HEALTH TIPS

ಉಜ್ವಲ್ ಯೋಜನೆ: ಅರ್ಹರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್

   
         ಕಾಸರಗೋಡು: ಪ್ರಧಾನಮಂತ್ರಿ ಉಜ್ವಲ ಯೋಜನೆ ಯಲ್ಲಿ ಸದಸ್ಯತನ ಹೊಂದಿರದೇ ಇರುವ ಅರ್ಹರಾದ ಕುಟುಂಬಗಳಿಗೆ ಕೋವಿಡ್ ಅವಧಿಯಲ್ಲಿ ವಿಶೇಷ ರೀತಿ ಘೋಷಣೆ ನಡೆಸಲಾದ ಉಚಿತ ಅಡುಗೆ ಅನಿಲ ಸಿಲಿಂಡರ್ ಯೋಜನೆಯಲ್ಲಿ ಭಾಗಿಗಳಾಗಲು ಅವಕಾಶವಿದೆ.
     ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಸಹಿತ ಉತ್ತರ ಭಾಗದ ಜಿಲ್ಲೆಗಳಲ್ಲಿ ಯೋಜನೆಗಳಲ್ಲಿ ಸದಸ್ಯರಾದವರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ ಪೂರ್ಣತೆಯತ್ತ ಸಾಗುತ್ತಿದೆ. ಏ.1ರಿಂದ ಜೂ.30 ವರೆಗೆ ಮೂರು ತಿಂಗಳ ಅವಧಿಗೆ ಉಚಿತ ಡುಗೆ ಅನಿಲ ಸಿಲಿಂಡರ್ ವಿತರಣೆ ನಡೆಯುತ್ತಿದೆ. ರೀಫಿಲ್ ಸಿಲಿಂಡರ್ ನ ಏಪ್ರಿಲ್ ತಿಂಗಳ ದರ ಉಜ್ವಲ ಫಲಾನುಭವಿಗಳಿಗೆ ಪಿ.ಎಂ.ಯು.ವೈ. ಬ್ಯಾಂಕ್ ಖಾತೆಗೆ ವರ್ಗಾವಣೆ ನಡೆಸಿದೆ. ಪ್ರತಿತಿಂಗಳಿಗೆ ಒಂದು ಎಂಬ ರೀತಿ ಮಾತ್ರ ಫಲಾನುಭವಿಗಳು ಮೊಬಲಗು ಬಳಸಬೇಕು. ಐ.ವಿ.ಆರ್.ಎಸ್. ಮೂಲಕ ಯಾ ನೋಂದಿತ ಮೊಬೈಲ್ ದೂರವಾಣಿ ಮೂಲಕ ಮಾತ್ರ ರೀಫಿಲ್ ಬುಕ್ಕಿಂಗ್ ನಡೆಸಬೇಕು. ಯೋಜನೆಯಲ್ಲಿ ಈ ವರೆಗೆ ಭಾಗಿಗಳಲ್ಲದೇ ಇರುವ ಮಂದಿಗೂ, ಬರಿದಾಗಿರುವ ಸಿಲಿಂಡರ್ ಹೊಂದಿರುವವರಿಗೂ, ಯೋಜನೆಯಲ್ಲಿ ಸೇರಲು ಅವಕಾಶಗಳಿವೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಇಂಡಿಯನ್ ಆಯಿಲ್ ಕಾರ್ಪರೇಷನ್ ನ ಕೊಚ್ಚಿಯ ರಾಜ್ಯ ಮಟ್ಟದ ಕಚೇರಿಯನ್ನು ಸಂಪರ್ಕಿಸಬಹುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries