ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿರುವಂತೆ ತಮ್ಮ ಮಗುವಿನ ಪ್ರಥಮ ಹುಟ್ಟು ಹಬ್ಬವನ್ನು ಕೊರೊನಾ ವಾರ್ಡ್‍ನಲ್ಲಿ ಆಚರಿಸಲಾಯಿತು.
ಪಳ್ಳಿಕ್ಕಾಲಿನ ಕಬೀರ್ ಮತ್ತು ರಿಸ್ವಾನ ದಂಪತಿಗಳ ಒಂದು ವರ್ಷದ ಮಗು ಆಯಿಷಾ ಶಿಫಾ ಹುಟ್ಟು ಹಬ್ಬವನ್ನು ವೈದ್ಯರು ಹಾಗು ಇತರ ಸಿಬ್ಬಂದಿಗಳು ಸೇರಿ ನಡೆಸಿದರು.
ಎಂದಿನಂತೆ ಬೆಳಗ್ಗಿನ ತಪಾಸಣೆಯ ಬಳಿಕ ಡಾ.ಅಹಮ್ಮದ್ ನಿಸಾರ್ ಅವರು ಶುಭ ಹಾರೈಸಿದಾಗಲೇ ಮಗುವಿನ ಹುಟ್ಟು ದಿನದ ನೆನಪಾಯಿತು. ಆಸ್ಪತ್ರೆಯ ದಾದಿಯರು, ಸಿಬ್ಬಂದಿಗಳು, ವೈದ್ಯರೆಲ್ಲರೂ ಸೇರಿ ಕೇಕ್ ಕತ್ತರಿಸಿ ಮಗುವಿನ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ದುಬೈಯಿಂದ ಬಂದಿದ್ದ ಕಬೀರ್ ಹಾಗು ಪತ್ನಿ ರಿಸ್ವಾನ ಅವರಿಗೆ ಕೊರೊನಾ ಸೋಂಕು ಬಾಧಿಸಿತ್ತು.


