ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 773 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಪರಿಣಾಮ ಒಟ್ಟು ಸೋಂಕಿತರ ಸಂಖ್ಯೆ 5194 ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 35 ಮಂದಿ ಮೃತಪಟ್ಟಿದ್ದು ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ಈ ನಡುವೆ ಜಗತ್ತಿನಾದ್ಯಂತ ಕೊರೋನಾ ಭಾದಿತರ ಸಂಖ್ಯೆ 15 ಲಕ್ಷ ದಾಟಿದ್ದು ಮೃತರ ಸಂಖ್ಯೆ 80 ಸಾವಿರ ದಾಟಿದೆ.
ಅಮೆರಿಕದಲ್ಲಿ ಒಂದೇ ದಿನ 2000 ಮಂದಿ ಮೃತಪಟ್ಟಿದ್ದು ಡೊನಾಲ್ಡ್ ಟ್ರಂಪ್ ಕಂಗಾಲಾಗಿದ್ದಾರೆ.


