ಕಾಸರಗೋಡು: ಕೇರಳದಲ್ಲಿ ಗುರುವಾರ 21 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಈ ಪೈಕಿ 8 ಪ್ರಕರಣಗಳು ಕಾಸರಗೋಡು ಜಿಲ್ಲೆಯಿಂದ ವರದಿಯಾಗಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 128 ಕ್ಕೇರಿತು. ರಾಜ್ಯದಲ್ಲಿ ಒಟ್ಟು ಸೋಂಕು ಬಾಧಿತರು 286 ಕ್ಕೇರಿದೆ.
ಗುರುವಾರ ಇಬ್ಬರು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗುವುದರೊಂದಿಗೆ ರಾಜ್ಯದಲ್ಲಿ ಈ ವರೆಗೆ ಗುಣಮುಖರಾದವರ ಸಂಖ್ಯೆ 28. ಇವರಲ್ಲಿ ನಾಲ್ವರು ವಿದೇಶಿಯರು. ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 256 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ.
ಗುರುವಾರ ದೃಢಗೊಂಡಿರುವ ಕೊರೊನಾ ವೈರಸ್ ಸೋಂಕು ಯಾದಿ ಇಂತಿದೆ. ಒಟ್ಟು 21. ಕಾಸರಗೋಡು-8, ಇಡುಕ್ಕಿ-5, ಕೊಲ್ಲಂ-2, ತಿರುವನಂತಪುರ, ಕಣ್ಣೂರು, ತೃಶ್ಶೂರು, ಮಲಪ್ಪುರಂ, ಕಲ್ಲಿಕೋಟೆ, ಪತ್ತನಂತಿಟ್ಟ ತಲಾ ಒಂದರಂತೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ.
ರಾಜ್ಯದಲ್ಲಿ ಒಟ್ಟು 1,65,934 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1,65,291 ಮಂದಿ ಮನೆಗಳಲ್ಲೂ, 643 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 8456 ಸ್ಯಾಂಪಲ್‍ಗಳನ್ನು ಕಳುಹಿಸಲಾಗಿದ್ದು, ಈ ಪೈಕಿ 7622 ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಈ ವರೆಗೆ ಕೊರೊನಾ ವೈರಸ್ ಸೋಂಕು ಬಾಧಿಸಿದವರಲ್ಲಿ 200 ಮಂದಿ ವಿದೇಶದಿಂದ ಬಂದವರು. ರೋಗಿಗಳೊಂದಿಗಿನ ಸಂಪರ್ಕದಿಂದ 76 ಮಂದಿಗೆ ಮತ್ತು 7 ಮಂದಿ ವಿದೇಶಿಯರಾಗಿದ್ದಾರೆ. ನಿಜಾಮುದ್ದಿನ್ ಸಮಾವೇಶದಲ್ಲಿ ಭಾಗವಹಿಸಿ ವಾಪಸಾದ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ಒಬ್ಬ ಗುಜರಾತ್‍ನಿಂದ ಬಂದ ವ್ಯಕ್ತಿಗೆ ರೋಗ ಬಾ„ಸಿದೆ. ಗುರುವಾರ ತಿರುವನಂತಪುರ ಮತ್ತು ಮಲಪುರ ಜಿಲ್ಲೆಯ ತಲಾ ಒಬ್ಬರು ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 10240 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 10063 ಮಂದಿ ಮನೆಗಳಲ್ಲೂ, 177 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಈ ತನಕ 1214 ಸ್ಯಾಂಪಲ್‍ಗಳನ್ನು ಲ್ಯಾಬ್‍ಗಳಿಗೆ ಕಳುಹಿಸಲಾಗಿದೆ. ಗುರುವಾರ 37 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. 362 ಸ್ಯಾಂಪಲ್‍ಗಳ ಫಲಿತಾಂಶ ಇನ್ನಷ್ಟೇ ಲಭಿಸಬೇಕಾಗಿದೆ. ಹೊಸದಾಗಿ 21 ಮಂದಿಯನ್ನು ಐಸೋಲೇಶನ್ ವಾರ್ಡ್‍ಗೆ ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ : 25 ಕೇಸು ದಾಖಲು:
ಲಾಕ್ ಡೌನ್ ಆದೇಶ ಉಲ್ಲಂಘನೆಯ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 25 ಕೇಸುಗಳನ್ನು ದಾಖಲಿಸಲಾಗಿದೆ. 45 ಮಂದಿಯನ್ನು ಬಂಧಿಸಲಾಗಿದೆ. 18 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 2, ಆದೂರು 3, ವಿದ್ಯಾನಗರ 2, ಮೇಲ್ಪರಂಬ 5, ಚಿತ್ತಾರಿಕಲ್ 2, ಅಂಬಲತ್ತರ 1, ಹೊಸದುರ್ಗ 1, ನೀಲೇಶ್ವರ 1, ಚಂದೇರ 2, ವೆಳ್ಳರಿಕುಂಡ್ 5, ರಾಜಪುರಂ 1 ಕೇಸುಗಳು ದಾಖಲಾಗಿವೆ. ಈ ವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 269 ಕೇಸುಗಳು ನೋಂದಣಿಯಾಗಿವೆ. 390 ಮಂದಿಯನ್ನು ಬಂ„ಸಲಾಗಿದೆ. 176 ವಾಹನಗಳನ್ನು ವಶಪಡಿಸಲಾಗಿದೆ.
ಕೇರಳದ ನಾಲ್ವರ ಸಾವು : ಕೊರೊನಾ ವೈರಸ್ ಸೋಂಕಿನಿಂದ ಯು.ಎಸ್.ನಲ್ಲಿ ಇಬ್ಬರು, ದುಬೈ ಮತ್ತು ಮುಂಬೈಯಲ್ಲಿ ತಲಾ ಒಬ್ಬರಂತೆ ನಾಲ್ಕು ಮಂದಿ ಕೇರಳೀಯರು ಸಾವಿಗೀಡಾಗಿದ್ದಾರೆ.
ಪತ್ತನಂತಿಟ್ಟ ಇಲಂದೂರು ಈಸ್ಟ್ ಆಲನಿಲ್ಕುನ್ನತ್ತಿಲ ಕುಳಿಕಲ್ ಪಾಪಚ್ಚನ್ ಅವರ ಪುತ್ರ ತೋಮಸ್ ಡೇವಿಡ್ ಯಾನೆ ಬಿಜು(47), ಪತ್ತನಂತಿಟ್ಟ ನಿವಾಸಿ ಸ್ಯಾಮುವೆಲ್ ಅವರ ಪತ್ನಿ ಕುಂಞಮ್ಮ(85) ಯು.ಎಸ್.ನಲ್ಲಿ ಸಾವಿಗೀಡಾದರು.
ಮುಂಬೈಯಲ್ಲಿ ತಲಶ್ಶೇರಿ ಕದಿರೂರು ನಿವಾಸಿ ಅಶೋಕನ್(63) ಸಾವಿನ ಬಳಿಕ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ತೃಶೂರು ಕಾಯ್ಪಮಂಗಲಂ ಪುತನ್‍ಪಳ್ಳಿ ತೆಪರಂಬಿಲ್ ನಿವಾಸಿ ಫರೀದ್(67) ದುಬೈಯಲ್ಲಿ ಸಾವಿಗೀಡಾದರು.


