ಕಾಸರಗೋಡು: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಸಮುದಾಯ ಅಡುಗೆ ಮನೆಗಳಿಗೆ 25 ಸಾವಿರ ರೂ. ಮೌಲ್ಯದ ಸಾಮಾಗ್ರಿಗಳನ್ನು, ಅಸೋಸಿಯೇಶನ್ ಮಹಿಳಾ ಘಟಕ ನೇತೃತ್ವದಲ್ಲಿ ಪೆÇಲೀಸ್ ಸಿಬ್ಬಂದಿಗಾಗಿ 20 ಸಾವಿರ ರೂ. ಮೌಲ್ಯದ ಸ್ಯಾನಿಟೈಸರ್, ಎನ್-19 ಮಾಸ್ಕ್‍ಗಳನ್ನು ಹಸ್ತಾಂತರಿಸಲಾಗಿದೆ.
ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಸಾಮಾಗ್ರಿಗಳನ್ನು, ಡಿ.ವೈ.ಎಸ್.ಪಿ. ಕಚೇರಿಯ ಸಿಬ್ಬಂದಿ ಸ್ಯಾನಿಟೈಸರ್ ಸಹಿತ ಸೌಲಭ್ಯಗಳನ್ನು ಪಡೆದುಕೊಂಡರು. ಅಸೋಸಿಯೇಶನ್ ಜಿಲ್ಲಾ ಸಮಿತಿ ಅಧ್ಯಕ್ಷ ಜನಾರ್ದನ ಕಾಮತ್, ಕಾರ್ಯದರ್ಶಿ ಹರಿಪ್ರಸಾದ್ ಪಿ. ನೇತೃತ್ವ ವಹಿಸಿದ್ದರು. ಸದಸ್ಯರಾದ ನಿತಿ ನ್ ಕುಮಾರ್, ಜಿಷಾ ಎನ್., ಅಶ್ವತಿ ಕೆ., ಶ್ರೀಕುಮಾರ್ ಪಿ.ಆರ್., ಕಿರಣ್, ನಿರುಪಮ, ಮೀರಾ, ಅಂಜಲಿ ಮೊದಲಾದವರು ಉಪಸ್ಥಿತರಿದ್ದರು.



