HEALTH TIPS

ಕೋವಿಡ್ 19 ಕಾಸರಗೋಡು ನಂ.1 ಆಗುವುದರ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಸಾಧನೆ ನಡೆಸುತ್ತಿರುವ ನಿಯಂತ್ರಣ ಘಟಕ

 
    ಕಾಸರಗೋಡು:  ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲಾ ಕರೋನಾ ನಿಯಂತ್ರಣ ಘಟಕ ಸದ್ದಿಲ್ಲದೆ, ಶ್ಲಾಘನೀಯ ಸಾಧನೆ ನಡೆಸುತ್ತಿದೆ. 
         24 ತಾಸುಗಳೂ ಚಟುವಟಿಕೆ ನಡೆಸುತ್ತಿರುವ ಘಟಕದಲ್ಲಿ ಸಾರ್ವಜನಿಕರ ಸಂಶಯ ಪರಿಹಾರದ ಕಾಲ್ ಸೆಂಟರ್, ಸೋಂಕು ಬಾಧಿತರ ಸಂಪರ್ಕ ಪಟ್ಟಿ ಸಿದ್ಧಪಡಿಸುವಿಕೆ, ಕೌನ್ಸಿಲಿಂಗ್ ಸೌಲಭ್ಯ, ಆಂಬುಲೆನ್ಸ್ ಸೇವೆಗಳು, ಚಟುವಟಿಕೆಗಳ ಯೋಜನೆ ವರದಿ ಸಲ್ಲಿಕೆ ಸಹಿತ ವಿವಿಧ ಮಜಲುಗಳಲ್ಲಿ ಸೇವೆ ನಡೆಯುತ್ತಿದೆ.
      7 ದೂರವಾಣಿಗಳ ಮೂಲಕ ಇಲ್ಲಿ ಸಾರ್ವಜನಿಕರ ಮತ್ತು ವಿವಿಧ ಇಲಾಖೆಗಳ ಸಂಪರ್ಕ ನಡೆಸಲಾಗುತ್ತಿದೆ. ಕೊರೋನಾ ಪಾಸಿಟಿವ್ ಕೇಸುಗಳ ಪ್ರಾಥಮಿಕ, ದ್ವಿತೀಯ ಸಂಪರ್ಕ ಪಟ್ಟಿ, ರೂಟ್ ಮ್ಯಾಪ್ ಸಹಿತ ಗಮನಾರ್ಹ ಸಾಧನೆ ಗಳಲ್ಲಿ ಕೊರೋನಾ ನಿಯಂತ್ರಣ ಘಟಕದ ಪಾಲು ಸಣ್ಣದಲ್ಲ. ಈ ರೀತಿ ಸಿದ್ಧಗೊಳ್ಳುವ ಪಟ್ಟಿಯಲ್ಲಿ ಸೇರಿದವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, ಅವರ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳುಹಿಸುವ ಜಾಗರೂಕ ಕಾಯಕಗಳನ್ನು ಈ ಘಟಕ ನಡೆಸುತ್ತಿದೆ.
      ಮನೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ನಿಗಾದಲ್ಲಿರುವ ಮಂದಿಯ ಮಾನಸಿಕ ಒತ್ತಡ ಕಡಿತಗೊಳಿಸುವ ನಿಟ್ಟಿನಲ್ಲಿ ಟೆಲಿ ಕೌನ್ಸಿಲಿಂಗ್ ಸೌಲಭ್ಯ ಕೊರೋನಾ ನಿಯಂತ್ರಣ ಘಟಕದಲ್ಲಿದೆ. ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯಪರಿಣತ ಡಾ.ಸನ್ನಿ ಮ್ಯಾಥ್ಯೂ ಅವರ ನೇತೃತ್ವದ ತಂಡ ಟೆಲಿ ಕೌನ್ಸಿಲಿಂಗ್ ನಡೆಸುತ್ತಿದೆ. ಅಲ್ಕೋಹಾಲ್ ಅಡಿಕ್ಷನ್ ಸಂಬಂಧ ಮಾನಸಿಕ ಸಮಸ್ಯೆಗಳ ಸಹಿತ ಕೌನ್ಸಿಲಿಂಗ್ ಕೂಡ ಇಲ್ಲಿ ನಡೆಸಲಾಗುತ್ತಿದೆ.
      ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯಲ್ಲಿ ಸಂಚಾರ ನಡೆಸುತ್ತಿರುವ 14 ಆಂಬುಲೆನ್ಸ್ ಗಳ ಚಟುವಟಿಕೆಗಳನ್ನು ಇಲ್ಲಿ ನಿಯಂತ್ರಿಸಲಾಗುತ್ತಿದೆ. ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಮೇಲ್ನೋಟದೊಂದಿಗೆ ಇಲ್ಲಿನ ಎಲ್ಲ ಚಟುವಟಿಕೆಗಳೂ ನಡೆಯುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries