ಕಾಸರಗೋಡು: ಕೇರಳದಲ್ಲಿ ಶನಿವಾರ 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಈ ಪೈಕಿ ಕಾಸರಗೋಡು ಜಿಲ್ಲೆಯಲ್ಲಿ 2, ಕಲ್ಲಿಕೋಟೆ ಜಿಲ್ಲೆಯಲ್ಲಿ 1, ಕಣ್ಣೂರು ಜಿಲ್ಲೆಯಲ್ಲಿ 7 ಮಂದಿಗೆ ಸೋಂಕು ಬಾ„ಸಿದೆ. ಇದೇ ವೇಳೆ ರಾಜ್ಯದಲ್ಲಿ ಶನಿವಾರ 19 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ಸೋಂಕಿತರಲ್ಲಿ ಮೂವರು ವಿದೇಶದಿಂದ ಬಂದವರು ಮತ್ತು 7 ಮಂದಿ ಕೊರೊನಾ ವೈರಸ್ ಸೋಂಕಿತರೊಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಕೊರೊನಾ ವೈರಸ್ ಸೋಂಕಿನಿಂದ ಮುಕ್ತರಾದ ಜಿಲ್ಲಾ ಮಟ್ಟದ ಅಂಕಿಅಂಶ ಇಂತಿದೆ. ಕಾಸರಗೋಡು-9, ಪಾಲ್ಘಾಟ್-4, ತಿರುವನಂತಪುರ-3, ಇಡುಕ್ಕಿ-2, ತೃಶ್ಶೂರು-1 ಎಂಬಂತಿದೆ. ಈ ತನಕ ರಾಜ್ಯದಲ್ಲಿ ಒಟ್ಟು 373 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಇದೀಗ ಆಸ್ಪತ್ರೆಗಳಲ್ಲಿ 228 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ 143 ಮಂದಿ ರಾಜ್ಯದಲ್ಲಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 1,23,490 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 1,22,676 ಮಂದಿ ಮನೆಗಳಲ್ಲೂ, 814 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಶನಿವಾರ ರಾಜ್ಯದಲ್ಲಿ ಒಟ್ಟು 201 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಒಟ್ಟು 14163 ಸ್ಯಾಂಪಲ್‍ಗಳ ಪೈಕಿ 12818 ಸ್ಯಾಂಪಲ್‍ಗಳು ನೆಗೆಟಿವ್ ಆಗಿದೆ. ಕೋವಿಡ್ 19 ರೋಗದಿಂದ ಮುಕ್ತರಾದ ಕಾಸರಗೋಡಿನ ಮಹಿಳೆಯೊಬ್ಬರು ಶನಿವಾರ ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಸೌಖ್ಯದಿಂದಿದ್ದಾರೆ.
ಬಾಲಕಿಯರಿಬ್ಬರಿಗೆ ಸೋಂಕು : ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಇಬ್ಬರಿಗೆ ಕೋವಿಡ್ 19 ಸೋಂಕು ಖಚಿತಗೊಂಡಿದೆ. ಕೂಡ್ಲು ನಿವಾಸಿಗಳಾದ 10 ವರ್ಷದ ಮತ್ತು 8 ವರ್ಷದ ಬಾಲಕಿಯರಿಬ್ಬರಿಗೆ ಈ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ತಾಯಿ ಈಗಾಗಲೇ ಸೋಂಕು ಬಾಧೆ ಖಚಿತವಾಗಿ ಕಾಂಞಂಗಾಡಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಮಕ್ಕಳೂ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದರು.
ವೈದ್ಯರು ನಿಗಾದಲ್ಲಿ :
ತೊಂಬತ್ತರಷ್ಟು ಕೋವಿಡ್ ರೋಗಿಗಳಿದ್ದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ 11 ಮಂದಿಯನ್ನು ಗುಣಮುಖರನ್ನಾಗಿಸಿದ ನಾಲ್ಕು ಮಂದಿ ಡಾಕ್ಟರ್‍ಗಳು 14 ದಿನಗಳ ನಿಗಾದಲ್ಲಿದ್ದಾರೆ. ಡಾ.ಕೆ.ಪಿ.ಕೃಷ್ಣ ನಾಯ್ಕ್, ಡಾ.ಸಿ.ಎಚ್.ಜನಾರ್ಧನ ನಾಯ್ಕ್, ಡಾ.ಎಂ.ಕುಂಞÂರಾಮನ್, ಡಾ.ಕೆ.ಪಿ.ಅಪರ್ಣಾ ಅವರು ನಿಗಾದಲ್ಲಿದ್ದಾರೆ. ಇಲ್ಲಿನ ನರ್ಸ್‍ಗಳ ಸಹಿತ 20 ರಷ್ಟು ಆರೋಗ್ಯ ಕಾರ್ಯಕರ್ತರು ಕೆಲಸದ ಕಾಲಾವಧಿ ಕಳೆದ ಬಳಿಕ ನಿಗಾದಲ್ಲಿದ್ದಾರೆ. ಡಾಕ್ಟರ್‍ಗಳು ಸಹಿತ ನರ್ಸ್‍ಗಳು, ಆರೋಗ್ಯ ಕಾರ್ಯಕರ್ತರು ದಿನಾ 15 ಗಂಟೆಗಳ ಕಾಲ ಸೇವೆ ಸಲ್ಲಿಸಿದ್ದರು. ನೋಡೆಲ್ ಅ„ಕಾರಿಯಾಗಿರುವ ಡಾ.ಎಂ.ಕುಂಞÂರಾಮನ್ ಅವರು ಕೊರೊನಾ ರೋಗಿಗಳ ತಪಾಸಣೆಗಿಲ್ಲದಿದ್ದರೂ, ಜನರಲ್ ಆಸ್ಪತ್ರೆಯಲ್ಲಿ ರೋಗಿಗಳ ದಾಖಲೆಗಳ ಸಹಿತ ಕಾರ್ಯಗಳನ್ನು ನಿರ್ವಹಿಸುವರು.
ಟ್ರಿಪ್ಪಲ್ ಲಾಕ್ ಆದೇಶ ಜಾರಿ :
ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ 19 ಸೋಂಕು ಖಚಿತಗೊಂಡಿರುವ ಪ್ರದೇಶಗಳಲ್ಲಿ ಪೆÇಲೀಸರು ಹೆಚ್ಚುವರಿ ನಿಯಂತ್ರಣ ಏರ್ಪಡಿಸಿದ್ದಾರೆ. ಜಿಲ್ಲೆಯ 7 ಗ್ರಾಮ ಪಂಚಾಯತ್ ಗಳಲ್ಲಿ ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಏರ್ಪಡಿಸಲಾದ ಕ್ಲಸ್ಟರ್ ಲಾಕ್ ಡೌನ್ ಆದೇಶ ಅಲ್ಲದೆ ಟ್ರಪ್ಪಲ್ ಲಾಕ್ ಡೌನ್ ಆರಂಭಿಸಲಾಗಿದೆ. ತಲಾ 5 ಮನೆಗಳನ್ನು ಕೇಂದ್ರೀಕರಿಸಿ ದ್ವಿಚಕ್ರ ವಾಹನಗಳಲ್ಲಿ ಪೆÇಲೀಸರು ತಪಾಸಣೆ ನಡೆಸಿದರು. ತಳಂಗರೆ, ಕಳನಾಡು, ಚೂರಿ, ನೆಲ್ಲಿಕುಂಜೆ, ಅಲಾಮಿಪಳ್ಳಿ ಸಹಿತ ಪ್ರದೇಶಗಳಲ್ಲಿ ಈ ನಿಯಂತ್ರಣಗಳಿವೆ.
ಈ ಸಂಬಂಧ ಶನಿವಾರ ತಳಂಗರೆಯಲ್ಲಿ ಐ.ಜಿ.ವಿಜಯ್ ಸಖಾರೆ ಟ್ರಿಪ್ಪಲ್ ಲಾಕ್ ಆದೇಶಕ್ಕೆ ಚಾಲನೆ ನೀಡಿದರು. ಉತ್ತರ ವಲಯ ಐ.ಜಿ.ಅಶೋಕ್ ಯಾದವ್, ಎಸ್.ಪಿ.ಗಳಾದ ಪಿ.ಎಸ್.ಸಾಬು, ಡಿ.ಶಿಲ್ಪಾ ನೇತೃತ್ವ ವಹಿಸಿದ್ದರು. ಜನರು ಯಾವ ಕಾರಣಕ್ಕೂ ಮನೆಗಳಿಂದ ಹೊರಗಿಳಿಯಬಾರದು ಎಂಬ ಕಾರಣಕ್ಕೆ ಈ ಆದೇಶ ಜಾರಿಗೊಳಿಸಲಾಗಿದೆ. ಡ್ರೋನ್ ನಿಗಾ ಪ್ರಬಲಗೊಳ್ಳಲಿದೆ.
ಈ ಪ್ರದೇಶಗಳಲ್ಲಿ ಮನೆಗಳಿಂದ ಹೊರಗಿಳಿಯುವವರನ್ನು ಬಂಧಿಸಲು ಫ್ಲೈಯಿಂಗ್ ಸ್ಕ್ವಾಡ್ ಮತ್ತು ಬೈಕ್ ಪೆಟ್ರೋಲಿಂಗ್, ಡ್ರೋನ್ ನಿಗಾ ಪ್ರಬಲಗೊಳಿಸಲಾಗಿದೆ.
ಬೀಡಿ ಡಿಪೆÇೀಗಳಲ್ಲಿ ಕಟ್ಟುನಿಟ್ಟು :
ಕಾಸರಗೋಡು ಜಿಲ್ಲೆಯ ಬೀಡಿ ಕಾರ್ಮಿಕರು ಡಿಪೆÇೀಗಳಲ್ಲಿ ಶನಿವಾರ, ಭಾನುವಾರಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಕೋವಿಡ್ 19 ಪ್ರತಿರೋಧ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಚಟುವಟಿಕೆ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ನಿಟ್ಟಿನಲ್ಲಿ ಡಿಪೆÇೀ ನಿರ್ವಹಣೆಯ ಹೊಣೆ ಹೊತ್ತವರು ಜಿಲ್ಲಾ„ಕಾರಿ ಕಚೇರಿಯ ಕೊರೊನಾ ನಿಯಂತ್ರಣ ಕೊಠಡಿಯ 04994-255001 ಎಂಬ ನಂಬ್ರಕ್ಕೆ ಕರೆಮಾಡಿ ಪಾಸ್ ಪಡೆದುಕೊಳ್ಳಬೇಕು. ಕೊರೊನಾ ಪ್ರತಿರೋಧ ಸಂಬಂಧ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸಲಹೆ-ಸೂಚನೆಗಳ ಪಾಲನೆಯನ್ನು ಡಿಪೆÇೀ ನಿರ್ವಾಹಕರು ಖಚಿತಪಡಿಸಬೇಕು ಎಂದವರು ತಿಳಿಸಿರುವರು.
ಜಿಲ್ಲೆಯಲ್ಲಿ 39 ಕೇಸು ದಾಖಲು :
ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 39 ಕೇಸುಗಳನ್ನು ದಾಖಲಿಸಲಾಗಿದೆ. 79 ಮಂದಿಯನ್ನು ಬಂ„ಸಲಾಗಿದೆ. 19 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3 ಕೇಸುಗಳು, ಕುಂಬಳೆ 1, ಕಾಸರಗೋಡು 1, ವಿದ್ಯಾನಗರ 3, ಬದಿಯಡ್ಕ 2, ಆದೂರು 2, ಬೇಡಗಂ 1, ಮೇಲ್ಪರಂಬ 6, ಬೇಕಲ 3, ಅಂಬಲತ್ತರ 1, ನೀಲೇಶ್ವರ 1, ಚಂದೇರ 3, ಚೀಮೇನಿ 2, ವೆಳ್ಳರಿಕುಂಡ್ 2, ಚಿತ್ತಾರಿಕಲ್ 2, ರಾಜಪುರಂ 6 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 699 ಕೇಸುಗಳನ್ನು ದಾಖಲಿಸಲಾಗಿದೆ. 1144 ಮಂದಿಯನ್ನು ಬಂ„ಸಲಾಗಿದೆ. 423 ವಾಹನಗಳನ್ನು ವಶಪಡಿಸಲಾಗಿದೆ.
ಟಾಟಾ ಕೋವಿಡ್ ಆಸ್ಪತ್ರೆ ಕಾಮಗಾರಿ ಆರಂಭ :
ಚೆಮ್ನಾಡ್ ಗ್ರಾಮ ಪಂಚಾಯತ್‍ನ ತೆಕ್ಕಿಲ್ ಗ್ರಾಮದಲ್ಲಿ ಕೇರಳ ರಾಜ್ಯದೊಂದಿಗೆ ಸಹಕರಿಸಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸುವ ಕೋವಿಡ್ ಆಸ್ಪತ್ರೆಯ ಅಂಗವಾಗಿ ನೆಲ ಸಮಗೊಳಿಸುವ ಕಾಮಗಾರಿ ಶನಿವಾರ ಆರಂಭಗೊಂಡಿತು. ಈ ಆಸ್ಪತ್ರೆ ಒಂದೂವರೆ ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.


