ಕಾಸರಗೋಡು: ಕೋವಿಡ್ ರೋಗ ಹರಡದಂತೆ ಜಾಗ್ರತೆ ವಹಿಸಿದ ಜಿಲ್ಲೆಯ ಕೋವಿಡ್ ರೋಗಿಗಳು ಮಾದರಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ದೃಢೀಕರಿಸಿದ ಶೇ.80 ರಷ್ಟು ರೋಗಿಗಳು ಯಾರಿಗೂ ರೋಗವನ್ನು ಹರಡಿಲ್ಲ. ಈ ವರೆಗೆ ಜಿಲ್ಲೆಯಲ್ಲಿ 167 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 102 ಮಂದಿಗೆ ನೇರವಾಗಿಯೂ, ಬಾಕಿ 65 ಮಂದಿಗೆ ಸಂಪರ್ಕದ ಮೂಲಕ ರೋಗ ಹರಡಿದೆ. ಸಂಪರ್ಕದ ಮೂಲಕ ರೋಗ ಬಾಧಿಸಿದವರಲ್ಲಿ ಶೇ.50 ಮಂದಿಗೆ 9 ರೋಗಿಗಳಿಂದ ರೋಗ ಹರಡಿತ್ತು. ಬಾಕಿ 15 ಮಂದಿಗೆ ರೋಗ ಹರಡಿದ್ದು 13 ಮಂದಿಯಿಂದ.
ದೆಹಲಿ ನಿಜಾಮುದ್ದೀನ್ ತಬ್ಲಿಘ್ ಸಮಾವೇಶದಲ್ಲಿ ಭಾಗವಹಿಸಿದ ಒಬ್ಬರಿಗೆ ಹೊರತು ಪಡಿಸಿ ನೇರವಾಗಿ ರೋಗ ದೃಢೀಕರಿಸಿದ್ದ 101 ಮಂದಿಯೂ ವಿದೇಶದಿಂದ ಬಂದವರು. ಇದರಲ್ಲೂ ಬೆರಳೆಣಿಕೆಯ ವ್ಯಕ್ತಿಗಳನ್ನು ಬಿಟ್ಟರೆ ಉಳಿದವರೆಲ್ಲಾ ಕೊಲ್ಲಿ ದೇಶದಿಂದ ಬಂದವರು.
ನೇರವಾಗಿ ರೋಗ ಖಾತರಿಯಾಗಿದ್ದ 102 ಮಂದಿಯ ಪೈಕಿ 80 ಮಂದಿ ರೋಗವನ್ನು ಹರಡಿಲ್ಲ ಎಂಬುದು ಈ ವರೆಗಿನ ಅಂಕಿಅಂಶ ವ್ಯಕ್ತಪಡಿಸುತ್ತಿದೆ. ಆರೋಗ್ಯ ಇಲಾಖೆಯ ನಿರ್ದೇಶಗಳನ್ನು ಬಹುತೇಕ ಮಂದಿ ಪಾಲಿಸಿದ್ದರಿಂದ ಸಾಮೂಹಿಕ ಹರಡುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಅತ್ಯಧಿಕ ಸಾಧ್ಯತೆಯಿದ್ದ 10 ಸ್ಥಳಗಳನ್ನು ಕೇಂದ್ರ ತೀರ್ಮಾನಿಸಿದಾಗಲೇ ಕಾಸರಗೋಡು ಅದರಲ್ಲೊಂದಾಗಿತ್ತು. ಕೇಂದ್ರ ಗುರುತಿಸಿದ 10 ಸ್ಥಳಗಳ ಪೈಕಿ 9 ಸ್ಥಳಗಳಲ್ಲೂ ಕೊರೊನಾ ರೋಗ ವ್ಯಾಪಕವಾಗಿ ಹರಡುತ್ತಿದ್ದ್ದು, ಕಾಸರಗೋಡಿನಲ್ಲಿ ರೋಗದಿಂದ ಮುಕ್ತರಾಗುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ.
ದೃಢಗೊಂಡ ಕೋವಿಡ್ 19
ದಿನಾಂಕ ಕೋವಿಡ್ ಪೆÇಸೆಟಿವ್
ಫೆ.3 1
ಮಾ.17 1
18 0
19 0
20 8
21 5
22 5
23 19
24 6
25 0
26 3
27 33
28 2
29 7
30 17
31 2
ಎ.1 12
2 8
3 7
4 6
5 1
6 9
7 4
8 1
9 4
10 3
11 2
12 0
13 0
14 1
15 0
ಒಟ್ಟು - 167
ಗುಣಮುಖರಾದವರು 83


