ಕಾಸರಗೋಡು: ಹೆಚ್ಚು ಪ್ರಕರಣ ದಾಖಲಾಗಿದ್ದ ಕಾರಣದಿಂದ ರೆಡ್ ಝೋನ್ ಎಂದು ಗುರುತಿಸಿರುವ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದು, 24 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಎ.16 ರಂದು ಒಟ್ಟು 7 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದೇ ವೇಳೆ ಒಟ್ಟು 27 ಮಂದಿ ರೋಗ ಮುಕ್ತರಾಗಿದ್ದಾರೆ. ಜಿಲ್ಲೆಗಳಾದ ಕಣ್ಣೂರು-4, ಕಲ್ಲಿಕೋಟೆ-2 ಮತ್ತು ಕಾಸರಗೋಡು-1 ಎಂಬಂತೆ ರೋಗ ದೃಢೀಕರಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 24 ಮಂದಿ ಗುಣಮುಖರಾಗಿದ್ದಾರೆ. ಎರ್ನಾಕುಳಂ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ಒಬ್ಬರಂತೆ ರೋಗ ಮುಕ್ತರಾಗಿದ್ದಾರೆ. ಕೊರೊನಾ ಬಾಧಿಸಿದವರಲ್ಲಿ ಐವರು ವಿದೇಶದಿಂದ ಬಂದವರು. ಇಬ್ಬರು ಕೊರೊನಾ ಬಾಧಿತರೊಂದಿಗಿನ ಸಂಪರ್ಕದಿಂದ ರೋಗ ಹರಡಿದೆ.
ಕೇರಳದಲ್ಲಿ ಇದು ವರೆಗೆ 394 ಮಂದಿಗೆ ರೋಗ ಬಾಧಿಸಿದ್ದು, ಈ ಪೈಕಿ 245 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 147 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 88855 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 88332 ಮಂದಿ ಮನೆಗಳಲ್ಲೂ, 532 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಗುರುವಾರ ಮಾತ್ರ 108 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ವರೆಗೆ 17400 ಸ್ಯಾಂಪಲ್‍ಗಳನ್ನು ಪರೀಕ್ಷಿಸಲು ಕಳುಹಿಸಿದ್ದು, ಇದರಲ್ಲಿ 16459 ಸ್ಯಾಂಪಲ್‍ಗಳು ನೆಗೆಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ತನಕ 168 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 107 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 61 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಒಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ಖಚಿತಗೊಂಡಿದೆ. ಚೆಮ್ನಾಡ್ ನಿವಾಸಿ 20 ವರ್ಷದ ಪ್ರಾಯದ ವ್ಯಕ್ತಿಗೆ ಈ ರೋಗ ಖಚಿತಗೊಂಡಿದೆ. ಇವರು ಮಾ.19ರಂದು ದುಬಾಯಿಯಿಂದ ಬಂದಿದ್ದು, ಮನೆಯಲ್ಲಿ ನಿಗಾದಲ್ಲಿದ್ದರು. ಇವರನ್ನು ಪರಿಣತ ಚಿಕಿತ್ಸೆಗಾಗಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಗುರುವಾರ ಜಿಲ್ಲೆಯಲ್ಲಿ 24 ಮಂದಿ ಸೋಂಕು ಖಚಿತಗೊಂಡಿದ್ದವರು ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 5 ಮಂದಿ, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 16 ಮಂದಿ, ಕಾಂಞಂಗಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 3 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಕೋಟ್ಟಯಂನಿಂದ ಪರಿಣತರು ಕಾಸರಗೋಡು ಮೆಡಿಕಲ್ ಕಾಲೇಜಿಗೆ : ಉಕ್ಕಿನಡ್ಕದ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿಗೆ ಕೋಟ್ಟಯಂ ಸರಕಾರಿ ಮೆಡಿಕಲ್ ಕಾಲೇಜಿನ ಆರೋಗ್ಯ ಪರಿಣತರು ಗುರುವಾರ ಆಗಮಿಸಿದ್ದಾರೆ. ಕೋಟ್ಟಯಂ ಮೆಡಿಕಲ್ ಕಾಲೇಜಿನ ಅರವಳಿಕೆ ವಿಭಾಗ ಮುಖ್ಯಸ್ಥ ಡಾ.ಯು.ಮುರಳೀ ಕೃಷ್ಣನ್ ಅವರ ನೇತೃತ್ವದ 25 ಮಂದಿಯ ತಂಡ ಕಾಸರಗೋಡಿಗೆ ಆಗಮಿಸಿದೆ. ತಿರುವನಂತಪುರಂ ಸರಕಾರಿ ಮೆಡಿಕಲ್ ಕಾಲೇಜಿನ ಸಹಾಯಕ ವರಿಷ್ಠಾ„ಕಾರಿ ಡಾ.ಎಸ್.ಎಸ್.ಸಂತೋಷ್ ಕುಮಾರ್ ಅವರ ನೇತೃತ್ವದ 26 ಮಂದಿಯ ತಂಡ ತಮ್ಮ ಸೇವಾವ„ಯನ್ನು ಪೂರೈಸಿದ್ದು, ಅವರು ತಿರುವನಂತಪುರಂಗೆ ಮರಳಲಿದ್ದಾರೆ.
73 ಕೇಸು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 73 ಕೇಸುಗಳನ್ನು ದಾಖಲಿಸಲಾಗಿದೆ. 58 ಮಂದಿಯನ್ನು ಬಂಧಿಸಲಾಗಿದ್ದು, 15 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 4 ಕೇಸುಗಳು, ಕುಂಬಳೆ 2, ಕಾಸರಗೋಡು 16, ವಿದ್ಯಾನಗರ 6, ಬದಿಯಡ್ಕ 2, ಆದೂರು 3, ಬೇಡಗಂ 3, ಮೇಲ್ಪರಂಬ 13, ಬೇಕಲ 8, ಅಂಬಲತ್ತರ 1, ಹೊಸದುರ್ಗ 1, ನೀಲೇಶ್ವರ 4, ಚಂದೇರ 5, ವೆಳ್ಳರಿಕುಂಡ್ 3, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 948 ಕೇಸು ಗಳನ್ನು ದಾಖಲಿಸಲಾಗಿದೆ. 1434 ಮಂದಿಯನ್ನು ಬಂ„ಸಲಾಗಿದೆ. 508 ವಾಹನಗಳನ್ನು ವಶಪಡಿಸಲಾಗಿದೆ.
ತಲಪ್ಪಾಡಿಯಲ್ಲಿ ಅಕ್ರಮ ಪ್ರವೇಶ ಮೂಲಕ ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ 4 ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸರಕಾರಿ ನಿಗಾ ವಿಭಾಗವಿರುವ ಶಾಲೆಯೊಂದರ ಕ್ವಾರೆಂಟ್‍ನಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.


