ನವದೆಹಲಿ; ಕೊರೋನಾ ವೈರಸ್ ವ್ಯಾಪಕವಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮಾ.25ರಿಂದ ಘೋಷಿಸಿದ್ದ ದೇಶವ್ಯಾಪಿ ಲಾಕ್'ಡೌನ್ ಪರಿಣಾಮಗಳು ಗೋಚರವಾಗಲು ಆರಂಭವಾಗಿದೆ.
ರಾಷ್ಟ್ರವ್ಯಾಪಿ ಲಾಕ್'ಡೌನ್ ಜಾರಿಗೊಳಿಸುವುದಕ್ಕಿಂತ ಮೊದಲು ದೇಶದಲ್ಲಿ 3 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇದೀಗ 6.2 ದಿನಕ್ಕೆ ದುಪ್ಪಟ್ಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲವಯ ಮಾಹಿತಿ ನೀಡಿದೆ. ಮಾರ್ಚ್ 25ಕ್ಕಿಂತ ಮೊದಲ ಅಂಕಿಅಂಶ ಹಾಗೂ ಕಳೆದ 7 ದಿನಗಳ ಅಂಕಿಅಂಶಗಳನ್ನು ತುಲನೆ ಮಾಡಿ ಈ ಮಾಹಿತಿ ನೀಡಿದೆ.
19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವ ವೇಗ ಇನ್ನೂ ಕಡಿಮೆಯಿದೆ. ದೇಶದಾದ್ಯಂತ ಕೊರೋನಾ ಸೋಂಕಿತರು ಗುಣಮುಖರಾಗುವ ಪ್ರಮಾಣ ಕೂಡ ಸುಧಾರಿಸಿದೆ. ಈಗಲೂ ಬೇರೆ ಬೇರೆ ದೇಶಗಳಲ್ಲಿ ಗುಣಮುಖರಾಗುವ ದರಕ್ಕಿಂದ ನಮ್ಮದು ಹೆಚ್ಚಿದೆ. ಶೇ.80ರಷ್ಟು ಸೋಂಕಿತರು ಗುಣಮುಖರಾಗಿದ್ದು, ಶೇ.20ರಷ್ಟು ಸೋಂಕಿತರು ಮರಣ ಹೊಂದಿದ್ದಾರೆ. ಒಟ್ಟಾರೆ ಹೊಸ ಸೋಂಕುಗಳ ಪತ್ತೆ ಪ್ರಮಾಣದಲ್ಲಿ ಶೇ.40ರಷ್ಟು ಇಳಿಯಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.


