ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಚಟುವಟಿಕೆಗಳನ್ನು ರಾಜ್ಯದ ಅನಿವಾರ್ಯ ಸೇವೆಗಳ ಪಟ್ಟಿಯಲ್ಲಿ ಒಳಪಡಿಸಲಾಗಿದ್ದು, ಲಾಕ್ ಡೌನ್ ಕಟ್ಟುನಿಟ್ಟಿನ ಆದೇಶಗಳಿಂದ ವಿನಾಯಿತಿ ನೀಡಲಾಗಿದೆ.
ಏ.23ರಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಪ್ರಕಟಿಸಿರುವ ಕೋವಿಡ್ 19 ಆದೇಶ ಪ್ರಕಾರಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ತುರ್ತು ಸೇವಾ vಪಟ್ಟಿಯಲ್ಲಿ ಅಳವಡಿಸಲಾಗಿದೆ. ಈ ಇಲಾಖೆಯಲ್ಲಿ ನೌಕರಿ ನಡೆಸುತ್ತಿರುವ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶಗಳು ಅನ್ವಯವಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರಂಭದ ಹಂತದಿಂದ ಈ ವರೆಗೆ ಸುದ್ದಿ ಪ್ರಸಾರದವಿಚಾರದಲ್ಲಿ ಇಲಾಖೆ ರಾಜ್ಯ ವಿಧಾನಸೌಧದಲ್ಲಿ ಮತ್ತು ಆಯಾ ಜಿಲ್ಲೆಗಳ ವಾರ್ತಾ ಕಚೇರಿಗಳಲ್ಲಿ 24 ತಾಸುಗಳ ಚಟುವಟಿಕೆ ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಾಹಿತಿ ಕಚೇರಿಗಳು ಚಟುವಟಿಕೆ ನಡೆಸುತ್ತಿವೆ
ಸರ್ಕಾದ ಆದೇಶ ಪ್ರಕಾರ ಕಂದಾಯ, ಪೆÇಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕದಳ, ಜೈಲು, ಲೀಗಲ್ ಮೆಟ್ರಾಲಜಿ, ನಗರಸಭೆ, ಗ್ರಾಮಪಂಚಾಯಿತಿ, ಪರವಾನಗಿ ಸೇವೆಗಳು ಇತ್ಯಾದಿ ಕಟ್ಟುನಿಟ್ಟಿನಿಂದ ವಿನಾಯಿತಿ ಪಡೆದ ಇಲಾಖೆಗಳಾಗಿದೆ.

