ಕಾಸರಗೋಡು: ವಿಶ್ವ ವ್ಯಾಪಿಯಾಗಿ ಕೊರೊನಾ ವೈರಸ್ ಸೋಂಕು ವೇಗದಲ್ಲಿ ಹರಡುತ್ತಿರುವಂತೆ ಕಾಸರಗೋಡಿನಲ್ಲಿ ಶನಿವಾರ 6 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೊರೊನಾ ವೈರಸ್ ಬಾಧಿತರ ಸಂಖ್ಯೆ 141 ಕ್ಕೇರಿದೆ. ರಾಜ್ಯದಲ್ಲಿ 11 ಮಂದಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ಇದೇ ವೇಳೆ ರಾಜ್ಯದಲ್ಲಿ 8 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮುಕ್ತರಾಗಿದ್ದಾರೆ.
ಕಾಸರಗೋಡು-6, ಕಣ್ಣೂರು, ಎರ್ನಾಕುಳಂ, ಪಾಲ್ಘಾಟ್, ಕೊಲ್ಲಂ, ಆಲಪ್ಪುಳ ತಲಾ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇವರಲ್ಲಿ ಐವರು ದುಬೈಯಿಂದ (ಕಾಸರಗೋಡು-3, ಕಣ್ಣೂರು-1, ಎರ್ನಾಕುಳಂ-1) ಬಂದವರು. ಮೂವರು ದೆಹಲಿಯ ನಿಜಾಮುದ್ದಿನ್ (ಕಾಸರಗೋಡು, ಆಲಪ್ಪು, ಕೊಲ್ಲಂ) ಸಮಾವೇಶದಲ್ಲಿ ಭಾಗವಹಿಸಿದವರು, ಇಬ್ಬರಿಗೆ(ಕಾಸರಗೋಡು) ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ರೋಗ ಬಂದಿದೆ. ನಾಗಪುರದಿಂದ (ಪಾಲ್ಘಾಟ್)ಬಂದ ವ್ಯಕ್ತಿಗೆ ರೋಗ ದೃಢೀಕರಿಸಲಾಗಿದೆ. ಶನಿವಾರ ಎಂಟು ಮಂದಿ ಕೊರೊನಾ ವೈರಸ್ ರೋಗದಿಂದ ಗುಣಮುಖರಾಗಿದ್ದಾರೆ. ಕಣ್ಣೂರು ಜಿಲ್ಲೆಯಿಂದ 7 ಮತ್ತು ತಿರುವನಂತಪುರ ಜಿಲ್ಲೆಯಿಂದ ಒಬ್ಬರು ರೋಗ ಮುಕ್ತರಾಗಿದ್ದಾರೆ. ಪ್ರಸ್ತುತ 254 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 50 ಮಂದಿ ರೋಗ ಮುಕ್ತರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ.
ಕೇರಳದಲ್ಲಿ ಇದು ವರೆಗೆ 306 ಮಂದಿಗೆ ರೋಗ ಬಾ„ಸಿದೆ. ರಾಜ್ಯದಲ್ಲಿ ಒಟ್ಟು 1,71,355 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 1,70,621 ಮಂದಿ ಮನೆಗಳಲ್ಲೂ, 734 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಶನಿವಾರ ಹೊಸದಾಗಿ 174 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರೋಗ ಲಕ್ಷಣ ಶಂಕಿತ 9744 ಮಂದಿಯ ಸ್ಯಾಂಪಲ್ ಪರಿಶೋಧನೆಗೆ ಕಳುಹಿಸಿದ್ದು, ಇವುಗಳಲ್ಲಿ ಲಭ್ಯ 8586 ಸ್ಯಾಂಪಲ್‍ಗಳು ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ ನಿಗಾ : ಕಾಸರಗೋಡು ಜಿಲ್ಲೆಯಲ್ಲಿ 10563 ನಿಗಾದಲ್ಲಿದ್ದು, ಇವರಲ್ಲಿ 10368 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 195 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಇದುವರೆಗೆ 1384 ಸ್ಯಾಂಪಲ್‍ಗಳನ್ನು ಪರಿಶೋಧನೆಗೆ ಕಳುಹಿಸಲಾಗಿದೆ. ಎ.4 ರಂದು 42 ಸ್ಯಾಂಪಲ್‍ಗಳನ್ನು ಕಳುಹಿಸಲಾಗಿದೆ. ಈ ವರೆಗೆ 1001 ಸ್ಯಾಂಪಲ್‍ಗಳ ಫಲಿತಾಂಶ ಬಂದಿದ್ದು, ಇನ್ನೂ 383 ಮಂದಿ ಫಲಿತಾಂಶ ಬರಲು ಬಾಕಿಯಿದೆ. ಹೊಸದಾಗಿ 35 ಮಂದಿಯನ್ನು ಐಸೋಲೇಷನ್ ವಾರ್ಡ್‍ಗೆ ದಾಖಲಿಸಲಾಗಿದೆ.
ಲಾಕ್ ಡೌನ್ ಆದೇಶ ಉಲ್ಲಂಘನೆ: 24 ಕೇಸು ದಾಖಲು :
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ 24 ಕೇಸುಗಳನ್ನು ದಾಖಲಿಸಲಾಗಿದೆ. 27 ಮಂದಿಯನ್ನು ಬಂ„ಸಲಾಗಿದೆ. 19 ವಾಹನಗಳನ್ನು ವಶಪಡಿಸಲಾಗಿದೆ. ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ 1, ಕುಂಬಳೆ 2, ಬದಿಯಡ್ಕ 2, ಆದೂರು 1, ಮೇಲ್ಪರಂಬ 1, ಚಂದೇರ 1, ಚೀಮೇನಿ 1, ಹೊಸದುರ್ಗ 2, ವೆಳ್ಳರಿಕುಂಡ್ 2, ನೀಲೇಶ್ವರ 2, ಚಿತ್ತಾರಿಕಲ್ 2, ರಾಜಪುರಂ 2, ಬೇಡಗಂ 2, ಬೇಕಲ 2 ಕೇಸುಗಳು ದಾಖಲಾಗಿವೆ. ಈ ವರೆಗೆ ಜಿಲ್ಲೆಯಲ್ಲಿ 293 ಕೇಸುಗಳನ್ನು ದಾಖಲಿಸಲಾಗಿದೆ. 417 ಮಂದಿಯನ್ನು ಬಂಧಿಸಲಾಗಿದೆ. 195 ವಾಹನಗಳನ್ನು ವಶಪಡಿಸಲಾಗಿದೆ.
ಲಾಕ್ ಡೌನ್ ಆದೇಶ ಉಲ್ಲಂಘನೆ : ಇಮಾಂ ಮತ್ತು ಸಹಾಯಕನ ಬಂಧನ :
ಕಾಸರಗೋಡು ಜಿಲ್ಲೆಯ ಮಡಿಕೈ ಗ್ರಾಮದಲ್ಲಿ ಅರಯಿ ಜುಮಾ ಮಸೀದಿಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ನಮಾಜು ಏರ್ಪಡಿಸಿದ ಆರೋಪದಲ್ಲಿ ಮಸೀದಿಯ ಇಮಾಂ ಮತ್ತು ಸಹಾಯಕನನ್ನು ನೀಲೇಶ್ವರ ಪೆÇಲೀಸರು ಬಂ„ಸಿದ್ದಾರೆ. ಇಮಾಂ ಹನೀಫ್ ದಾರಿಮಿ ಮತ್ತು ಸಹಾಯಕ ಅಬ್ದುಲ್ ರಹೀಂ ಬಂಧಿತರು. ಮಸೀದಿ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕಂಡರೆ ಗುರುತಿಸಬಲ್ಲ 15 ಮಂದಿ ವಿರುದ್ಧವೂ ಕೇಸು ದಾಖಲಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಉಪ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಮಸೀದಿಗೆ ಭೇಟಿ ನೀಡಿದ್ದರು. ಐ.ಪಿ.ಸಿ. 269 ಪ್ರಕಾರ ಕೇಸು ದಾಖಲಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಸಾಮೂಹಿಕ ನಮಾಜಿನಲ್ಲಿ 25ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ವಿಶೇಷ ಅಧಿಕಾರಿ ಭೇಟಿ :
ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ನೇಮಕಗೊಂಡಿರುವ ವಿಶೇಷ ಅಧಿಕಾರಿ ಅಲ್ಕೇಷ್ ಕುಮಾರ್ ಶರ್ಮ ಅವರು ಗಡಿಪ್ರದೇಶ ತಲಪ್ಪಾಡಿಗೆ ಭೇಟಿ ನೀಡಿದರು. ಸರಕು ಹೇರಿಕೊಂಡು ಜಿಲ್ಲೆಗೆ ಆಗಮಿಸುತ್ತಿರುವ ಲಾರಿಗಳ ಚಾಲಕರಿಗೆ ಭೋಜನ ಲಭ್ಯತೆ ಬಗ್ಗೆ ಅವರು ಪರಿಶೀಲನೆ ನಡೆಸಿದರು. ಟಾಲ್ ಪ್ಲಾಝಾದಲ್ಲಿ ಅವರು ಕರ್ನಾಟಕ ಪೆÇಲೀಸರೊಂದಿಗೆ ಮಾತುಕತೆ ನಡೆಸಿದರು. ಕುಂಬಳೆ, ಉಪ್ಪಳ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಇತರ ರಾಜ್ಯಗಳ ಕಾರ್ಮಿಕರಿಗೆ ಭೋಜನ ಸಹಿತ ಸೇವೆ ಲಭ್ಯತೆಯ ಬಗ್ಗೆ ಖಚಿತತೆ ನಡೆಸಿದರು.
ವಿದೇಶದಲ್ಲಿ ಸಾವು : ಕೊರೊನಾ ವೈರಸ್ ಸೋಂಕಿನಿಂದ ಕಣ್ಣೂರು ತಲಶ್ಶೇರಿ ಪಾನೂರು ಮೀತ್ತಲ ಪೂಕೋಂ ಇರಂಞÂ ಕುಳಂಗರ ಎಲ್.ಪಿ. ಶಾಲೆ ಬಳಿಯ ತೆಕ್ಕೆಕುಂಡಿಲ್ಲ ಸಾರಾಸ್‍ನ ಮುಹಮ್ಮದ್ ಅವರ ಪುತ್ರ ಶಬ್ನಾಸ್(28) ಸಾವಿಗೀಡಾದರು.
ಮದಿನದ ಜರ್ಮನ್ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಾವಿಗೀಡಾದರು. ಜನವರಿ 5 ರಂದು ಶಬ್ನಾಸ್ ಅವರ ವಿವಾಹವಾಗಿತ್ತು. ಮಾರ್ಚ್ 10 ರಂದು ಸೌದಿಗೆ ತೆರಳಿದ್ದರು.
ದಾರಾವಿಯಲ್ಲಿ ಸಾವು : ಮುಂಬೈಯ ದಾರಾವಿ ಕೊಳೆಗೇರಿ ಪ್ರದೇಶದಲ್ಲಿ ಗಾರ್ಮೆಂಟ್ ಯೂನಿಟ್ ನಡೆಸುತ್ತಿದ್ದ ಕೇರಳದ 56 ರ ಹರೆಯದ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ನಾಲ್ವರು ಕೇರಳೀಯರು ಇವರನ್ನು ದಾರಾವಿಯಲ್ಲಿ ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಸೋಂಕು ತಗಲಿದೆ ಎಂದು ಮುಂಬೈ ಪೆÇಲೀಸರು ತಿಳಿಸಿದ್ದು, ಈ ವ್ಯಕ್ತಿ ಯಾವ ಜಿಲ್ಲೆಗೆ ಸೇರಿದವರು ಎಂಬ ಬಗ್ಗೆ ಬಹಿರಂಗಪಡಿಸಿಲ್ಲ.


