ಕಾಸರಗೋಡು: ಕೃಷಿ ಇಲಾಖೆಯ "ನಮ್ಮ ಕೃಷಿ ನಮ್ಮ ಆರೋಗ್ಯ" ಎಂಬ ಸಂದೇಶದ ಜೀವನಿ ಯೋಜನೆಯ ಅಂಗವಾಗಿ ತರಕಾರಿ ಬೀಜಗಳ ವಿತರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಎಲ್ಲರೂ ಕೃಷಿಯತ್ತ ಮನಮಾಡುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಈ ಕಾಲಾವಧಿ ಸೂಕ್ತವಾಗಿದೆ ಎಂಬ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳ್ಳುತ್ತಿದೆ.
ಪ್ರಧಾನ ಕೃಷಿ ಅಧಿಕಾರಿ ಕೆ.ಸಜಿನಿ ಮೋಳ್ ಅವರು ಜಿಲ್ಲಾವಾರ್ತಾಧಿಕಾರಿ ಮಧುಸೂದನನ್ ಎಂ. ಅವರಿಗೆ ಬೀಜಗಳ ಪೆಕೆಟ್ ವಿತರಣೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಜನೆ ಪ್ರಕಾರ ಪ್ರತಿ ಕೃಷಿ ಭವನಗಳಲ್ಲಿ 7 ಸಾವಿರ ಬೀಜಗಳ ಪೆಕೆಟ್ ಗಳನ್ನು ಉಚಿತವಾಗಿ ನೀಡಲಾಗುವುದು. ಪಂಚಾಯತ್ ಅಧ್ಯಕ್ಷರ ಮತ್ತು ಸದಸ್ಯರ ಸಹಕಾರದೊಂದಿಗೆ ಬೀಜ ವಿತರಣೆ ನಡೆಯಲಿದೆ.
ಸಮಾರಂಭದಲ್ಲಿ ಕೃಷಿ ಸಹಾಯಕ ನಿರ್ದೇಶಕಿ ವೀಣಾರಾಣಿ, ಕೃಷಿ ಸಹಾಯಕ ನಿರ್ದೇಶಕಿ ಕೆ.ಎನ್.ಜ್ಯೋತಿ ಕುಮಾರಿ, ಜಿಲ್ಲಾ ವಾರ್ತಾ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.