ನವದೆಹಲಿ: ವೈರಸ್ ತಟ್ಟುವ ಬಗ್ಗೆ ಮುನ್ನೆಚ್ಚರಿಕೆ ನೀಡು ಹಾಗೂ ಸೋಂಕು ತಗುಲಿರುವ ವ್ಯಕ್ತಿ ನಿಮ್ಮ ಹತ್ತಿರದಲ್ಲಿದ್ದರೆ ಮಾಹಿತಿ ನೀಡುವ ಆಪ್ ವೊಂದನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.
ದೇಶದಲ್ಲಿ ಕೊರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾಮಾರಿಯನ್ನು ತಡೆಗಟ್ಟಲು ಆರೋಗ್ಯ ಸೇತು ಎನ್ನು ಆಪ್' ನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಅಪ್ಲಿಕೇಶನ್ ಹಿಂದಿ, ಇಂಗ್ಲೀಷ್ ಹಾಗೂ ಇತರೆ 11 ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಾರಂಭಿಸಲಾಗಿದೆ. ಪ್ಲೇ ಸ್ಟೋರ್ ಮೂಲಕ ಉಚಿತವಾಗಿ ಈ ಆಪ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಮೂಲಕ ಕೊರೋನಾ ವೈರಸ್'ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ನಿಮ್ಮ ಮೊಬೈಲ್ ನಲ್ಲಿ ಲಭ್ಯವಿರಲಿದೆ ಎಂದು ತಿಳಿದುಬಂದಿದೆ.
ಸೋಂಕಿತನ ಮಾಹಿತಿ ದಾಖಲಿಸಿಕೊಂಡು, ಒಂದು ವೇಳೆ ನಿಮ್ಮ ಹತ್ತಿರ ಸೋಂಕಿತ ಇದ್ದರೆ, ಈ ಆಪ್ ಸಂದೇಶ ರವಾನಿಸುತ್ತದೆ. ಯಾರಿಗಾದರೂ ಸೋಂಕು ತಗುಲಿದರೆ, ಅವರ ಮೊಬೈಲ್ ಸಂಖ್ಯೆಯನ್ನು ಆಪ್ ನಲ್ಲಿ ಸಚಿವಾಲಯ ಅಪ್ಡೇಟ್ ಮಾಡಲಿದೆ.
ಆ ಮೂಲಕ ಆ ವ್ಯಕ್ತಿ ಇರುವ ಪ್ರದೇಶಕ್ಕೆ ನೀವು ತೆರಳಿದರೆ ಆಪ್ ಎಚ್ಚರಿಕೆ ನೀಡುತ್ತದೆ. ಅಲ್ಲದೇ, ನೀವು ಸೋಂಕಿತರು ಇರುವ ಪ್ರದೇಶಕ್ಕೆ ತೆರಳಿದರೆ, ಸೋಂಕು ತಟ್ಟುವ ಸಾಧ್ಯತೆಯನ್ನೂ ಆಪ್ ನಿಮಗೆ ನೀಡಲಿದೆ.


