HEALTH TIPS

ಕೇರಳವೇ ಸೇಫ್: ಇಲ್ಲೇ ಇರ್ತೀನಿ ಅಂತ ಕೋರ್ಟ್ ಮೆಟ್ಟಿಲೇರಿದ ಅಮೆರಿಕದ ಪ್ರಜೆ!

   
         ಕೊಚ್ಚಿ: ಕೋವಿಡ್-19 ಲಾಕ್ ಡೌನ್ ನಲ್ಲಿ ಸಿಲುಕಿರುವವರು ತಮ್ಮ ತಮ್ಮ ಊರು, ಮನೆಗಳಿಗೆ ತೆರಳಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಮೆರಿಕದ ಪ್ರಜೆ ತನ್ನ ದೇಶಕ್ಕೆ ವಾಪಸ್ ತೆರಳಲು ನಿರಾಕರಿಸುತ್ತಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ.
      ಥಿಯೇಟರ್ ನಿರ್ದೇಶಕ, ಬರಹಗಾರನಾಗಿರುವ ಟೆರ್ರಿ ಜಾನ್ ಕಾನ್ವರ್ಸ್ ಕೇರಳ ಹೈ ಕೋರ್ಟ್ ಮೊರೆ ಹೋಗಿದ್ದು, ಕೇರಳದಲ್ಲೇ ಉಳಿಯುವುದಕ್ಕೆ ತನ್ನ ವೀಸಾವನ್ನು 6 ತಿಂಗಳವರೆಗೆ ವಿಸ್ತರಿಸಲು ಮನವಿ ಮಾಡಿದ್ದಾನೆ. ಅಮೆರಿಕಾಗೆ ತೆರಳುವುದರ ಬದಲು ಭಾರತದಲ್ಲೇ ಉಳಿಯುವುದು ಸುರಕ್ಷಿತ ಎನಿಸುತ್ತಿದೆ ನನಗೆ ಎಂದು ಕಾನ್ವರ್ಸ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಕೊರೋನಾ ವೈರಸ್ ನ್ನು ತಡೆಗಟ್ಟಲು ಅಮೆರಿಕದಿಂದ ಭಾರತವೇ ಯಶಸ್ವಿಯಾಗಿದೆ. ಈ ಕಾರಣದಿಂದ ನಾನು ವಾಪಸ್ ಅಮೆರಿಕಾಗೆ ತೆರಳುವ ಬದಲು ಭಾರತದಲ್ಲೇ ಇನ್ನೂ 6 ತಿಂಗಳು ಇರಲು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ. ಕಾನ್ವರ್ಸ್, ವಾಷಿಂಗ್ ಟನ್ ಸ್ಟೇಟ್ ವಿಶ್ವವಿದ್ಯಾನಿಲಯದ ರಂಗಭೂಮಿ (ಥಿಯೇಟರ್) ವಿಭಾಗದ ಪೆÇ್ರಫೆಸರ್ ಆಗಿದ್ದು, ನಿರ್ದೇಶನ, ಸಮಕಾಲೀನ ವಿಶ್ವ ರಂಗಭೂಮಿ, ಸ್ಕ್ರಿಪ್ಟ್ ವಿಶ್ಲೇಷಣೆಯನ್ನು ಬೋಧಿಸುತ್ತಾರೆ. ಕೊಚಿಯಲ್ಲಿರುವ ಪನಂಪಿಲ್ಲಿ ನಗರ್ ನಲ್ಲಿ ಕಾನ್ವರ್ಸ್ ಆಶ್ರಯ ಪಡೆದಿದ್ದಾರೆ. ಇವರ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸದೇ ಇದ್ದಲ್ಲಿ ಪೆÇ್ರಫೆಸರ್ ಕಾನ್ವರ್ಸ್ ಅವರು ಕೇಳಿರುವ ಅವಧಿಗಿಂತಲೂ ಹೆಚ್ಚಿನ ಅವಧಿಗೆ ವೀಸಾ ವಿಸ್ತರಣೆಯಾಗಲಿದೆ. ಇದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದಿದೆ.
      ಭಾರತದಲ್ಲಿರುವ ವಿವಿಧ ರಂಗಭೂಮಿಗಳ ಅಧ್ಯಯನಕ್ಕಾಗಿ ಟೆರ್ರಿ ಜಾನ್ ಕಾನ್ವರ್ಸ್ ಭಾರತಕ್ಕೆ ಬಂದಿದ್ದರು. 180 ದಿನಗಳು ಇದ್ದ ಹಿನ್ನೆಲೆಯಲ್ಲಿ ಕೇರಳದಲ್ಲಿ ಅವರಿಗೆ ಟೂರಿಸ್ಟ್ ವೀಸಾ ಲಭ್ಯವಾಗಿತ್ತು. ಈಗ ಅದರ ಸಿಂಧುತ್ವ ಕೊನೆಗೊಂಡಿದೆ. ಫೀನಿಕ್ಸ್ ವಲ್ರ್ಡ್ ರಂಗಭೂಮಿ ತಂಡ ನಡೆಸುತ್ತಿರುವ ಚರು ನಾರಾಯಣಕುಮಾರ್ ಅವರ ಆಶ್ರಯದಲ್ಲಿ ಟೆರ್ರಿ ಜಾನ್ ಕಾನ್ವರ್ಸ್ ಇದ್ದಾರೆ. ಭಾರತದಲ್ಲಿರುವುದು ನನ್ನ ಅದೃಷ್ಟ, ನಾನು ಇಲ್ಲಿ ಆರಾಮ, ಸುರಕ್ಷಿತವಾಗಿದ್ದೇನೆ ಎನ್ನುತ್ತಾರೆ ಅಮೆರಿಕ ಪ್ರಜೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries