HEALTH TIPS

ಲಾಕ್ ಡೌನ್-ಸಾರ್ವಜನಿಕರಿಗೆ ಉಚಿತ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಪೂರ್ಣ

     
       ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಹಾರ ಸುರಕ್ಷತೆ ಖಚಿತಪಡಿಸುವನಿಟ್ಟಿನಲ್ಲಿ ರಾಜ್ಯ ಸರಕಾರ ವತಿಯಿಂದ ನೀಡಲಾಗುವ ಉಚಿತ ಆಹಾರ ಧಾನ್ಯ ಕಿಟ್ ವಿತರಣ ಜಿಲ್ಲೆಯ ಎಲ್ಲ ಅಂತ್ಯೋದಯ ಅನ್ನಪೂರ್ಣ ಪಡಿತರ ಚೀಟಿದಾರರಿಗೆ (ಹಳದಿ ಚೀಟಿ) ವಿತರಿಸಲಾಗಿದೆ. ಪಡಿತರ ಅಂಗಡಿಗಳ ಮೂಲಕ ವಿತರಣೆ ನಡೆಸಲಾದ 30441 ಕಿಟ್ ಗಳಲ್ಲಿ 29260 ಕಿಟ್ ಗಳನ್ನು (ಶೇ 96.12)ಕಾರ್ಡ್ ದಾರರು ಪಡೆದುಕೊಂಡಿದ್ದಾರೆ. ಮುಂದಿನ ಹಂತದಲ್ಲಿ ಆದ್ಯತೆ ಪಟ್ಟಿಯಲ್ಲಿರುವ ಮಂದಿಗೆ (ಪಿಂಕ್ ಚೀಟಿ)ಕಿಟ್ ಗಳು ಲಭಿಸಲಿವೆ. ಜಿಲ್ಲೆಯಲ್ಲಿ 102000 ಮಂದಿ ಆದ್ಯತೆ ಪಟ್ಟಿಯಲ್ಲಿದ್ದಾರೆ. ಇತರ ರಾಜ್ಯ ಗಳಿಂದ ರವಾನೆಗೊಳ್ಳುತ್ತಿರುವ ಧಾನ್ಯಗಳ ಕೊರತೆಯಿದ್ದರೂ, ಈಗಾಗಲೇ ದಾಸ್ತಾನು ಇರುವ ಧಾನ್ಯಗಳನ್ನು ಬಳಸಿ ಕಿಟ್ ಸಿದ್ಧಪಡಿಸಲಾಗಿದೆ. ಎರಡನೇ ಹಂತದಲ್ಲಿ ರಾಜ್ಯ ಸರ್ಕಾರ ಆದೇಶಿಸಿರುವ ಪ್ರಕಾರ ಕಿಟ್‍ನಲ್ಲಿ ಅಳವಡಿಸಬೇಕಾದ ಉದ್ದು, ತೊಗರಿ ಬೇಳೆ ಇತ್ಯಾದಿಗಳ ಕೊರತೆ ಕಾಡುತ್ತಿದ್ದರೂ ಸಾಮಾಗ್ರಿಗಳು ಲಭಿಸಿದ ಲಕ್ಷಣ ತುರ್ತಾಗಿ ಪ್ಯಾಕಿಂಗ್ ನಡೆಸಿ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಜಿಲ್ಲೆಯ ಸಪ್ಲೈ ಕೋ ಡಿಪೆÇೀ ಪ್ರಬಂಧಕ ಕೆ. ಶಂಸುದ್ದೀನ್‍ತಿಳಿಸಿದರು.
           17 ಸಾಮಾಗ್ರಿಗಳಿರುವ ಕಿಟ್:
      ಕುಟುಂಬವೊಂದಕ್ಕೆ ಒಂದು ಕಿಟ್ ಎಂಬ ರೀತಿ ಒಂದು ಸಾವಿರ ರೂ. ಬೆಲೆಯ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ತಲಾ 2 ಕಿಲೋ ಗೋಧಿ ಪುಡಿ, ಸಕ್ಕರೆ, ಪಚ್ಚೆ ಹೆಸರು, ಕಡ್ಲೆ, ಉದ್ದು, ರವೆ, ಉಪ್ಪು, ಒಂದು ಲೀಟರ್ ಸೂರ್ಯ ಕಾಂತಿ ಎಣ್ಣೆ, ಅರ್ಧಲೀಟರ್ ತೆಂಗನೆಣ್ಣೆ, ತಲಾ 250 ಗ್ರಾಂ ಚಹಾಪುಡಿ, ಬೇಳೆ, ತಲಾ 100 ಗ್ರಾಂ ಮೆಣಸಿನ ಪುಡಿ, ಹಳದಿ ಪುಡಿ, ಜೀರಿಗೆ ಪುಡಿ, ಸಾಸಿವೆ, ಬಟ್ಟೆ ಒಗೆಯುವ ಸಾಬೂನು, ಶೌಚಾಲಯ ಸಾಬನು ಇತ್ಯಾದಿ 17 ಸಾಮಾಗ್ರಿಗಳಿರುವ ಕಿಟ್ ಇದಾಗಿದೆ. ಸಪ್ಲೈ ಕೋ ನೇತೃತ್ವದಲ್ಲಿ ಪ್ಯಾಕೆಟ್ ನಡೆಸಿ, ಪಡಿತರ ಅಂಗಡಿಗಳ ಮೂಲಕ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಸ್ಥಳೀಯ ಮಾವೇಲಿ ಸ್ಟೋರ್ ಗಳನ್ನುಕೇಂದ್ರೀಕರಿಸಿ ಕಿಟ್ ಸಿದ್ಧಪಡಿಸುವ ನಿಟ್ಟಿನಲ್ಲಿ ಕುಟುಂಬಶ್ರೀ ಮತ್ತು ಸ್ವಯಂ ಸೇವಾ ಸಂಘಟನೆಗಳ ಸಹಾಯ ಖಚಿತಪಡಿಸಲಾಗುತ್ತಿದೆ. ಪಡಿತರ ಚೀಟಿ ಇಲ್ಲದವರಿಗೆ ಮತ್ತು ಅನಾಥಾಲಯಗಳಲ್ಲಿರುವವರಿಗೆ 4 ಮಂದಿಗೆ ಒಂದು ಕಿಟ್ ಎಂಬ ರೀತಿ ವಿತರಣೆ ನಡೆಸಲು ಸರಕಾರ ಆದೇಶ ನಿಡಿದೆ. ಇದು ಸಾಮಗ್ರಿಗಳ ಲಭಿಸಿದ ನಂತರವಷ್ಟೇ ವಿತರಣೆಗೊಳ್ಳಲಿದೆ. ಆಧಾರ್ ಕಾರ್ಡ್ ಬಳಸಿಯೂ ಪಡಿತರ ಅಂಗಡಿಯಿಂದ ಕಿಟ್ ಪಡೆದುಕೊಳ್ಳಬಹುದು.
                   21ರಂದು ಪಿ.ಎಂ.ಜಿ.ಕೆ.ಎ.ವೈ. ಅಕ್ಕಿ ವಿತರಣೆ:
     ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಪ್ರಕಾರದ ಎ.ಎ.ವೈ., ಆದ್ಯತೆ ಪಟ್ಟಿಯಲ್ಲಿರುವವರಿಗೆ ಉಚಿತ ಅಕ್ಕಿವಿತರಣೆ ಏ.21 ರಂದು ಆರಂಭಗೊಳ್ಳಲಿದೆ. ಒಬ್ಬ ವ್ಯಕ್ತಿಗೆ 5 ಕಿಲೋ ಅಕ್ಕಿ ಎಂಬ ರೀತಿ ಏಪ್ರಿಲ್ನಿಂದ ಮೂರು ತಿಂಗಳಕಾಲ ಅಕ್ಕಿವಿತರಣೆ ನಡೆಯಲಿದೆ. ಇದಕ್ಕಾಗಿ ಜಿಲ್ಲೆಯ 300 ಪಡಿತರ ಅಂಗಡಿಗಳಿಗೆ ಅಕ್ಕಿ ಈಗಾಗಲೇ ವಿತರಣೆ ನಡೆಸಲಾಗಿದೆ. ಉಳಿದ ಅಂಗಡಿಗಳಿಗೆ ಎರಡು ದಿನಗಳ ಅವಧಿಯಲ್ಲಿ ತಲುಪಿಸಲಾಗುವುದು ಎಂದು ಜಿಲ್ಲಾ ನಾಗರೀಕ ಪೂರೈಕೆ ಅಧಿಕಾರಿ ವಿ.ಕೆ.ಶಶಿಧರನ್‍ತಿಳಿಸಿದರು. ರಾಜ್ಯ ಸರ್ಕಾರ ಮಂಜೂರು ಮಾಡಿರುವ ಉಚಿತ ಪಡಿತರ ಅಕ್ಕಿ ವಿತರಣೆ ಜಿಲ್ಲೆಯಲ್ಲಿ ಶೇ 98.2 ಪೂರ್ತಿಗೊಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries