HEALTH TIPS

ಮಾನವೀಯತೆಯ ಕೈಯಾಸರೆ ನೀಡಿದ ಸಿಪಿಟಿ-ರಾಜಧಾನಿಯಿಂದ ಕಾಞಂಗಾಡಿಗೆ ಮನೆ ತಲಪಲು ನೆರವಾದ ದೀರ್ಘ ಪ್ರಯಾಣದ ನೆರವು ನೀಡಿ ಜನಮನ್ನಣೆ ಗಳಿಸಿದ ಪ್ರೊಟೆಕ್ಷನ್ ತಂಡ


             ಕಾಸರಗೋಡು: ಲಾಕ್ ಡೌನ್ ಕಾರಣ ಜನ ಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದು, ಕೆಲವೆಡೆಗಳಲ್ಲಿ ಸಾಮಾಜಿಕ ಸಂಘಟನೆಗಳ ನೆರವಿನೊಂದಿಗೆ ಅಂತಹ ಜಟಿಲತೆಗಳಿಂದ ಪಾರಾಗುತ್ತಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ತುರ್ತು ಚಿಕಿತ್ಸೆಗಾಗಿ ತಿರುವನಂತಪುರಕ್ಕೆ ತೆರಳಿ ಮರಳಿ ಬರಲಾಗದೆ ಪರಿತಪಿಸುತ್ತಿದ್ದ ರೋಗಿಯೋರ್ವೆಗೆ ಇಂತಹ ಮಾನವೀಯತೆಯ ನೆರವು ಲಭ್ಯವಾಗಿ ತನ್ನ ಮನೆಗೆ ಸುರಕ್ಷಿತವಾಗಿ ತಲಪಿದ ಇದೀಗ ಜನರ ಪ್ರಶಂಸೆಗೆ ಕಾರಣವಾಗಿದೆ.
         ಕಾಞಂಗಾಡ್ ಸಮೀಪದ ಕೊಟ್ಟೋಡಿ ಎಂಬಲ್ಲಿಯ ಅಂಬಿಕಾ ಎಂಬ ಮಹಿಳೆಯೊಬ್ಬರು ಮೆದುಳಿನ ಅರ್ಬುದ ಶಸ್ತ್ರ ಚಿಕಿತ್ಸೆಗಾಗಿ ತಿರುವನಂತಪುರದ ಶ್ರೀಚಿತ್ರಾ ಅರ್ಬುದ ನಿವಾರಣಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಲಾಕ್ ಡೌನ್ ಕಾರಣ ಚಿಕಿತ್ಸೆಯ ಬಳಿಕ ಊರಿಗೆ ಮರಳಲಾಗದೆ ಸಂಕಷ್ಟಕ್ಕೊಳಗಾಗಿದ್ದರು. ಕೆಲವು ದಿನಗಳನ್ನು ಆಸ್ಪತ್ರೆಯಲ್ಲೇ ಅನಿವಾರ್ಯವಾಗಿ ಕಳೆದ ಅಂಬಿಕಾ ಹಾಗವರ ಕುಟುಂಬದವರು ಬಳಿಕ ವಿಷು ಹಬ್ಬದ ಮುನ್ನಾದಿನ ತಮಗೆ ಊರಿಗೆ ಮರಳಲಾಗದೆ ಕಷ್ಟ ಅನುಭವಿಸುತ್ತಿರುವ ಬಗ್ಗೆ ಚೈಲ್ಡ್ ಲೈನ್ ದುರಂತ ನಿವಾರಣಾ ತಂಡದ ಸದಸ್ಯ, ತಮ್ಮ ಊರಿನವರಾದ ಕಾಞÂಂಗಾಡ್ ರಾಜಪುರದ ಜೋಯೆಲ್ ಎಂಬವರಿಗೆ ಮಾಹಿತಿ ನೀಡಿದರು. 
        ಇಂತಹ ಸಂಕಷ್ಟದ ವಿವರ ಲಭ್ಯವಾಗುತ್ತಿರುವಂತೆ ಜೋಯೆಲ್ ಅವರು  ರಾಜ್ಯಾದ್ಯಂತ ಜನಪ್ರಿಯವಾಗಿರುವ ಚೈಲ್ಡ್ ಪ್ರೊಟೆಕ್ಷನ್ ದುರಂತ ನಿವಾರಣಾ ತಂಡದ ಗಮನಕ್ಕೆ ಈ ಸಂಕಷ್ಟದ ಬಗ್ಗೆ ತಮ್ಮ ವಾಟ್ಸ್‍ಆಪ್  ಸಂದೇಶಗಳನ್ನು ದಾಟಿಸಿದರು.
   ಕೂಡಲೇ ಕಾರ್ಯಪ್ರವೃತ್ತರಾದ ಚೈಲ್ಡ್ ಪ್ರೊಟೆಕ್ಷನ್ ದುರಂತ ನಿವಾರಣಾ ತಂಡ(ಸಿಪಿಟಿ-ಚೈಲ್ ಪ್ರೊಟೆಕ್ಷನ್ ಟೀಂ)ನ ರಾಜ್ಯ ಮುಖಂಡ ವಿನೋದ್ ಅಣಿಮಂಗಲ ಅವರು ಪೂರ್ಣ ಕಾರ್ಯಯೋಜನೆ ಸಿದ್ದಪಡಿಸಿ ಊರಿಗೆ ತಲಪಿಸುವ ಜವಾಬ್ದಾರಿಯ ರೂಪುರೇಖೆ ನಿರ್ಧರಿಸಿದರು. ತ್ರಿಶೂರ್ ಜಿಲ್ಲಾ ಸಿಪಿಟಿ ಅಧ್ಯಕ್ಷ ಶಿಹಾದ್ ಕೈಪ್ಪಮಂಗಳ, ಕಾರ್ಯದರ್ಶಿ ಜಿನ್ಸಿ ಬಿಜು, ಎಂಬವರ ನೇತೃತ್ವದಲ್ಲಿ ರಾಜ್ಯ ಅಧ್ಯಕ್ಷ ಸಿ.ಕೆ.ನಾಝರ್ ಅವರ ಬೆಂಬಲದೊಂದಿಗೆ ಶ್ರೀಚಿತ್ರಾ ಆಸ್ಪತ್ರೆಯಿಂದ ಆಂಬುಲೆನ್ಸ್ ವಾಹನದ ಮೂಲಕ ಊರಿಗೆ ಕರೆತರಲಾಯಿತು. ಇಂಡ್ಯನ್ ಮೆಡಿಕಲ್ ಅಸೋಸಿಯೇಶನ್ ರಾಜ್ಯ ಘಟಕ ಮತ್ತು ಆಂಬುಲೆನ್ಸ್ ಡ್ರೈವರ್ಸ್ ಅಸೋಸಿಯೇಶನ್ ರಾಜ್ಯ ಘಟಕಗಳು ಜಂಟಿಯಾಗಿ ಪ್ರಯಾಣದ ಖರ್ಚು ವೆಚ್ಚಗಳನ್ನು ಪ್ರಾಯೋಜಿಸಿದ್ದರು. ಶ್ರೀಚಿತ್ರ ಆಸ್ಪತ್ರೆಯ ನಿರ್ದೇಶಕ ಜಯಕುಮಾರ್, ಡಾ.ಅನುಪಮಾ ಹಾಗೂ ಸಹಾಯಕ ಶಾಜುದ್ದೀನ್ ಅವರು ಅಂಬಿಕಾ ಅವರ ಪ್ರಯಾಣಕ್ಕೆ ಹಾರೈಸಿ ಬೀಳ್ಕೊಟ್ಟಿದ್ದರು. ತಿರುವನಂತಪುರದಿಂದ ಕಾಸರಗೋಡು ಕಾಞÂಂಗಾಡ್ ನ ಅಂಬಿಕಾ ಅವರ ಮನೆಯವರೆಗೆ ಪ್ರಯಾಣದುದ್ದಕ್ಕೂ ಪೋಲೀಸ್ ಇಲಾಖೆಯ ಸಂಪೂರ್ಣ ಸಹಕಾರ ನೀಡಲಾಗಿತ್ತು. ಆಂಬುಲೆನ್ಸ್ ಚಾಲಕ ತಿರುವನಂತಪುರ ನಿವಾಸಿ ಶಂಸುದ್ದೀನ್ ಅವರು ಸುರಕ್ಷಿತ ಪ್ರಯಾಣದ ಸುಗಮತೆಗೆ ಕಾರಣರಾದರು. ಅಂಬಿಕಾ ಅವರ ಮನೆಗೆ ತಲಪುತ್ತಿರುವಂತೆ ಕಳ್ಳಾರ್ ಗ್ರಾ.ಪಂ. ಉಪಾಧ್ಯಕ್ಷ ಟಿ.ಕೆ.ನಾರಾಯಣನ್, ಸದಸ್ಯೆ ರಮಾ ಹಾಗೂ ಜೋಯಲ್ ವರ್ಗೀಸ್ ಉಪಸ್ಥಿತರಿದ್ದು ಸ್ವಾಗತಿಸಿ ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries