HEALTH TIPS

ಮುಂದಿನ ವಾರದಿಂದ ಇಮ್ಯುನೈಸೇಷನ್ ಆರಂಭ-ಜಾಗ್ರತೆ ಪಾಲಿಸಲು ನಿರ್ದೇಶ

     
       ಕಾಸರಗೋಡು: ಮಕ್ಕಳ ರೋಗ ಪ್ರತಿರೋಧಕ್ಕಾಗಿ ನೀಡಲಾಗುವ ಇಮ್ಯುನೈಸೇಷನ್ ಪುನರಾರಂಭಿಸಲು ಆರೋಗ್ಯ ಇಲಾಖೆ ನಿಬಂಧನೆಗಳನ್ನು ಪ್ರಕಟಿಸಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು. ಕೋವಿಡ್-19 ಕಾರಣದಿಮದ ನಿಲುಗಡೆ ಮಾಡಲಾಗಿದ್ದ ಇಮ್ಯುನೈಸೇಷನ್ ಮುಂದಿನ ವಾರದಿಂದ ಪುನರಾರಂಭಿಸಲು ಆದೇಶ ನೀಡಲಾಗಿದೆ. ಮಕ್ಕಳಿಗೆ, ತಾಯಂದಿರಿಗೆ, ಆರೋಗ್ಯ ಕಾರ್ಯಕರ್ತರಿಗೆ ರೋಗ ಹರಡುವಿಕೆ ನಡೆಯದಂತೆ ಜಾಗ್ರತೆ ಪಾಲಿಸುವ ಮೂಲಕ ಇಮ್ಯುನೈಸೇಷನ್ ನೀಡಬೇಕು ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ.
         ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಮುಂದಿನ ಬುಧವಾರದಿಂದ ಆರಂಭಗೊಳ್ಳಲಿದೆ. ಇತರ ಆಸ್ಪತ್ರೆಗಳಲ್ಲಿ ಇಮ್ಯುನೈಸೇಷನ್ ಸ್ವೀಕರಿಸುವ ದಿನಗಳಲ್ಲೇ ಇದೂ ಮುಂದುವರಿಯಲಿದೆ. ಇಮ್ಯುನೈಸೇಷನ್ ಪಡೆಯಲು ವಿಳಂಬವಾಗಿ ಹೆಚ್ಚುವರಿ ಮಕ್ಕಳಿರುವ ಪ್ರದೇಶಗಳಲ್ಲಿ ದಿನಾಂಕ ಮತ್ತು ಸಮಯ ಹೆಚ್ಚಳಗೊಳಿಸಬೇಕಿದೆ ಎಂದವರು ತಿಳಿಸಿದರು. ಅಂಗನವಾಡಿ, ಆಶಾ ಕಾರ್ಯಕರ್ತರು, ಜೆ.ಪಿ.ಎಚ್. ಗಳು ಸೇರಿ ಇವರ ಲೈನ್ ಲಿಟ್ ಪಡೆದು ಮುಂಗಡ ಅಪಾಯಿಂಟ್ ಮೆಂಟ್ ನೀಡಿ, ಜನಸಂದಣಿ ನಡೆಯದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾತ್ರ ಇಮ್ಯುನೈಸೇಷನ್ ನೀಡಬೇಕು. ಏಕಕಾಲಕ್ಕೆ ಒಂದು ಪ್ರದೇಶದಲ್ಲಿ 5 ಮಂದಿಗೆ ಮಾತ್ರ ಅನುಮತಿ ಇರುವುದು. ಪ್ರತಿಯೊಬ್ಬರೂ ತಲಾ ಒಂದು ಮೀಟರ್ ಅಂತರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇಮ್ಯುನೈಸೇಷನ್ ನೀಡುವ ಜಾಗ ಒ.ಪಿ.ಯಿಂದ ಕೊಂಚ ದೂರದಲ್ಲಿರಬೇಕು. ಮಗು ಸಹಿತ ಆಗಮಿಸುವ ತಾಯಿ, ಆರೋಗ್ಯ ಕಾರ್ಯಕರ್ತರು ಮಾಸ್ಕ್ ಧರಿಸಿರಬೇಕು. ಇಮ್ಯುನೈಸೇಷನ್ ನೀಡುವ ಆರೋಗ್ಯ ಕಾರ್ಯಕರ್ತರು ತ್ರಿ ಲೈನ್ ಮಾಸ್ಕ್ ಮತ್ತು ಗ್ಲೌಸ್ ಧರಿಸಿರಬೇಕು ಎಂದೂ ನಿರ್ದೇಶ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries