HEALTH TIPS

ಕೊರೋನಾ ವೈರಸ್ ನ 8 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು!

 
      ನ್ಯೂಯಾರ್ಕ್: ಜಗತ್ತಿನಾದ್ಯಂತ ಸಂಶೋಧಕರು ಕೊರೋನಾ ವೈರಸ್ ನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ವಿಜ್ಞಾನಿಗಳು ಜಾಗತಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನ ಕನಿಷ್ಟ 8 ಪ್ರಭೇದಗಳನ್ನು ಗುರುತಿಸಿದ್ದಾರೆ.
    ಓಪನ್ ಸೋರ್ಸ್ ಯೋಜನೆಯಾಗಿರುವ Nextstrain.org  ಗೆ ವಿಶ್ವಾದ್ಯಂತ ಇರುವ ಪ್ರಯೋಗಾಲಯಗಳಿಂದ ಸಲ್ಲಿಕೆಯಾಗಿರುವ 2,000 ಕ್ಕೂ ಹೆಚ್ಚು ಜೆನೆಟಿಕ್ ಸೀಕ್ವೆನ್ಸ್ ಗಳ ಪ್ರಕಾರ ವೈರಾಣು ರೂಪಾಂತರ ಹೊಂದುತ್ತಿರುವುದು ತಿಳಿದುಬಂದಿದೆ.ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ ನ ವರದಿಯ ಪ್ರಕಾರ, ಅಂಟಾರ್ಟಿಕ ಹೊರತುಪಡಿಸಿ ಎಲ್ಲಾ ಖಂಡಗಳಿಂದಲೂ ಸ್ಯಾಂಪಲ್ ಗಳನ್ನು ತರಿಸಿಕೊಳ್ಳಲಾಗಿದ್ದು, ರೂಪಾಂತರ ಹೊಂದುವುದಕ್ಕೆ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
       ರೂಪಾಂತರ ಹೊಂದುತ್ತದೆ ಎಂಬ ಮಾತ್ರಕ್ಕೆ ವೈರಾಣು ಅಪಾಯಕಾರಿಯಾಗುತ್ತಿದೆ ಎಂದಲ್ಲ, ಈ ರೂಪಾಂತರಗಳು ವಿಜ್ಞಾನಿಗಳಿಗೆ ಆ ವೈರಾಣುವಿನ ಮೂಲ ಹಾಗೂ ಚರ್ಯೆಯನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries