ತಿರುವನಂತಪುರ: ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ವೇಳೆ ಅಂತರ್ ರಾಜ್ಯ ಪ್ರಯಾಣಗಳಿಗೆ ನಿಬಂಧನೆಗಳ ಮೇರೆಗೆ ಮಂಜೂರಾತಿ ನೀಡಿರುವುದಾಗಿ ರಾಜ್ಯ ಸರಕಾರ ಆದೇಶ ಪ್ರಕಟಗೊಂಡಿದೆ.
ಗರ್ಭಿಣಿಯರಿಗೆ ಮತ್ತು ಚಿಕಿತ್ಸೆಗಾಗಿ ಕೇರಳಕ್ಕೆ ಆಗಮಿಸುವ, ಸಂಬಂಧಿಕರ ನಿಧನದ ಹಿನ್ನೆಲೆಯಲ್ಲಿ ಆಗಮಿಸುವವರಿಗೆ ಯಾ ಗಂಭೀರ ಅಸೌಖ್ಯದಿಂದ ಬಳಲುತ್ತಿರುವವರ ಬಳಿಗೆ ಬರುವ ಇತರ ರಾಜ್ಯಗಳ ಮಂದಿಗೆ, ಅದರಲ್ಲೂ ಕೇರಳೀಯರಿಗೆ ರಾಜ್ಯಕ್ಕೆ ಆಗಮಿಸಲು ಮನುಷ್ಯತ್ವದ ಮತ್ತು ಅನಿವಾರ್ಯತೆಯ ಹಿನ್ನೆಲೆಯನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತದೆ.
ಜಿಲ್ಲಾಧಿಕಾರಿಗೆ ಮಂಜೂರಾತಿ ನೀಡುವ ಅಧಿಕಾರವಿರುತ್ತದೆ. ಗರ್ಭಿಣಿಯರು ಈ ಸಂಬಂಧ ನೋಂದಣಿ ಹೊಂದಿರುವ ಪ್ರಸೂತಿ ತಜ್ಞರ ಮೆಡಿಕಲ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. ಆರೋಗ್ಯ ಸಂಬಂಧ ಮಾಹಿತಿಗಳಲ್ಲದೆ, ಜತೆಗೆ ಪ್ರಯಾಣ ಬೆಳೆಸುವವರ ಮಾಹಿತಿಗಳನ್ನೂ ಅರ್ಜಿಯೊಂದಿಗೆ ನೀಡಬೇಕು. ಮೂವರಿಗಿಂತ ಅಧಿಕ ಮಂದಿ ವಾಹನಗಳಲ್ಲಿ ಇರಕೂಡದು. ಗರ್ಭಿಣಿಯರ ಜೊತೆಗೆ ಮೈನರ್ (ಅಪ್ರಾಪ್ತ ವಯಸ್ಕ) ಮಕ್ಕಳಿದ್ದರೆ ಪ್ರಯಾಣ ಮಾಡಬಹುದಾಗಿದೆ. ಅರ್ಜಿ ಈ ಮೇಲ್ ಮೂಲಕ ಯಾ ವಾಟ್ಸ್ ಆಪ್ ಮೂಲಕ ಪ್ರಯಾಣ ಮೂಲಕ ತಲಪಬೇಕಾದ ಪ್ರದೇಶದ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಅರ್ಹರಾಗಿದ್ದರೆ ಜಿಲ್ಲಾಧಿಕಾರಿ ಯಾತ್ರಾ ದಿನಾಂಕ ಮತ್ತು ಸಮಯ ದಾಖಲಿಸಿ ಪಾಸ್ ಮಂಜೂರು ಮಾಡುವರು. ಈ ಪಾಸ್ ಮತ್ತು ವಾಸಿಸುವ ಪ್ರದೇಶದ ಜಿಲ್ಲಾಧಿಕಾರಿಯ ಕ್ಲಯರೆನ್ಸ್ ಸಹಿತ ತಲಪುವವರು ಗಡಿಪ್ರದೇಶದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ ರಾಜ್ಯಕ್ಕೆ ಪ್ರವೇಶ ಮಾಡಲು ಮಂಜೂರಾತಿ ನೀಡುವರು. ಗಡಿಪ್ರದೇಶಗಳ ತಪಾಸಣೆ ಪ್ರಕಾರ ಸಲಹೆ ಮಾಡುವ ಕ್ವಾರೆಂಟೈ ನ್ ಗೆ ಇವರು ಸಿದ್ಧರಾಗಬೇಕು. ಚಿಕಿತ್ಸೆಗಾಗಿ ಆಗಮಿಸುವವರು ಮಾಹಿತಿಗಳನ್ನು ಸಲ್ಲಿಸಿ ತಲಪಬೇಕಾದ ಪ್ರದೇಶದ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ತುರ್ತು ತಪಾಸಣೆ ನಡೆಸಿ ಜಿಲ್ಲಾಧಿಕಾರಿ ಮಂಜೂರಾತಿ ನೀಡಬಹುದಾಗದೆ. ಈ ಮಂಜೂರಾತಿಯೊಂದಿಗೆ ವ್ಯಕ್ತಿ ವಾಸಿಸುವ ಪ್ರದೆಶದ ಸಂಬಂಧಪಟ್ಟ ಅಧಿಕಾರಿಯಿಂದ ಯಾತ್ರಾ ಪಾಸ್ ಪಡೆಯಬೇಕು. ಈ ಎರಡೂ ದಾಖಲೆಗಳನ್ನು ಪರಿಶೀಲಿಸಿ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದು.
ಸಂಬಂಧಿಕರ ನಿಧನ ಯಾ ಗಂಭಿರ ರೋಗದಿಂದ ಬಳಲುವವರನ್ನು ಭೇಟಿಯಾಗಲು ಬರುವವರು ವಾಸಿಸುವ ರಾಜ್ಯದ ಸಂಬಂಧಪಟ್ಟ ಅಧಿಕಾರಿಯಿಂದ ವಾಹನ ಪಾಸ್ ಪಡೆದಿರಬೇಕು. ಜೊತೆಗೆ ಭೇಟಿಯಾಗಲು ಬಯಸುವ ರೋಗಿಯ ಯಾ ನಿಧನರಾದ ಸಂಬಂಧಿಕರ ಕುರಿತು ಸಮಗ್ರ ಮಾಹಿತಿ ಇರುವ ಸತ್ಯ ವಾuಟಿಜeಜಿiಟಿeಜ್ಮ ಲ ಹೊಂದಿರಬೇಕು. ಗಡಿಯಲ್ಲಿ ಪೆÇಲೀಸರು ಈ ದಾಖಲಾತಿಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವರು.
ಎಲ್ಲ ಜಿಲ್ಲೆಗಳಲ್ಲೂ ಪಾಸ್ ಸಂಬಂಧ ವಿಚಾರಗಳನ್ನು ನಿಭಾಯಿಸಲು ಒಬ್ಬ ಸಹಾಯಕ ಜಿಲ್ಲಾಧಿಕಾರಿಯ ನೇಮಕಾತಿಗೆ ಆಯಾ ಜಿಲ್ಲಾಧಿಕಾರಿಗಳಿಗೆ ಹೊಣೆ ನೀಡಲಾಗಿದೆ ಎಂದು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.

