 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದ್ದು ಲಭ್ಯ 2669 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
       ಕೇರಳದಲ್ಲಿ 7 ಪ್ರಕರಣ :
     ಕೇರಳ ರಾಜ್ಯದಲ್ಲಿ ಹೊಸದಾಗಿ 7 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಒಟ್ಟು 7 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
      ಕೋಟ್ಟಯಂ, ಕೊಲ್ಲಂ ತಲಾ ಮೂವರಂತೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಕಣ್ಣೂರು ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ಬಾಧಿಸಿದೆ. ಕೊಲ್ಲಂನಲ್ಲಿ ರೋಗ ದೃಢೀಕರಿಸಿದ ಒಬ್ಬರು ಆರೋಗ್ಯ ಕಾರ್ಯಕರ್ತರು. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗು ವಯನಾಡು ಜಿಲ್ಲೆಯಲ್ಲಿ ಒಬ್ಬರು ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
        ಕೇರಳ ರಾಜ್ಯದಲ್ಲಿ ಒಟ್ಟು 457 ಮಂದಿಗೆ ರೋಗ ಬಾಧಿಸಿದ್ದು,   ಇದೀಗ ವಿವಿಧ ಆಸ್ಪತ್ರೆಗಳಲ್ಲಿ 116 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 21044 ಮಂದಿ ನಿಗಾದಲ್ಲಿದ್ದು, ಇವರಲ್ಲಿ 20580 ಮಂದಿ ಮನೆಗಳಲ್ಲೂ, 464 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶನಿವಾರ ಶಂಕಿತ 132 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಾಜ್ಯದ ವಯನಾಡು, ತೃಶ್ಶೂರು ಮತ್ತು ಆಲಪ್ಪುಳ ಜಿಲ್ಲೆಯಲ್ಲಿ ಯಾರೂ ಆಸ್ಪತ್ರೆಗಳಲಿಲ್ಲ. 22360 ಮಂದಿಯ ಸ್ಯಾಂಪಲ್ ಲ್ಯಾಬ್‍ಗೆ ಕಳುಹಿಸಲಾಗಿದ್ದು, ಲಭ್ಯ 21480 ನೆಗೆಟಿವ್ ಆಗಿದೆ.
       60 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 60 ಕೇಸುಗಳನ್ನು ದಾಖಲಿಸಲಾಗಿದೆ. 81 ಮಂದಿಯನ್ನು ಬಂ„ಸಲಾಗಿದೆ. 34 ವಾಹನಗಳನ್ನು ವಶಪಡಿಸಲಾಗಿದೆ. ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ 4, ವೆಳ್ಳರಿಕುಂಡ್ 5, ಬೇಕಲ 4, ಚಿತ್ತಾರಿಕಲ್ 6, ಆದೂರು 2, ಮಂಜೇಶ್ವರ 5, ನೀಲೇಶ್ವರ 3, ಮೇಲ್ಪರಂಬ 9, ಚಂದೇರ 3, ಚೀಮೇನಿ 1, ಬೇಡಗಂ 4, ಅಂಬಲತ್ತರ 2, ಕುಂಬಳೆ 4, ರಾಜಪುರಂ 4, ಕಾಸರಗೋಡು 4 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1753 ಕೇಸುಗಳನ್ನು ದಾಖಲಿಸಲಾಗಿದೆ. 2080 ಮಂದಿಯನ್ನು ಬಂಧಿಸಲಾಗಿದೆ. 710 ವಾಹನಗಳನ್ನು ವಶಪಡಿಸಲಾಗಿದೆ.
        ಗರ್ಭಣಿ ಮಹಿಳೆಗೆ ಪೆÇಲೀಸರಿಂದ ತಡೆ : ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆ ಸೂರ್ಲು ಬಟ್ಟಂಪಾರೆಯ ರಿಕ್ಷಾ ಚಾಲಕ ಅಶ್ರಫ್ ಅವರ ಪತ್ನಿ ಮುಬಶಿರ ಅವರನ್ನು ಆಸ್ಪತ್ರೆಗೆ ರಿಕ್ಷಾದಲ್ಲಿ ಕೊಂಡೊಯ್ಯುತ್ತಿದ್ದಾಗ ಕರಂದಕ್ಕಾಡ್‍ನಲ್ಲಿ ಪೆÇಲೀಸರು ತಡೆದು ನಿಲ್ಲಿಸಿ ಮನೆಗೆ ವಾಪಸು ಕಳುಹಿಸಿದ ಘಟನೆ ನಡೆದಿದೆ. ರಿಕ್ಷಾ ಚಾಲಕರು ಈ ಮಹಿಳೆಯನ್ನು ಒಳದಾರಿಯಲ್ಲಿ ಖಾಸಗಿ ಆಸ್ಪತ್ರೆಗೆ ಹೇಗೋ ತಲುಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries