HEALTH TIPS

ಕೊರೋನಾದಂತಹ ತುರ್ತು ಸಂದರ್ಭಗಳು ಸ್ನೇಹಿತರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ: ಟ್ರಂಪ್ ಗೆ ಮೋದಿ ಪ್ರತಿಕ್ರಿಯೆ


      ನವದೆಹಲಿ: ಕೊರೋನಾದಂತಹ ತುರ್ತು ಸಂದರ್ಭಗಳು ಸ್ನೇಹಿತರನ್ನು ಇನ್ನಷ್ಟು ಹತ್ತಿರ ತರುತ್ತವೆ, ಭಾರತ ಮತ್ತು ಅಮೆರಿಕಾ ನಡುವಣ ಸಂಬಂಧ ಎಂದೆಂದಿಗೂ ಸಧೃಡವಾಗಿ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
        ಮಲೇರಿಯಾ ನಿಯಂತ್ರಕ  hydroxychloroquine  ಔಷಧಿಯನ್ನು ಅಮೆರಿಕಾಕ್ಕೆ ರಫ್ತು ಮಾಡಿದ್ದ ಭಾರತದ ಜನತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಈ ರೀತಿಯಲ್ಲಿ ಪ್ರತಿಕ್ರಿಸಿದ್ದಾರೆ.
      ಕೋವಿಡ್-19 ವಿರುದ್ಧ ಹೋರಾಡುವ  ಮಾನವೀಯತೆಯ ಹೋರಾಟಕ್ಕೆ ಭಾರತ ಸಾಧ್ಯವಾದಷ್ಟು ಎಲ್ಲವನ್ನೂ ಮಾಡಲಿದೆ. ಒಟ್ಟಾಗಿ ಮಾರಕ ಸಾಂಕ್ರಾಮಿಕ ರೋಗದ ವಿರುದ್ಧ ಗೆಲುವು ಸಾಧಿಸುತ್ತೇವೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Fully agree with you President @realDonaldTrump. Times like these bring friends closer. The India-US partnership is stronger than ever.

India shall do everything possible to help humanity's fight against COVID-19.

We shall win this together. https://twitter.com/realdonaldtrump/status/1247950299408498693 

    ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಕೈ ಮೀರಿದ  ಸಂದರ್ಭಗಳಲ್ಲಿ  ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ.   hydroxychloroquine  ಔಷಧಿಯನ್ನು ಅಮೆರಿಕಾಕ್ಕೆ ರಫ್ತು ಮಾಡಿರುವ ಭಾರತದ ಜನತೆ  ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಮರೆಯಲಾಗದು ಎಂದು ಹೇಳಿ ಧನ್ಯವಾದ ಹೇಳಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries