ಕಾಸರಗೋಡು: ಮಂಗಳೂರಿನಿಂದ ಹೆಚ್ಚುವರಿ ಮಾಂಸದ ಕೋಳಿಗಳನ್ನು ಜಿಲ್ಲೆಗೆ ತರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಜಿಲ್ಲಾ ಮೃಗಸಂರಕ್ಷಣಾ ಇಲಾಖೆ ಅಧಿಕಾರಿಗೆ ಆದೇಶ ನೀಡಿದ್ದಾರೆ. ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋಳಿ ಮಾಂಸದ ಲಭ್ಯತೆ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಮಾಂಸದಕೋಳಿ ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಬೇಕಾಗಿ ಅವರು ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೇಬಿ ವಾಕ್ಸಿನ್ ಕೊರತೆಯ ಹಿನ್ನೆಲೆಯಲ್ಲಿ ಪಂಚಾಯಿತಿಗಳ ಪಿ.ಎಚ್.ಸಿ.ಗಳಲ್ಲಿ ವಾರಕ್ಕೊಮ್ಮೆ ವಾಕ್ಸಿನ್ ನೀಡುವಕ್ರಮ ಕೈಗೊಲ್ಳಲು ಸಭೆ ತೀರ್ಮಾನಿಸಿತು. ರೈಲ್ವೇ ವ್ಯಾಗನ್ ಗಳಲ್ಲಿರುವ ಅಕ್ಕಿಯನ್ನು ತುರ್ತಾಗಿ ದಾಸ್ತಾನುಗೃಹಗಳಿಗೆ ವರ್ಗಾಯಿಸಲಾಗುವುದು. ಇತರ ರಾಜ್ಯಗಳ ಕಾರ್ಮಿಕರಿಗೆ ವಿತರಿಸುವ ಆಹಾರ ಧಾನ್ಯ ಕಿಟ್ ನಲ್ಲಿ ಗೋಧಿಪುಡಿಯ ಕೊರತೆಯ ಹಿನ್ನೆಲೆಯಲ್ಲಿ ಅಕ್ಕಿಯನ್ನು ಪರ್ಯಾಯವಾಗಿಕಿಟ್ ಲ್ಲಿ ಅಳವಡಿಸಲಾಗುವುದು ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿದರು. ಸಪ್ಲೈಕೋ ಸಿದ್ಧಪಡಿಸಿದ ಆಹಾರ ಧಾನ್ಯ ಕಿಟ್ ಗ¼ನ್ನುಇನ್ಸಿಡೆಂಟ್ ಕಮಾಂಡರ್ಸ್‍ನ ನೇತೃತ್ವದಲ್ಲಿ ಗ್ರಾಮಾಧಿಕಾರಿ ಮುಖಾಂತರ ವಿತರಿಸಲಾಗುವುದು. ಸಪ್ಲೈ ಕೋ ಸಿದ್ಧಪಡಿಸಿದಆಹಾರ ಧಾನ್ಯ ಕಿಟ್ ಗಳನ್ನು ಸಬಂಧಪಟ್ಟ ವಿತರಣೆ ಕೇಂದ್ರಗಳಿಗೆ ತಲಪಿಸುವ ನಿಟ್ಟಿನಲ್ಲಿ ಶಾಲಾ ಬಸ್ ಗಳನ್ನು ಬಳಸಲು ಅನುಮತಿನೀಡಲಾಗುವುದು ಎಂದು ಸಭೆ ತಿಳಿಸಿದೆ. ಉಪಜಿಲ್ಲಾಧಿಕಾರಿ ಅರುಣ್ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯಕಂದಾಯಾಧಿಕಾರಿ ಆರ್. ಅಹಮ್ಮದ್ ಕಬೀರ್, ಜಿಲ್ಲಾ ಮಟ್ಟದ ಇತರ ಸಿಬ್ಬಂದಿ ಉಪಸ್ಥಿತರಿದ್ದರು.


