ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ 19 ರೋಗಗಳಿರುವ ಚೆಂಗಳ ಗ್ರಾಮಪಂಚಾಯತ್ ನಲ್ಲಿ ಹೋಮಿಯೋ ಇಮ್ಯೂನ್ ಬೂಸ್ಟರ್ ಔಷಧ ವಿತರಣೆ ಶನಿವಾರ ಆರಂಭಗೊಂಡಿದೆ.
ಗ್ರಾಮ ಪಂಚಾಯತ್ ನ 23 ವಾರ್ಡ್ ಗಲಲ್ಲಿ ಔಷಧ ವಿತರಣೆ ನಡೆಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದರು. ಆಶಾಕಾರ್ಯಕರ್ತರ, ಸ್ವಯಂ ಸೇವಾ ಸಂಘಟನೆಗಳ ಸದಸ್ಯರ ಮುಖಾಂತರ ಔಷಧ ವಿತರಿಸಲಾಗುವುದು. ಹಿರಿಯರು ತಲಾ ಒಂದು ಗುಳಿಗೆ ಮೂರು ದಿನಗಳ ಕಾಲ ಸೇವಿಸಬೇಕು. ಮಕ್ಕಳು ಮೂರು ದಿನ ತಲಾ ಅರ್ಧ ಗುಳಿಗೆ ಸೇವಿಸಬೇಕು ಎಂದು ವೈದ್ಯರು ತಿಳಿಸಿದರು.
ನಾಯನ್ಮಾರುಮೂಲೆ ಸರ್ಕಾರಿ ಮಾದರಿ ಹೋಮಿಯೋ ಡಿಸ್ಪೆನ್ಸರಿ ಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟಿನ ಹಿನ್ನೆಲೆಯಲ್ಲಿ ಈ ಸಂಬಂಧ ಅನೌಪಚರಿಕವಾಗಿ ನಡೆದ ಸಮಾರಂಭದಲ್ಲಿ ಔಷಧಗಳ ವಿತರಣೆ ನಡೆಯಿತು. ಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ, ಸದಸ್ಯ ಎನ್.ಎ.ತಾಹಿರ್, ವೈದ್ಯಾಧಿಕಾರಿ ಡಾ.ಎಂ.ಎಸ್.ಷೀಬಾ, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.


